Asianet Suvarna News Asianet Suvarna News

ಟಿಕೆಟ್‌ಗಾಗಿ ವಿಷ ಸೇವನೆ ಬೆದರಿಕೆ, ನಗರಸಭೆ ನಾಮಪತ್ರ ಸಲ್ಲಿಕೆಯಲ್ಲಿ ಹೈಡ್ರಾಮ

ಸ್ಥಳೀಯ ನಾಯಕರ ಕೈ ಮೀರಿದ ಕಾರಣ ಪ್ರಮುಖರಿಂದಲೇ ಮೂವರಿಗೂ ಹೇಳಿಸಿದ್ದು, ಇದರಿಂದಲೂ ಉಪಯೋಗವಾಗಿಲ್ಲ ಎನ್ನಲಾಗಿದೆ. ಕೊನೆಗೆ ಇದೇ ವಾರ್ಡಿನಿಂದ ಮಾಜಿಯಾಗಿದ್ದ ಸದಸ್ಯರು ಬಿ ಫಾರಂ ನೀಡದಿದ್ದರೆ ವಿಷ ಸೇವಿಸುವುದಾಗಿ ನೇರವಾಗಿಯೇ ಬೆದರಿಕೆ ಹಾಕಿದರು ಎನ್ನಲಾಗಿದೆ. ಇದರಿಂದ ಬೇರೆ ದಾರಿ ಕಾಣದೆ ಅದೇ ವ್ಯಕ್ತಿಗೆ ಬಿ ಫಾರಂ ವಿತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

Man threats to consume poison if he dont get b form in chikkaballapur corporation polls
Author
Bangalore, First Published Jan 29, 2020, 12:50 PM IST

ಚಿಕ್ಕಬಳ್ಳಾಪುರ(ಜ.29): ಸ್ಥಳೀಯ ನಾಯಕರ ಕೈ ಮೀರಿದ ಕಾರಣ ಪ್ರಮುಖರಿಂದಲೇ ಮೂವರಿಗೂ ಹೇಳಿಸಿದ್ದು, ಇದರಿಂದಲೂ ಉಪಯೋಗವಾಗಿಲ್ಲ ಎನ್ನಲಾಗಿದೆ. ಕೊನೆಗೆ ಇದೇ ವಾರ್ಡಿನಿಂದ ಮಾಜಿಯಾಗಿದ್ದ ಸದಸ್ಯರು ಬಿ ಫಾರಂ ನೀಡದಿದ್ದರೆ ವಿಷ ಸೇವಿಸುವುದಾಗಿ ನೇರವಾಗಿಯೇ ಬೆದರಿಕೆ ಹಾಕಿದರು ಎನ್ನಲಾಗಿದೆ. ಇದರಿಂದ ಬೇರೆ ದಾರಿ ಕಾಣದೆ ಅದೇ ವ್ಯಕ್ತಿಗೆ ಬಿ ಫಾರಂ ವಿತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆಯ ಮೊದಲ ಹಂತವಾದ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಟಿಕೆಟ್‌ಗಾಗಿ ನಾನಾ ಕಸರತ್ತುಗಳು ನಡೆಸಿರುವ ಕೆಲ ಆಕಾಂಕ್ಷಿಗಳು ಟಿಕೆಟ್‌ ದೊರೆಯದ ಕಾರಣ ಪಕ್ಷೇತರರಾಗಿಯೂ ಸ್ಪರ್ಧಿಸುವ ಮೂಲಕ ಚುನಾವಣೆಯ ಕುತೂಹಲ ಹೆಚ್ಚಿಸಿದ್ದಾರೆ.

ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳು

ಒಟ್ಟು 31 ವಾರ್ಡುಗಳಿರುವ ಚಿಕ್ಕಬಳ್ಳಾಪುರ ನಗರಸಭೆಗೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ದುಂಬಾಲು ಬಿದ್ದು ಬಿ ಫಾರಂ ಗಿಟ್ಟಿಸಿಕೊಂಡು ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದ ಕಾರಣ ಅವರನ್ನು ಸಮಾಧಾನ ಮಾಡಲು ಮುಖಂಡರ ಜೊತೆಗೆ ಶಾಸಕರೂ ಹರಸಾಹಸ ಪಟ್ಟಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ: ಜೀವಂತ ಸಮಾಧಿಯಾಗ ಹೊರಟ ಢೋಂಗಿ ಬಾಬಾನಿಗೆ ಬಿತ್ತು ಒದೆ

ನಗರದ ಒಂದು ವಾರ್ಡಿಗೆ ಪ್ರಮುಖ ಪಕ್ಷವೊಂದರಿಂದ ಮೂವರು ಆಕಾಂಕ್ಷಿಗಳಿದ್ದು, ಇವರಲ್ಲಿ ಒಬ್ಬರಿಗೆ ಮಾತ್ರ ಬಿ ಫಾರಂ ವಿತರಿಸುವ ಮೂಲಕ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕಿತ್ತು. ಆದರೆ ಮೂವರೂ ತಮಗೇ ಟಿಕೆಟ್‌ ಬೇಕು ಎಂಬ ಹಠ ಮಾಡಿದ ಕಾರಣ ಆಕಾಂಕ್ಷಿಗಳನ್ನು ಸಮಾಧಾನ ಮಾಡಲಾಗದೆ ನಾಯಕರು ಹೈರಾಣಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಪಕ್ಷಗಳಿಂದ ಬಿ ಫಾರಂ ಪಡೆದು ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಹಲವಾರು ಮಂದಿ ಮುಗಿಬಿದ್ದಿದ್ದು, ಬಿಜೆಪಿಯಲ್ಲಿ ಟಿಕೆಟ್‌ ದೊರೆಯುವುದಿಲ್ಲ ಎಂಬುದನ್ನು ಅರಿತು ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದರಲ್ಲಿ ಗೆಲ್ಲುವ ಕುದುರೆಗಳನ್ನು ಆರಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವರಿಷ್ಠರು ಟಿಕೆಟ್‌ ವಿತರಿಸಲು ಕ್ರಮ ವಹಿಸಿದ್ದಾರೆ.

ಹಣ ಮಾಡಲೂ ನಾಮಪತ್ರ!

ವಾರ್ಡುಗಳಲ್ಲಿ ಹಲವರು ಹಣ ಮಾಡಲೂ ಪ್ರಸ್ತುತ ನಗರಸಭಾ ಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರಸ್ತುತ ಮೀಸಲಾತಿಯಂತೆ ನಾಮಪತ್ರ ಸಲ್ಲಿಸಿರುವ ಹಲವರು, ಅದೇ ವಾರ್ಡಿನಲ್ಲಿ ಪ್ರಮುಖ ಪಕ್ಷಗಳಿಂದ ನಾಮಪತ್ರ ಸಲ್ಲಿಸಿರುವ ಮತ್ತು ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳಿಂದ ವ್ಯವಹಾರ ಕುದುರಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ವ್ಯವಹಾರದಂತೆ ನಾಮಪತ್ರ ವಾಪಸ್‌ ಪಡೆಯಲು ಇಂತಿಷ್ಟುಹಣ ನೀಡಬೇಕು. ಕೇಳಿದ ಹಣ ನೀಡಿದರೆ, ನಾಮಪತ್ರ ವಾಪಸ್‌ ಪಡೆಯುವ ಜೊತೆಗೆ ವಾರ್ಡಿನಲ್ಲಿ ನಿಮನ್ನೇ ಬೆಂಬಲಿಸುವುದಾಗಿ ಕಾಟಾಚಾರಕ್ಕೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಈಗಾಗಲೇ ವ್ಯವಹಾರದ ಮಾತುಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ. ಕಡಿಮೆ ಮತಗಳಿರುವ ಕಾರಣ ಮತ್ತು ವಾರ್ಡಿನಲ್ಲಿ ವಿನಾಕಾರಣ ಮತ್ತೊಬ್ಬ ಅಭ್ಯರ್ಥಿಯನ್ನು ಎದುರಿಸುವ ತಲೆನೇವು ಯಾಕೆ ಎಂಬ ನಿರ್ಧಾರಕ್ಕೆ ಬಂದಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಇವರೊಂದಿಗೆ ವ್ಯವಹಾರ ಕುದುರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ 96 ನಾಮಪತ್ರ, ಪಕ್ಷೇತರರೇ ಅಧಿಕ

ಹೀಗೆ ಕಾಟಾಚಾರಕ್ಕೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳನ್ನು ಸಮಾಧಾನಪಡಿಸಿ, ಜ.31ರಳಗೆ ಅವರಿಂದ ನಾಮಪತ್ರ ವಾಪಸ್‌ ಪಡೆಯುವಂತೆ ಮಾಡಿದಲ್ಲಿ ಸ್ವಲ್ಪ ಮಟ್ಟಿಗೆ ಆತಂಕ ದೂರವಾಗಲಿದ್ದು, ಗೆಲ್ಲಲು ಮಾರ್ಗ ಸುಲಭವಾಗಲಿದೆ ಎಂಬ ಕಾರಣಕ್ಕಾಗಿ ನಾಮಪತ್ರ ಸಲ್ಲಿಸಿರುವ ಇತರೆ ಅಭ್ಯರ್ಥಿಗಳೊಂದಿಗೆ ಈಗಾಗಲೇ ಮಾತುಕತೆಗಳು ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ.

ಶಾಸಕರೇ ಮುಂದೆ ನಿಂತು ನಾಮಪತ್ರ!

ನಗರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜ.21ರಿಂದಲೇ ಸಮಯ ನಿಗದಿಯಾಗಿದ್ದರೂ ಕೊನೆಯ ಕ್ಷಣದವರೆಗೂ ಟಿಕೆಟ್‌ ಹಂಚಿಕೆ, ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಭೂಮಿಪೂಜೆ ಸೇರಿದಂತೆ ಇತರೆ ಕೆಲಸಗಳಲ್ಲಿ ನಿರತರಾಗಿದ್ದ ಶಾಸಕ ಡಾ.ಕೆ. ಸುಧಾಕರ್‌, ಮಂಗಳವಾರ ಸ್ವತಃ ನಾಮಪತ್ರ ಸಲ್ಲಿಕಾ ಕೇಂದ್ರದತ್ತ ಆಗಮಿಸಿದರು. 2ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿರುವ ನಗರಸಭೆ ಮಾಜಿ ಸದಸ್ಯೆ ಜಯಮ್ಮ ಅವರ ಪರವಾಗಿ ತಮ್ಮ ಬೆಂಬಲಿಗರೊಂದಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿದ ಶಾಸಕರು ನಾಮಪತ್ರ ಸಲ್ಲಿಸಿ, ತೆರಳಿದರು.

-ಅಶ್ವತ್ಥನಾರಾಯಣ ಎಲ್‌.

Follow Us:
Download App:
  • android
  • ios