ಬೆಂಗಳೂರು(ಜು.24): ನಿಮಗೆ ಕೊರೋನಾ ಪಾಸಿಟಿವ್‌ ಅಂದಾಗ ಅರೇ ಕ್ಷಣ ಜೀವ ಹೋಗಿ ಬಂದಂತಾಗಿತ್ತು. ಆಸ್ಪತ್ರೆಗೆ ದಾಖಲಾದ ಬಳಿಕ ಈ ಸೋಂಕಿಗೆ ಹೆದರುವ ಅಗತ್ಯವಿಲ್ಲ ಎಂಬುದು ಗೊತ್ತಾಯಿತು. ಕೊರೋನಾ ಸೋಂಕಿಗೆ ಒಳಗಾದರೆ ಚಿಂತಿಸುವ ಅಗತ್ಯವಿಲ್ಲ!

ಇದು ಕೊರೋನಾ ಸೋಂಕನ್ನು ಧೈರ್ಯವಾಗಿ ಎದುರಿಸಿ ಗುಣಮುಖರಾಗಿರುವ ಬೆಂಗಳೂರು ಜಲಮಂಡಳಿಯ ಮಹಿಳಾ ಕಿರಿಯ ಇಂಜಿನಿಯರ್‌ ಅವರ ಅನುಭವದ ಮಾತು. ತಾನು ಹೇಗೆ ಕೊರೋನಾ ಸೋಂಕು ಜಯಿಸಿದೆ ಎಂಬುದರ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡರು.

ಕೊರೋನಾ ಗೆದ್ದ ರಾಜ್ಯದ ಮೊದಲ ಶತಾಯುಷಿ: ಮನೆ​ಯಲ್ಲೇ ಚಿಕಿ​ತ್ಸೆ ಪಡೆದು 100ರ ವೃದ್ಧೆ ಗುಣಮುಖ

ಜು.15ರಂದು ಕೊಂಚ ಶೀತವಾಗಿ ಮೂಗು ಕಟ್ಟಿಕೊಂಡಿತ್ತು. ಸಾಮಾನ್ಯ ಶೀತ ಎಂದು ಭಾವಿಸಿ ಮಾತ್ರೆ ಸೇವಿಸಿ ಸುಮ್ಮನಾಗಿದ್ದೆ. ಮಾರನೇ ದಿನ ಅಡುಗೆ ಮಾಡುವಾಗ ಖಾದ್ಯಗಳ ವಾಸನೆ ಗೊತ್ತಾಗಲಿಲ್ಲ. ಆಗ ಕೊಂಚ ಆತಂಕವಾಗಿತ್ತು. ವಾಸನೆ ಅರಿವಿಗೆ ಬಾರದಿರುವುದು ಕೊರೋನಾ ಸೋಂಕಿನ ಲಕ್ಷಣಗಳಲ್ಲಿ ಒಂದು ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೆ.

ಹೀಗಾಗಿ ಜು.17ರಂದು ಕೊರೋನಾ ಪರೀಕ್ಷೆ ಮಾಡಿಸಿದೆ. ಈ ಪರೀಕ್ಷಾ ವರದಿಯಲ್ಲಿ ಸೋಂಕಿರುವುದು ದೃಢಪಟ್ಟಿತ್ತು. ಆ ಕ್ಷಣ ಹೇಗಿತ್ತೆಂದರೆ, ಒಂದು ಕ್ಷಣ ಜೀವ ಹೋಗಿ ಬಂದಂತಾ ಅನುಭವಾಗಿತ್ತು. ಈ ನಡುವೆ ನನ್ನ ಮೇಲಾಧಿಕಾರಿಗಳಿಗೆ ಸೋಂಕು ದೃಢಪಟ್ಟವಿಚಾರ ತಿಳಿಸಿದೆ. ಈ ವೇಳೆ ಅವರು ಧೈರ್ಯ ತುಂಬಿದರು.

ಆಸ್ಪತ್ರೆಗೆ ಹೋಗಿದ್ದು ಜಾಲಿ ಟ್ರಿಪ್‌ಗೆ ಹೋದಂತೆ ಇತ್ತು: ಕೊರೋನಾ ಗೆದ್ದ ಹೆಡ್‌ ಕಾನ್‌ಸ್ಟೇಬಲ್

ವೈದ್ಯರ ಸಲಹೆ ಮೇರೆಗೆ ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ಇಜಿಸಿ ಸೇರಿದಂತೆ ಹಲವು ಪರೀಕ್ಷೆ ಮಾಡಿದರು. ನೆಗಡಿ ಹೊರತುಪಡಿಸಿ ಎಲ್ಲವೂ ಸಾಮಾನ್ಯವಾಗಿತ್ತು. ಶೀತ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕೆಲ ಮಾತ್ರೆಗಳನ್ನು ಕೊಟ್ಟರು. ಮೂರೇ ದಿನಕ್ಕೆ ಶೀತ ವಾಸಿಯಾಗಿ ಮೊದಲಿನಂತಾದೆ. ಮತ್ತೆ ಕೊರೋನಾ ಪರೀಕ್ಷೆ ಮಾಡಿದಾಗ ನೆಗೆಟಿವ್‌ ಬಂದಿತು. ಹೀಗಾಗಿ ನಾಲ್ಕನೇ ದಿನವೇ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಮಾಡಿದರು ಎಂದು ವಿವರಿಸಿದರು. ನಾವು ಎಷ್ಟುಮಾನಸಿಕವಾಗಿ ಧೈರ್ಯವಾಗಿರುತ್ತೇವೋ ಅಷ್ಟುಬೇಗ ಗುಣಮುಖವಾಗುತ್ತೇವೆ ಎಂದಿದ್ದಾರೆ.

ಕೋವಿಡ್‌ ಪಾಸಿಟಿವ್ ಬಂದಾಕ್ಷಣ ಹೆದರುವ ಅಗತ್ಯವಿಲ್ಲ; ಕೊರೊನಾ ಗೆದ್ದವರ ಅನುಭವದ ಮಾತಿದು!

ಅನ್ನ ಅನುಭವದ ಪ್ರಕಾರ, ಕೊರೋನಾ ಸೋಂಕಿಗೆ ಹೆದರುವ ಅಗತ್ಯವಿಲ್ಲ. ನಾವು ಎಷ್ಟುಮಾನಸಿಕವಾಗಿ ಧೈರ್ಯವಾಗಿರುತ್ತೇವೋ ಅಷ್ಟುಬೇಗ ಗುಣಮುಖವಾಗುತ್ತೇವೆ. ನಾನು ಆಸ್ಪತ್ರೆಯಲ್ಲಿದ್ದಾಗ ನನ್ನ ಮೇಲಾಧಿಕಾರಿಗಳು, ಸ್ನೇಹಿತರು ಆಗಾಗ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಪ್ರತಿ ಬಾರಿಯೂ ಧೈರ್ಯ ತುಂಬುತ್ತಿದ್ದರು. ಹೀಗಾಗಿ ಸೋಂಕಿನ ಬಗ್ಗೆ ನನಗಿದ್ದ ಆತಂಕ, ಭೀತಿ ಎಲ್ಲವೂ ಹೋಯಿತು. ಈಗ ಆರಾಮವಾಗಿದ್ದೇನೆ. ಸೋಂಕಿನ ಬಗ್ಗೆ ಯಾರೇ ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮನೋಸ್ಥೈರ್ಯ ಗಟ್ಟಿಯಾಗಿದ್ದರೆ ಸೋಂಕು ಓಡಿ ಹೋಗುತ್ತದೆ ಎಂದು ಅವರು ಹೇಳಿದರು.