ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿರೋದಕ್ಕೆ ವ್ಯಕ್ತಿಯನ್ನು ತಲ್ವಾರ್‌ನಿಂದ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಬೈಂದೂರಿನಲ್ಲಿ ನಡೆದಿದೆ. ಹಲ್ಲೆ ನಡೆಸುವ ಮೊದಲೇ ವ್ಯಕ್ತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು.

ಮಂಗಳೂರು(ಆ.03): ಬೈಂದೂರಿನ ಶಿರೂರು ಗ್ರಾಮದ ಕೆಳಪೇಟೆಯ ನಿವಾಸಿ ನಿಖಿಲೇಶ್‌ ಶೆಟ್ಟಿ(24) ಎಂಬವರು ಫೇಸ್‌ಬುಕ್‌ನಲ್ಲಿ ಕಮೆಂಟ್‌ ಹಾಕಿದ್ದಕ್ಕೆ ಕೆಲವು ಯುವಕರು ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರಿಗೆ ಪೂರ್ವಾಹ್ನ 11ಕ್ಕೆ ಉದಯ ಪೂಜಾರಿ ಎಂಬುವವರು ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಸಂಜೆ 4 ಗಂಟೆಗೆ ನಿಖಿಲೇಶ್‌ ಅವರು ಅಂಗಡಿಯಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಉದಯ ಪೂಜಾರಿ, ಕಿರಣ ಪೂಜಾರಿ ಹಾಗೂ ಶಿವ ಪೂಜಾರಿ ಅವರು, ಪೇಸ್‌ಬುಕ್‌ನಲ್ಲಿ ಭಾರಿ ಕಮೆಂಟ್‌ ಮಾಡುತ್ತೀಯಾ ಎಂದು ಕೈಯಿಂದ ಹಲ್ಲೆ ಮಾಡಿ, ಬೆದರಿಕೆ ಹಾಕಿದ್ದಾರೆ.

ಜನರ ಆಹವಾಲು ಆಲಿಸಲು ‘ಫೇಸ್‌ಬುಕ್‌’: ಶಿವಮೊಗ್ಗ ಡೀಸಿಯ ವಿನೂತನ ಕ್ರಮ

ಸಂಜೆ 6 ಗಂಟೆಗೆ ಪುನಃ ಅಖಿಲೇಶ್‌ ಅವರ ಮನೆಗೆ ಕಾರಿನಲ್ಲಿ ಬಂದ ಉದಯ ಪೂಜಾರಿ ಮತ್ತು ಇತರರು ತಲವಾರಿನಿಂದ ಎಡಕೆನ್ನೆಗೆ ಕಡಿದು ಗಾಯಗೊಳಿಸಿದ್ದಾರೆ ಮತ್ತು ಕಾಲಿನಿಂದ ತುಳಿದು ಹಲ್ಲೆ ಮಾಡಿರುತ್ತಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿಸಿದೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ