ನಾದಿನಿ ಮೇಲೆ ಅತ್ಯಾಚಾರಕ್ಕೆ 10 ವರ್ಷ ಜೈಲು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Aug 2018, 5:30 PM IST
Man sentenced to 10 years in jail for Sexual harassment case
Highlights

ಇದೇ ರೀತಿ ಆರು ತಿಂಗಳವರೆಗೆ ನಿರಂತರವಾಗಿ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ. ಅಪ್ರಾಪ್ತೆಯ ದೈಹಿಕ ಬದಲಾವಣೆಯಿಂದ ಅನುಮಾನಗೊಂಡ ಆಕೆಯ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅಳಿಯನ ವಿರುದ್ಧ ವಿಜಯನಗರ ಠಾಣೆಗೆ ದೂರು ನೀಡಿದ್ದರು.

ಮೈಸೂರು[ಆ.31]: ಅಪ್ರಾಪ್ತೆ ನಾದಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಗೆ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 10 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಧಿಸಿ ತೀರ್ಪು ನೀಡಿದೆ.

ಕೆ.ಆರ್. ನಗರ ತಾಲೂಕಿನ ಮಾಯಿ ಗೌಡನಹಳ್ಳಿಯ ಮಹದೇವ(28) ಶಿಕ್ಷೆಗೆ ಒಳಗಾದವನು. ಈತ ಹೂಟಗಳ್ಳಿಯ ಕೈಗಾರಿಕಾ ಪ್ರದೇಶದಲ್ಲಿನ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿಯ ವಸತಿ ಗೃಹದಲ್ಲಿ ವಾಸವಿದ್ದ. 2015ರ ಮಾರ್ಚ್ 20ರಂದು ಊರಿನಿಂದ ಮನೆಗೆ ಬಂದ ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮಹ ದೇವ, ನನ್ನೊಂದಿಗೆ ಸಹಕರಿಸದಿದ್ದರೆ ನಿನ್ನ ಅಕ್ಕ, ಅಕ್ಕನ ಮಗು ಮತ್ತು ಮನೆ ಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದ.

ಇದೇ ರೀತಿ ಆರು ತಿಂಗಳವರೆಗೆ ನಿರಂತರವಾಗಿ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ. ಅಪ್ರಾಪ್ತೆಯ ದೈಹಿಕ ಬದಲಾವಣೆಯಿಂದ ಅನುಮಾನಗೊಂಡ ಆಕೆಯ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅಳಿಯನ ವಿರುದ್ಧ ವಿಜಯನಗರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ. ಎಸ್. ಜಯಶ್ರೀ ಅವರು, ನೊಂದ ಬಾಲಕಿ ಜನ್ಮ ನೀಡಿದ ಮಗುವಿನ ಜೈವಿಕ ತಂದೆ ಮಹದೇವ ಎಂಬದನ್ನು ಡಿಎನ್‌ಎ ಪರೀಕ್ಷೆ ವರದಿಯನ್ನು ಪರಿಗಣಿಸಿ, ಆರೋಪಿಗೆ 10 ವರ್ಷ ಶಿಕ್ಷೆಯೊಂದಿಗೆ 55 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಸಿ. ಶಿವರುದ್ರಸ್ವಾಮಿ ವಾದ ಮಂಡಿಸಿದರು.

 

loader