ಶಿವಮೊಗ್ಗ(ಏ.28): ಪತ್ರಕರ್ತ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತ ಎಂದು ಹೇಳಿಕೊಂಡು ಡಾ.ರಾಜ್‌ಕುಮಾರ್‌ ಜಯಂತಿ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ವಿನೋಬನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ದುರ್ಗಿಗುಡಿ ಬಡಾವಣೆ ವಾಸಿ ಸಂತೋಷ್‌ ಕುಮಾರ್‌ ಬಂಧಿತ ವ್ಯಕ್ತಿ.

ಈತ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯ ವರ್ತಕರಿಗೆ ಡಾ.ರಾಜ್‌ ಜಯಂತಿ ಕಾರ್ಯಕ್ರಮಕ್ಕೆ ಹಣ ನೀಡುವಂತೆ ಕನ್ನಡ ಪರ ಸಂಘಟನೆಯೊಂದರ ಹೆಸರು ಹೇಳಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದರು.

ದೇಗುಲ ಆವರಣದಲ್ಲಿ ಇಬ್ಬರು ಸಾಧುಗಳ ಹತ್ಯೆ: ಆರೋಪಿ ಅರೆಸ್ಟ್!

ಖಚಿತ ಮಾಹಿತಿ ಮೇರೆಗೆ ವಿನೋಬನಗರ ಸಬ್‌ಇನ್‌ಸ್ಪೆಕ್ಟರ್‌ ಉಮೇಶ್‌ಕುಮಾರ್‌ ಸೋಮವಾರ ಬೆಳಗ್ಗೆ ಎಪಿಎಂಸಿ ತರಕಾರಿ ಮಾರುಕಟ್ಟೆಬಳಿ ಆರೋಪಿ ಸಂತೋಷ್‌ನನ್ನು ಬಂಧಿಸಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕಳ್ಳರೆಂಬ ವದಂತಿ: ಇಬ್ಬರು ಸಾಧು ಸೇರಿ ಮೂವರು ಗುಂಪು ಥಳಿತಕ್ಕೆ ಬಲಿ!

ಇದೇ ರೀತಿ ಕೆಲವು ಕಡೆ ಪತ್ರಕರ್ತ, ಕೆಲವು ಕಡೆ ಪಾಲಿಕೆ ಸಿಬ್ಬಂದಿ ಎಂದೆಲ್ಲ ಹೇಳಿಕೊಂಡು ಹಣ ವಸೂಲಿ ಮಾಡಿದ್ದ ಎನ್ನಲಾಗಿದ್ದು, ಈ ಮೊದಲು ಸಹ ಸಂತೋಷ್‌ ವಿರುದ್ಧ ಇಂತದ್ದೇ ಹಲವು ದೂರುಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ.