ಲಕ್ನೋ(ಏ.28): ಉತ್ತರ ಪ್ರದೇಶದ ಬುಲಂದರ್‌ ಶಹರ್‌ನಲ್ಲಿ ಸೋಮವಾರ ತಡರಾತ್ರಿ ದೇಗುಲವೊಂದರ ಆವರಣದಲ್ಲಿ ಇಬ್ಬರು ಸಾಧುಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇತ್ತೀಚೆಗಷ್ಟೇ ಕಳ್ಳತನದ ಆರೋಪ ಹೊತ್ತಿದ್ದ ವ್ಯಕ್ತಿಯೇ ಈ ಹತ್ಯೆ ಮಾಡಿದ್ದಾನೆನ್ನಲಾಗಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಚೂಪಾದ ಆಯುಧದಿಂದ ಕೊಲೆ ಮಾಡಲಾಗಿದೆ.

ಅರೋಪಿ ರಾಜು ಬಂಧನದ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಟ್ಟುನಿಟ್ಟಿನ ತನಿಖೆ ನಡೆಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ಪೊಲೀಸರ ಅನ್ವಯ ಆರೋಪಿ ಈ ಸಾಧುಗಳನ್ನು ಹತ್ಯೆಗೈದ ವೇಳೆ ಡ್ರಗ್ಸ್ ನಶೆಯಲ್ಲಿದ್ದ, ಅಲ್ಲದೇ ಈವರೆಗೂ ಪ್ರಜ್ಞೆ ಬಂದಿಲ್ಲ ಎನ್ನಲಾಗಿದೆ. ಆತನ ನಶೆ ಇಳಿಯುತ್ತಲೇ ವಿಚಾರಣೆ ನಡೆಸುವುದಾಗಿಯೂ ತಿಳಿಸಿದ್ದಾರೆ. 

ಕಳ್ಳರೆಂಬ ವದಂತಿ: ಇಬ್ಬರು ಸಾಧು ಸೇರಿ ಮೂವರು ಗುಂಪು ಥಳಿತಕ್ಕೆ ಬಲಿ!

ಸುದ್ದಿಸಂಸ್ಥೆ ANIಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಇಬ್ಬರು ಸಾಧುಗಳು ಈ ದೇಗುಲದಲ್ಲಿ ವಾಸಿಸುತ್ತಿದ್ದರು. ಇಲ್ಲಿ ರಾಜು ಎಂಬಾತ ಕಳ್ಳತ ಮಾಡಿದ್ದ, ಹೀಗಿರುವಾಗ ಇಬ್ಬರೂ ಆತನಿಗೆ ಬೈದಿದ್ದರು. ಹತ್ಯೆ ನಡೆದ ಮಾಹಿತಿ ಸಿಕ್ಕ ಬೆನ್ನಲ್ಲೇ ಗ್ರಾಮಸ್ಥರು ರಾಜುಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಆತ ಪತ್ತೆಯಾದಾಗ ನಶೆಯಲ್ಲಿದ್ದ ಎಂದಿದ್ದಾರೆ.

ಸಂತೋಷ್ ಸಿಂಗ್ ಅನ್ವಯ ಸಾಧುಗಳು ಬೈದ ಬಳಿಕ ಆರೋಪಿ ರಾಜು ಬಹಳಷ್ಟು ಕೋಪಗೊಂಡಿದ್ದ. ಸೋಮವಾರ ರಾತ್ರಿ ಮಾದಕ ಪದಾರ್ಥ ಸೇವಿಸಿದ ಬಳಿಕ ದೇಗುಲ ಆವರಣಕ್ಕೆ ತೆರಳಿ ಇಬ್ಬರು ಸಾಧುಗಳನ್ನು ಹತ್ಯೆಗೈದಿರಬಹುದು ಎಂದಿದ್ದಾರೆ.

ಪಾಲ್ಘರ್‌ ಸಾಧುಗಳ ಬಡಿದು ಹತ್ಯೆ: ಕೇಂದ್ರ ಸರ್ಕಾರ ರಂಗ ಪ್ರವೇಶ!

ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಇಬ್ಬರು ಸಾಧುಗಳನ್ನು ಜನರ ಗುಂಪೊಂದು ಅಟ್ಟಾಡಿಸಿ ಹೊಡೆದು ಸಾಯಿಸಿತ್ತು. ಇವರು ಮಕ್ಕಳ ಕಳ್ಳರು ಎಂದು ಹಬ್ಬಿದ್ದ ವದಂತಿಯಿಂದಾಗಿ ಗುಂಪು ಥಳಿತ ನಡೆದಿತ್ತು.