ಪ್ರೀತಿ ನಿರಾಕರಣೆ: ಎಫ್‌ಬಿ, ಇನ್‌ಸ್ಟಾದಲ್ಲಿ ಯುವಕ ಮಾಡಿದ ಮಾಸ್ಟರ್ ಪ್ಲಾನ್..!
ಪ್ರೀತಿ ನಿರಾಕರಿಸಿದ್ದಕ್ಕೆ ಈ ರೋಮಿಯೋ ಮಾಡಿದ್ದೇನು ಗೊತ್ತಾ..? ಹುಡುಗಿ ಹೆಸ್ರಲ್ಲಿ ಫೇಕ್ ಫೇಸ್‌ಬುಕ್, ಇನಸ್ಟಾ ಐಡಿ ಕ್ರಿಯೇಟ್ ಮಾಡಿ ಈತ ಮಾಡ್ತಿದ್ದ ಖತರ್ನಾಕ್ ಕೆಲ್ಸ..! ಪ್ರೀತಿ ನಿರಾಕರಿಸಿದ ಯುವತಿ ಹೆಸರು ಕೆಡಿಸೋಕೆ ಈತ ಮಾಡಿದ ಮಾಸ್ಟರ್ ಪ್ಲಾನ್ ಬಗ್ಗೆ ತಿಳಿಯಲು ಈ ಸುದ್ದಿ ಓದಿ..!
ಶಿವಮೊಗ್ಗ(ಆ.08): ಯುವತಿ ಹೆಸರಿನಲ್ಲಿ ನಕಲಿ ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್ ಖಾತೆ ತೆರೆದು ಆಕೆಯ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಆರೋಪಿಯನ್ನು ಶಿವಮೊಗ್ಗ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಜಿಂಕ್ ಲೈನ್ ನಿವಾಸಿ ಸಚಿನ್(24) ಬಂಧಿತ ಆರೋಪಿ. ತಮ್ಮ ಮಗಳ ಪೋಟೋ ಹಾಕಿ 4 ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್ ಖಾತೆ ತೆರೆದು ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಸಿಇಎನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಾರ್ವಜನಿಕ ದೂರಿಗೆ ‘ಶೇರ್‌ಚಾಟ್’; ಕನ್ನಡದಲ್ಲಿಯೇ ದೂರು ನೀಡಿ!
ಆರೋಪಿ ಪತ್ತೆಗಾಗಿ ಪೋಲೀಸ್ ಅಧೀಕ್ಷಕರಾದ ಕೆ.ಎಂ.ಶಾಂತರಾಜ್, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಶೇಖರ್‌ಎಚ್.ಟೆಕ್ಕಣ್ಣನವರ್ ಅವರ ಮಾರ್ಗದರ್ಶನದಲ್ಲಿ ಕೆ.ಟಿ.ಗುರುರಾಜ ನೇತೃತ್ವದ ತಂಡ ಇನ್‌ಸ್ಟ್ರಾಗ್ರಾಂ ಐಡಿ ಪರಿಶೀಲಿಸಿ ಆ ಮೂಲಕ ಆರೋಪಿಯನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಹೆಸರು ಕೆಡಿಸಿದ:
ಯುವತಿಯು ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ನಂತರ ಪ್ರೀತಿಸಲು ನಿರಾಕರಿಸಿದಾಗ ಅವಳಿಗೆ ಕೆಟ್ಟ ಹೆಸರು ತರಲು ಅವಳ ಪೋಟೋ ಹಾಕಿ ಅವಳ ಹೆಸರಿನಲ್ಲಿ 4 ಇನ್‌ಸ್ಟ್ರಾಗ್ರಾಂ ಹಾಗೂ ಫೇಸ್‌ಬುಕ್ ಮೆಸೆಂಜರ್ ಅಕೌಂಟ್ ಕ್ರಿಯೇಟ್ ಮಾಡಿ ಹುಡುಗಿಯ ಸಂಬಂಧಿಕರು, ಸ್ನೇಹಿತರಿಗೆ ಅಶ್ಲೀಲ ಮೆಸೇಜ್ ಮತ್ತು ಪೋಟೋ ಕಳುಹಿಸುತ್ತಿದ್ದುದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಆತನಿಂದ ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ಈತನು ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗಕ್ಕೆ ಸೇರಿದ್ದು, ಅರ್ಧಕ್ಕೆ ಓದು ಬಿಟ್ಟು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್‌ಬುಕ್ ಕಮೆಂಟ್ ಮಾಡಿದ್ದಕ್ಕೆ ತಲ್ವಾರ್‌ನಿಂದ ಹಲ್ಲೆ..!