ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಚ್.ಡಿ. ಕೋಟೆ(ಸೆ.12): ಹೆಡಿಯಾಲ ವಲಯ ಪ್ರದೇಶದಲ್ಲಿ ಆ. 12ರಂದು ಕಾಡು ಆನೆಯೊಂದು ಮೃತಪಟ್ಟಿದ್ದು, ಈ ಸಂಬಂಧವಾಗಿ ವ್ಯಕ್ತಿಯೊಬ್ಬನ್ನು ಬಂಧಿಸಿದ್ದಾರೆ. ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Add Asianetnews Kannada as a Preferred Source

ಹುಲಿ ದಾಳಿಗೆ ಹಸು ಬಲಿ
ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಸಿದ್ದಾಪುರ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಜರುಗಿದೆ. ಗ್ರಾಮದ ಶಿವು ಎಂಬುವವರ ಹಸುವನ್ನು ಹುಲಿ ತಿಂದಿದ್ದು, ಕಳೆದ ದಿನಗಳಿಂದ ಈ ಭಾಗದಲ್ಲಿ ಹುಲಿಯು ಪ್ರತ್ಯೇಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯಿಂದ ಹುಲಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಂತರಸಂತೆ ಎಸಿಎಫ್ ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
