ಹಾವೇರಿ [ಸೆ.19]:   ಚುನಾವಣೆ ಸನ್ನಿಹಿತ ಎಂದು ನಾನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ರಾಜ್ಯ ಸರ್ಕಾರದ ಭವಿಷ್ಯದ ಬಗ್ಗೆ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಸದ್ಯ ಹದಿನಾಲ್ಕು, ಹದಿನೈದು ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ, ಬಿತ್ತಿದ ಬೆಳೆ ಪೈರು ಕೊಯ್ದಾರು, ಬೆಳೆವೊಂದು, ಫಸಲು ಇನ್ನೊಂದು, ಯಾವುದೇ ಸರ್ಕಾರ ಬಂದರೂ ಮತ ಕೇಳುತ್ತಾರೆ ಎಂದು ನಾನು ಮೊದಲೇ ಭವಿಷ್ಯ ಹೇಳಿದ್ದೇನೆ. ಈ ಹೇಳಿಕೆ ಚುನಾವಣೆ ಪೂರ್ವದಲ್ಲಿ ನುಡಿದಿದ್ದೆ.  ಇದೀಗ ಮೈತ್ರಿ ಸರಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ, ಕಾದು ನೋಡಿ ಎನ್ನುವ ಮೂಲಕ ಸರಕಾರ ಪತನವಾಗುತ್ತೆ ಎಂದು ಪರೋಕ್ಷವಾಗಿ ನುಡಿದರು‌. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆರೆಯ ಬಗ್ಗೆ ಭವಿಷ್ಯ : ರಾಜ್ಯದಲ್ಲಿ ಈಗಾಗಲೇ ಪ್ರವಾಹ ಬಂದು ಹಲವು ರೀತಿಯ ಅನಾಹುತವನ್ನು ಜನರು ಎದುರಿಸಿದ್ದಾರೆ.  ಇನ್ನೂ ಪ್ರವಾಹದ ಲಕ್ಷಣ ಕಾರ್ತಿಕ ಕಳೆಯುವವರೆಗೂ ಇರಲಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದರು.

 ಇನ್ನೂ ಭಾರತದ ಮೇಲೆ ಪಾಕ್ ಯುದ್ಧೋನ್ಮಾದ ವಿಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ದಾಯಾದಿಗಳ ಕಲಹ ಮೊದಲಿನಿಂದಲೂ ಬಂದಿದೆ ಇದು ಅದರಂತೆ ಎಂದು ಹೇಳಿದರು.