ವದಂತಿಗಳಿಗೆ ಕಿವಿಗೊಡಬೇಡಿ ಅಂದ್ರೂ ಪ್ರಯೋಜನವಿಲ್ಲ| ಕಳ್ಳರೆಂಬ ವದಂತಿಗೆ ಕಿವಿಗೊಟ್ಟು ಮೂವರ ಮೇಲೆ ಗುಂಪು ಥಳಿತ| ಘಟನೆಯಲ್ಲಿ ಇಬ್ಬರು ಸಾಧು ಸೇರಿ ಮೂವರು ಸಾವು

ಮಹಾರಾಷ್ಟ್ರ(ಏ.19): ಕಳ್ಳತನ ನಡೆಸಿದ್ದಾರೆಂಬ ಅನುಮಾನದ ಮೇರೆಗೆ ನಡೆದ ಗುಂಪು ಥಳಿತಕ್ಕೆ ಇಬ್ಬರು ಸಾಧುಗಳು ಸೇರಿ ಮೂವರು ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಗುರುವಾರದಂದು ನಡೆದಿದ್ದು, ಸದ್ಯ ಈ ಘಟನೆ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.

ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ಕಳ್ಳರೆಂಬ ಅನುಮಾನದ ಮೇರೆಗೆ ಅವರು ಬಂದಿದ್ದ ವಾಹನದ ಬಳಿ ಸುಮಾರು 200 ಕ್ಕೂ ಅಧಿಕ ಗ್ರಾಮಸ್ಥರು ಗುಂಪುಗೂಡಿದ್ದರು. ಆರಂಭದಲ್ಲಿ ಕಲ್ಲುಗಳನ್ನೆಸೆದು ದಾಳಿ ನಡೆಸಿದ್ದ ಗ್ರಾಮಸ್ಥರು, ವಾಹನ ನಿಂತ ಬೆನ್ನಲ್ಲೇ ಅವರನ್ನು ಎಳೆದು ಹೊರ ಹಾಕಿ ದೊಣ್ಣೆ ಹಾಗೂ ರಾಡ್‌ನಿಂದ ಹೊಡೆದಿದ್ದಾರೆ ಎಂದಿದ್ದಾರೆ.

Scroll to load tweet…
Scroll to load tweet…

ಇನ್ನು ತಮ್ಮ ವಾಹನದ ಮೇಲೆ ದಾಳಿಯಾದ ಬೆನ್ನಲ್ಲೇ ಪೊಲಿಸರಿಗೆ ಫೋನ್ ಮಾಡಿದ ಚಾಲಕ ಈ ಸಂಬಂಧ ಮಾಹಿತಿ ನೀಡಿದ್ದಾನೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಪೊಲೀಸರಿಗೆ ಕ್ಯಾರೇ ಎನ್ನದ ಗ್ರಾಮಸ್ಥರು ದಾಳಿ ಮುಂದುವರೆಸಿದ್ದಾರೆ ಅಲ್ಲದೇ, ತಮ್ಮನ್ನು ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಸೇರಿ ಒಟ್ಟು ಐವರು ಸಿಬ್ಬಂದಿಗೆ ಗಾಯಗಳಾಗಿವೆ.

ಕೊರೋನಾ ಭಯ: ರಸ್ತೆ ಬದಿಯಲ್ಲಿದ್ದ ನೋಟು ಉರಿಸಿದ ಜನ

Scroll to load tweet…

ಇನ್ನು ಇದು ಈ ಪ್ರದೇಶದಲ್ಲಾದ ಮೊದಲ ಗುಂಪು ಥಳಿತವಲ್ಲ. ಈ ಹಿಂದೆಯೂ ವದಂತಿ ಹಾಗೂ ವೈರಲ್ ಸಂದೇಶಗಳಿಗೆ ಕಿವವಿಗೊಟ್ಟು ಇಂತಹ ಪ್ರಕರಣಗಳು ನಡೆದಿವೆ.