ಮುಂಬೈಯಿಂದ ಬಂದು ಮೃತಪಟ್ಟವ್ಯಕ್ತಿಗೆ ಕೊರೋನಾ ದೃಢ: ಡಿಸಿ

ಮುಂಬೈನಿಂದ ತೆಕ್ಕಟ್ಟೆಗೆ ಗುರುವಾರ ಬಂದಿದ್ದ ನಾಲ್ವರ ಪೈಕಿ 54 ವರ್ಷ ಪ್ರಾಯದ ಓರ್ವ ವ್ಯಕ್ತಿ ಸಂಜೆ ಮೃತಪಟ್ಟಿದ್ದು, ಅವರ ಮೃತದೇಹದ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್‌ ಸೋಂಕು ಇರುವುದು ದೃಢವಾಗಿದೆ. ಇದರಿಂದಾಗಿ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 2ಕ್ಕೆ ಏರಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

Man who died after returning from mumbai confirmed covid19 positive

ಕುಂದಾಪುರ(ಜೂ.20): ಮುಂಬೈನಿಂದ ತೆಕ್ಕಟ್ಟೆಗೆ ಗುರುವಾರ ಬಂದಿದ್ದ ನಾಲ್ವರ ಪೈಕಿ 54 ವರ್ಷ ಪ್ರಾಯದ ಓರ್ವ ವ್ಯಕ್ತಿ ಸಂಜೆ ಮೃತಪಟ್ಟಿದ್ದು, ಅವರ ಮೃತದೇಹದ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್‌ ಸೋಂಕು ಇರುವುದು ದೃಢವಾಗಿದೆ. ಇದರಿಂದಾಗಿ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 2ಕ್ಕೆ ಏರಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

ಇಲ್ಲಿನ ತಾಲೂಕು ಆರೋಗ್ಯ ಇಲಾಖೆ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ) ವತಿಯಿಂದ ನೀಡಲಾದ ಗಂಟಲು ದ್ರವ ಮಾದರಿ ಸಂಗ್ರಹ ‘ಸೆಲ್ಕೋ ಕಿಯೋಸ್ಕ್‌’ ಸೌರ ಚಾಲಿತ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ: ಸೋಂಕಿತರ ಸಂಖ್ಯೆ 1050ಕ್ಕೆ ಏರಿಕೆ, ಇಬ್ಬರು ಸಾವು

ಮುಂಬೈಯಿಂದ ಬಂದಿದ್ದ ವ್ಯಕ್ತಿ ಸ್ಥಳೀಯ ಪರೀಕ್ಷಾ ಕೇಂದ್ರದಲ್ಲಿ ದೇಹದ ಉಷ್ಣತೆಯನ್ನು ಪರೀಕ್ಷಿಸಿ ಹೋಂ ಕ್ವಾರಂಟೈನ್‌ಗಾಗಿ ಮನೆಗೆ ತೆರಳಿದ್ದರು. ಸಂಜೆ ವೇಳೆಗೆ ಕಾಯಿಲೆ ಉಲ್ಬಣವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ಅವರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಮನೆಯ ಸುತ್ತಮುತ್ತಲ ಪ್ರದೇಶವನ್ನು ಕಂಟೈನ್ಮೆಂಟ್‌ ವಲಯವಾಗಿ ಹಾಗೂ ಪರಿಸರವನ್ನು ಬಫರ್‌ ವಲಯವಾಗಿ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿ ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾಗಿರುವ 1039 ಸೋಂಕಿನ ಪ್ರಕರಣಗಳಲ್ಲಿ ಕೇವಲ 92 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಈ ಪೈಕಿ ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿಯೇ ಗರಿಷ್ಠ 755 ಪ್ರಕರಣಗಳು ಪತ್ತೆಯಾಗಿತ್ತು. ಇದರಲ್ಲಿ ಕೇವಲ 59 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಶೇಕಡಾವಾರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರನ್ನು ಗುಣಪಡಿಸುವಲ್ಲಿ ಇಲ್ಲಿನ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್‌ ರೆಬೆಲ್ಲೋ, ಡಾ.ನಾಗೇಶ್‌, ಡಾ.ಕೆ.ಪ್ರೇಮಾನಂದ, ಡಾ.ಸನ್ಮಾನ್‌ ಶೆಟ್ಟಿಮುಂತಾದ ವೈದ್ಯರ ತಂಡದ ನೇತೃತ್ವದಲ್ಲಿ ಕೊರೋನಾ ವಾರಿಯರ್ಸ್‌ ಹಗಲಿರುವ ಸೇವೆಯನ್ನು ಮಾಡಿ ಮಾದರಿಯಾಗಿದ್ದಾರೆ. ಕುಂದಾಪುರದ ಡಾ.ಜಿ.ಶಂಕರ್‌ ಆಸ್ಪತ್ರೆಯನ್ನು ಆಮ್ಲಜನಕ, ವೆಂಟಿಲೇಟರ್‌ ಮುಂತಾದ ಸೌಲಭ್ಯಗಳನ್ನು ಅಳವಡಿಸಿ ಸುಸಜ್ಜಿತ ಕೋವಿಡ್‌-19 ಆಸ್ಪತ್ರೆಯನ್ನಾಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದೋಹಾ-ಕತಾರಿಂದ ಮಂಗಳೂರಿಗೆ 183 ಮಂದಿ ಆಗಮನ

ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು, ಸೆಲ್ಕೋ ಕಂಪನಿಯ ವಲಯ ಮಹಾಪ್ರಬಂಧಕ ಗುರುಪ್ರಸಾದ್‌ ಶೆಟ್ಟಿ, ಭಾರತೀಯ ವಿಕಾಸ್‌ ಟ್ರಸ್ಟ್‌ನ ಸಿಇಒ ಮನೋಹರ್‌ ಕೆ., ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್‌ ರೆಬೆಲ್ಲೋ, ಡಾ.ನಾಗೇಶ್‌ ಇದ್ದರು.

Latest Videos
Follow Us:
Download App:
  • android
  • ios