ರಾಮನಗರ: ಜೂಜಾಟ ವೇಳೆ ದಾಳಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದ ವ್ಯಕ್ತಿ ಸಾವು
ತಿಗಳರ ಹೊಸಹಳ್ಳಿ ಹಾಗೂ ಅಕ್ಕ-ಪಕ್ಕದ ಗ್ರಾಮಗಳಿಂದ ಕೆಲ ಯುವಕರ ಗುಂಪೊಂದು ಟಿ.ಹೊಸಹಳ್ಳಿಯಲ್ಲಿ ಜೂಜಾಟ ಆಡುತ್ತಿದ್ದ ವೇಳೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆಗ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ವೇಳೆ ಇಬ್ಬರು ಸೆರೆ ಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದರು.
ಕನಕಪುರ(ಅ.13): ಜೂಜಾಟ ವೇಳೆ ಪೊಲೀಸರು ದಾಳಿ ನಡೆಸಿದಾಗ ಸ್ಥಳದಿಂದ ತಪ್ಪಿಸಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಆಯತಪ್ಪಿ ಅರ್ಕಾವತಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ತಿಗಳರ ಹೊಸಹಳ್ಳಿಯ ಮರಿಸ್ವಾಮಿ (30)ಮೃತ ವ್ಯಕ್ತಿ. ಮಂಗಳವಾರ ರಾತ್ರಿ ತಿಗಳರ ಹೊಸಹಳ್ಳಿ ಹಾಗೂ ಅಕ್ಕ-ಪಕ್ಕದ ಗ್ರಾಮಗಳಿಂದ ಕೆಲ ಯುವಕರ ಗುಂಪೊಂದು ಟಿ.ಹೊಸಹಳ್ಳಿಯಲ್ಲಿ ಜೂಜಾಟ ಆಡುತ್ತಿದ್ದ ವೇಳೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು, ಆಗ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ವೇಳೆ ಇಬ್ಬರು ಸೆರೆ ಸಿಕ್ಕಿದ್ದು ಉಳಿದವರು ಪರಾರಿಯಾಗಿದ್ದರು.
ರಾಮನಗರ ಜಿಲ್ಲೆಯಲ್ಲಿ ಬೆಳೆ ಹಾನಿ: 274.22 ಕೋಟಿ ನಷ್ಟ
ಈ ವೇಳೆ ಮರಿಸ್ವಾಮಿ ಕಾಲು ಜಾರಿ ಅರ್ಕಾವತಿ ನದಿಗೆ ಬಿದ್ದಿದ್ದ. ಮನೆಗೆ ಬಾರದ ಮರಿಸ್ವಾಮಿ ಬಗ್ಗೆ ಆತನ ಕುಟುಂಬದವರು ಸ್ನೇಹಿತರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆದರೆ ಗುರುವಾರ ಬೆಳಗ್ಗೆ ನದಿಯಲ್ಲಿ ಶವಪತ್ತೆಯಾಗಿದ್ದು ಆತನ ಸಾವಿನ ವಿಷಯ ಬಯಲಾಗಿದೆ.