ದೋಹಾ-ಕತಾರಿಂದ ಮಂಗಳೂರಿಗೆ 183 ಮಂದಿ ಆಗಮನ
ಕೊರೋನಾ ಲಾಕ್‌ಡೌನ್ ಬಳಿಕ ಸಂಕಷ್ಟದಲ್ಲಿರುವ ದೋಹಾ-ಕತಾರ್‌ನ ಅನಿವಾಸಿ ಕನ್ನಡಿಗರ ಅವಿರತ ಪ್ರಯತ್ನಕ್ಕೆ ಕೊನೆಗೂ ಶುಕ್ರವಾರ ಯಶಸ್ಸು ಸಿಕ್ಕಿದೆ. ಬೆಂಗಳೂರು ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಮೊದಲ ವಿಮಾನ ಕತಾರ್‌ನಿಂದ ಮಂಗಳೂರಿಗೆ ಬಂದಿಳಿದಿದೆ. 183 ಪ್ರಯಾಣಿಕರು ತಾಯ್ನಾಡು ತಲುಪಿದ್ದಾರೆ.
ಕೊರೋನಾ ಲಾಕ್‌ಡೌನ್ ಬಳಿಕ ಸಂಕಷ್ಟದಲ್ಲಿರುವ ದೋಹಾ-ಕತಾರ್‌ನ ಅನಿವಾಸಿ ಕನ್ನಡಿಗರ ಅವಿರತ ಪ್ರಯತ್ನಕ್ಕೆ ಕೊನೆಗೂ ಶುಕ್ರವಾರ ಯಶಸ್ಸು ಸಿಕ್ಕಿದೆ. ಬೆಂಗಳೂರು ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಮೊದಲ ವಿಮಾನ ಕತಾರ್‌ನಿಂದ ಮಂಗಳೂರಿಗೆ ಬಂದಿಳಿದಿದೆ.
ಸುಮಾರು 183 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್(ಐಎಕ್ಸ್ 1822) ವಿಶೇಷ ವಿಮಾನ ಶುಕ್ರವಾರ ಮಧ್ಯಾಹ್ನ ಕತಾರ್ ಕಾಲಮಾನ 12 ಗಂಟೆಗೆ ಹೊರಟು ಮಂಗಳೂರಿಗೆ ಸಂಜೆ 6.35ಕ್ಕೆ ತಲುಪಿತು.
ಈ ವಿಮಾನದಲ್ಲಿ ದಕ್ಷಿಣ ಕನ್ನಡದ 140, ಉಡುಪಿಯ 35 ಹಾಗೂ ಉತ್ತರ ಕನ್ನಡ ಮತ್ತು ಮೈಸೂರು ಹಾಗೂ ಚಿಕ್ಕಮಗಳೂರಿನ ಪ್ರಯಾಣಿಕರಿದ್ದಾರೆ.
ಕತ್ತಾರ್‌ನಲ್ಲಿ ಡ್ರೈವರ್ ಆಗಿ ದುಡಿಯುತ್ತಿದ್ದ ಬೆಳ್ತಂಗಡಿ ನಿವಾಸಿ ಅಶೋಕ ಥಾಮಸ್ ಡಿಸೋಜ(34) ಅವರು 10 ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಮೃತದೇಹವನ್ನೂ ವಿಮಾನದ ಮೂಲಕ ಕಳುಹಿಸಲಾಗಿದೆ.
ಇವರಲ್ಲಿ 14 ಗರ್ಭಿಣಿಯರು, ಮಹಿಳೆಯರು, 5 ಶಿಶುಗಳು, ಅಶಕ್ತರು, ಅನಾರೋಗ್ಯ ಪೀಡಿತರು ಸೇರಿದ್ದಾರೆ. ಜೊತೆಗೆ ಮೃತಪಟ್ಟಮಂಗಳೂರಿನ ಪುಂಜಾಲಕಟ್ಟೆನಿವಾಸಿ ಅಶೋಕ್ ಥಾಮಸ್ ಡಿಸೋಜಾ(34) ಅವರ ಮೃತದೇಹವನ್ನೂ ತರಲಾಗಿದೆ.
ಕತಾರ್‌ನ ಭಾರತೀಯ ಸಮುದಾಯ ಹಿತೈಷಿ ವೇದಿಕೆ(ಐಸಿಬಿಎಫ್) ಹಾಗೂ ಕರ್ನಾಟಕ ಸಂಘ ದೋಹಾ ಕತಾರ್ ಇವರ ಮುತುವರ್ಜಿಯಲ್ಲಿ ಕತಾರ್‌ನಿಂದ ಮಂಗಳೂರಿಗೆ ಹೊರಟ ಕೇಂದ್ರ ಸರ್ಕಾರ ಕಾರ್ಯಾಚರಣೆಯ ಮೊದಲ ವಿಮಾನ ಇದಾಗಿದೆ.
ವಿಶೇಷ ವಿಮಾನ ಕಾರ್ಯಾಚರಣೆ ಹಿಂದೆ ಅಲ್ಲಿನ ಅನಿವಾಸಿ ಭಾರತೀಯರಾದ ಐಸಿಬಿಎಫ್ ಜಂಟಿ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಬ್ಬಾಗಿಲು, ಉಪಾಧ್ಯಕ್ಷ ಮಹೇಶ್ ಗೌಡ, ಕತಾರ್ ಕನ್ನಡ ಸಂಘ ಅಧ್ಯಕ್ಷ ನಾಗೇಶ್ ರಾವ್ ಮತ್ತಿತರರ ಅವಿರತ ಪ್ರಯತ್ನ ಇದೆ.
ಕತಾರ್‌ನಿಂದ ಆಗಮಿಸುವವರ ಪೈಕಿ ಮೂಲತಃ ಬೀದರ್‌ನ ಇಸ್ಮಾಯಿಲ್ ಮತ್ತು ಚಿತ್ರದುರ್ಗದ ಹಲ್ದಾ ಎಂಬ ಮಹಿಳೆಯ ವಿಮಾನ ಟಿಕೆಟ್‌ನ ಮೊತ್ತವನ್ನು ಸ್ವತಃ ಸುಬ್ರಹ್ಮಣ್ಯ ಹೆಬ್ಬಾಗಿಲು ಭರಿಸಿದ್ದಾರೆ. ಅನಾರೋಗ್ಯಕ್ಕೊಳಗಾಗಿದ್ದ ಇಸ್ಮಾಯಿಲ್ ಅವರ ಚಿಕಿತ್ಸೆ ವೆಚ್ಚವನ್ನೂ ಸುಬ್ರಹ್ಮಣ್ಯ ಹೆಬ್ಬಾಗಿಲು ಭರಿಸಿದ್ದಾರೆ.
ಇದೇ ರೀತಿ ಮನೆಗೆಲಸ ಮಾಡಿಕೊಂಡಿದ್ದ ಬಲ್ದಾ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದರು. ಅವರಿಗೆ ಮೂರು ತಿಂಗಳು ಆಹಾರ ಹಾಗೂ ವಸತಿ ವ್ಯವಸ್ಥೆಯನ್ನು ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಅವರ ತಂಡ ಕಲ್ಪಿಸಿತ್ತು.