ಚಿತ್ರದುರ್ಗ [ಮಾ.06]: ಆಸ್ತಿ ವಿವಾದ  ಹಿನ್ನೆಲೆಯಲ್ಲಿ ಪುಟ್ಟ ಬಾಲಕನನ್ನು ಉಸಿರುಗಟ್ಟಿಸಿ  ಹತ್ಯೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. 

ಚಿತ್ರದುರ್ಗ ಜಿಲ್ಲೆ ಬೋಸೇದೇವರಹಟ್ಟಿಯಲ್ಲಿ ಚಿಕ್ಕಪ್ಪನೇ ಆಸ್ತಿಗಾಗಿ ಅಣ್ಣನ ಮಗನನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. 

ಗೋವಿಂದ ಎಂಬ 7 ವರ್ಷದ ಬಾಲಕನನ್ನು ಚಿಕ್ಕಪ್ಪ ಚಿರಂಜೀವಿ ಎಂಬಾತ  ಉಸಿರುಗಟ್ಟಿಸಿ ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಹಳ್ಳಕ್ಕೆ ಬಿಸಾಡಿದ್ದಾನೆ.

ತಂಗಿ ಎನ್ನುತ್ತಿದ್ದಾತನೇ ರೇಪ್‌ಗೆ ಮುಂದಾದ, ವಿರೋಧಿಸಿದಾಗ ಕತ್ತು ಕೊಯ್ದ!.

ಆಸ್ತಿ ವಿಚಾರವಾಗಿ ಬಾಲಕನ ಕೊಲೆ ಮಾಡಲಾಗಿದ್ದು, ನಾಯಕನ ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ನಾಯಕನ ಹಟ್ಟಿ ಪೊಲೀಸರು ಚಿರಂಜೀವಿಯನ್ನು ಬಂಧಿಸಿದ್ದು, ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.