ಉಡುಪಿ(ಜೂ.20): ಉಡುಪಿ ಜಿಲ್ಲೆಯಲ್ಲಿ ಗುರುವಾರ ಯಾವುದೇ ಕೊರೋನಾ ಪ್ರಕರಣಗಳಿರಲಿಲ್ಲ. ಆದರೆ ಶುಕ್ರವಾರ 11 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲೀಗ ಒಟ್ಟು ಸೋಂಕಿತರ ಸಂಖ್ಯೆ 1050ಕ್ಕೆ ಏರಿದೆ.

ಗುರುವಾರ ರಾತ್ರಿ ಕುಂದಾಪುರದ 54 ವರ್ಷದ ಒಬ್ಬ ಕೊರೋನಾ ಸೋಂಕಿತ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟಸೋಂಕಿತರ ಸಂಖ್ಯೆ 2 ಆಗಿದೆ. ಈ ಹಿಂದೆ ಮೇ 15ರಂದು 51 ವರ್ಷದ ಕುಂದಾಪುರದ ಸೊಂಕಿತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಮೃತರಿಬ್ಬರೂ ಮುಂಬೈಯಿಂದ ಹಿಂದಕ್ಕೆ ಬಂದವರಾಗಿದ್ದಾರೆ.

ಆಗುಂಬೆ ಘಾಟಿಯಲ್ಲಿ ಸಂಚಾರಕ್ಕೆ ‍ಷರತ್ತು: ಯಾವೆಲ್ಲ ವಾಹನ ಹೋಗಬಹುದು..?

ಶುಕ್ರವಾರ 10 ಮಂದಿ ಸೋಂಕಿತರು ಗುಣಮುಖರಾಗಿದ್ದು ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 950 ಮಂದಿ ಬಿಡುಗಡೆಯಾಗಿದ್ದಾರೆ. 97 ಮಂದಿ ಮಾತ್ರ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ದ.ಕ. ಜಿಲ್ಲೆಯವರು, ಅವರನ್ನು ಅಲ್ಲಿಗೆ ಕಳುಹಿಸಲಾಗಿದೆ.

ದಕ್ಷಿಣ ಕನ್ನಡ​ದಲ್ಲಿ 206 ಮಂದಿ ಕೊರೋನಾ ಗುಣಮುಖರು ಬಿಡುಗಡೆ

ಶುಕ್ರವಾರ 87 ಮಂದಿಯ ಗಂಟಲದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಲ್ಲಿ 49 ಮಂದಿ ಮುಂಬೈ, ಹಾಟ್‌ಸ್ಪಾಟ್‌ನಿಂದ ಬಂದವರು, 10 ಮಂದಿ ಸೋಂಕಿತರ ಸಂಪರ್ಕದಲ್ಲಿದ್ದವರು, 17 ಮಂದಿ ಕೊರೋನಾ ಶಂಕಿತರು, 11 ಮಂದಿ ಕೊರೋನಾ ಲಕ್ಷಣಗಳಿರುವವರಾಗಿದ್ದಾರೆ. ಶುಕ್ರವಾರ 43 ವರದಿಗಳು ಬಂದಿದ್ದು, ಅವರಲ್ಲಿ 11 ಪಾಸಿಟಿವ್‌ ಆಗಿದ್ದರೆ ಉಳಿದವು ನೆಗೆಟಿವ್‌ ಆಗಿವೆ. ಇನ್ನೂ 231 ವರದಿಗಳು ಲ್ಯಾಬಿನಿಂದ ಬರಬೇಕಾಗಿವೆ.

ಮನೆಯಲ್ಲಿ ಹರಡಿದೆ ಸೋಂಕು:

ಶುಕ್ರವಾರ ಪತ್ತೆಯಾದ ಸೋಂಕಿತರಲ್ಲಿ 6 ಮಂದಿ ಪುರುಷರು, ಮೂವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ 3 ಮಂದಿ ಈ ಹಿಂದೆ ಸೋಂಕು ಪತ್ತೆಯಾಗಿದ್ದ 51 ವರ್ಷ ವಯಸ್ಸಿನ ಮುಂಬೈಯಿಂದ ಬಂದ ಮಹಿಳೆ (ಪಿ7024)ಯ ಮನೆಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪಡೆದಿದ್ದಾರೆ. ಇನ್ನಿಬ್ಬರು ಕೂಡ ಸೋಂಕಿತರಾಗಿದ್ದ 63 ವರ್ಷ ವಯಸ್ಸಿನ ಮುಂಬೈಯಿಂದ ಬಂದ ಪುರುಷನ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪಡೆದಿದ್ದಾರೆ. ಉಳಿದ ಸೋಂಕಿತರಲ್ಲಿ 4 ಮಂದಿ ಮಹಾರಾಷ್ಟ್ರದಿಂದ ಮತ್ತು ಇಬ್ಬರು ತಮಿಳುನಾಡುನಿಂದ ಉಡುಪಿಗೆ ಬಂದವರಾಗಿದ್ದಾರೆ.