ಮಲ್ಪೆ ಸ್ಲಿಪ್ ವೇ ನಿರ್ವಹಣೆ ಹೊಣೆ ಮೀನುಗಾರರಿಗೆ: ಕೋಟ ಭರವಸೆ
ಮಲ್ಪೆ ಬಂದರಿನ 3ನೇ ಹಂತದ ವಿಸ್ತರಣೆ ಸಂದರ್ಭದಲ್ಲಿ ಮೀನುಗಾರಿಕೆ ಬೋಟುಗಳ ದುರಸ್ತಿಗಾಗಿ ನಿರ್ಮಿಸಲಾಗಿರುವ ಸ್ಲಿಪ್ ವೇ ನಿರುಪಯುಕ್ತವಾಗಿದ್ದು, ಅದರ ನಿರ್ವಹಣೆಯನ್ನು ಮೀನುಗಾರರ ಸಂಘಕ್ಕೆ ವಹಿಸಲು ಪ್ರಯತ್ನಿಸುವುದಾಗಿ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. ಅವರು ಭಾನುವಾರ ಮಲ್ಪೆ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿ, ಬಳಿಕ ಮೀನುಗಾರ ಸಮುದಾಯ ಭವನದಲ್ಲಿ ಮೀನುಗಾರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.
ಉಡುಪಿ(ನ.18): ಮಲ್ಪೆ ಬಂದರಿನ 3ನೇ ಹಂತದ ವಿಸ್ತರಣೆ ಸಂದರ್ಭದಲ್ಲಿ ಮೀನುಗಾರಿಕೆ ಬೋಟುಗಳ ದುರಸ್ತಿಗಾಗಿ ನಿರ್ಮಿಸಲಾಗಿರುವ ಸ್ಲಿಪ್ ವೇ ನಿರುಪಯುಕ್ತವಾಗಿದ್ದು, ಅದರ ನಿರ್ವಹಣೆಯನ್ನು ಮೀನುಗಾರರ ಸಂಘಕ್ಕೆ ವಹಿಸಲು ಪ್ರಯತ್ನಿಸುವುದಾಗಿ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಅವರು ಭಾನುವಾರ ಮಲ್ಪೆ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿ, ಬಳಿಕ ಮೀನುಗಾರ ಸಮುದಾಯ ಭವನದಲ್ಲಿ ಮೀನುಗಾರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.
ಯಾಂತ್ರೀಕೃತ ಸ್ಲಿಪ್ ವೇ ನಿರ್ಮಾಣಕ್ಕಾಗಿ ಮೀನುಗಾರರ ಸಂಘ ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು. ಹೋರಾಟ ಫಲವಾಗಿ ಸ್ಲಿಪ್ ವೇ ನಿರ್ಮಾಣವಾಗಿ 3 ವರ್ಷ ಕಳೆದರೂ ಅಲ್ಲಿ ಬೋಟುಗಳ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಇದೀಗ ಸ್ಲಿಪ್ ವೇ ಪರಿಕರಗಳು ತುಕ್ಕು ಹಿಡಿದು ಹಾಳಾಗಿವೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾವಿನ ಮನೆಮುಂದೆ ಮಸೀದಿ ಮೈಕ್ ಸೌಂಡ್ ಆಫ್, ಸೌಹಾರ್ದತೆ ಮೆರೆದ ಜನ
ಈ ಸಂದರ್ಭದಲ್ಲಿ ಮೀನುಗಾರರ ನಾಯಕರು ಮತ್ತು ಶಾಸಕ ಕೆ. ರಘುಪತಿ ಭಟ್ ಸ್ಲಿಪ್ ವೇಯನ್ನು ಮೀನುಗಾರರ ಸಂಘಕ್ಕೆ ವಹಿಸಿಕೊಟ್ಟು ಅದರ ಕಾರ್ಯಾಚರಣೆಯನ್ನು ಆರಂಭಿಸುವಂತೆ ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, 2015ರ ತಿದ್ದುಪಡಿ ಕಾಯ್ದೆಯಂತೆ ಸ್ಲಿಪ್ ವೇಯನ್ನು ಮೀನುಗಾರರ ಸಂಘಕ್ಕೆ ನಿರ್ವಹಣೆ ವಹಿಸಲು ಕಾನೂನು ತೊಡಕುಗಳಿರುವುದನ್ನು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕಾನೂನು ತೊಡಕಿನ ಬಗ್ಗೆ ಪರಿಶೀಲಿಸಿ, ಪರಿಹಾರ ಕಂಡುಕೊಳ್ಳುವ ಬಗ್ಗೆ ಸರ್ಕಾರದ ಹಂತದಲ್ಲಿ ಗರಿಷ್ಠ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸ್ಯಾಂಡ್ ಬಜಾರ್ ಆ್ಯಪ್ : 11 ಸಾವಿರಕ್ಕೂ ಹೆಚ್ಚು ಜನರಿಂದ ಮರಳಿಗೆ ಬೇಡಿಕೆ
ದ.ಕ. - ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಆರ್. ಚೇತನ್, ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ, ನಿರ್ದೇಶಕ ರಾಮಕೃಷ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಡೀಸೆಲ್ ಸಬ್ಸಿಡಿ ನೇರವಾಗಿ ನೀಡಲು ಒತ್ತಾಯ
ಮಲ್ಪೆ ಪಡುಕೆರೆಗೆ ನಬಾರ್ಡ್‌ನಿಂದ ಮಂಜೂರಾದ 10 ಕೋಟಿ ರು. ವೆಚ್ಚದ ಜೆಟ್ಟಿಯನ್ನು ಬಂದರು ಇಲಾಖೆ ಜಾಾಗದಲ್ಲಿ ನಿರ್ಮಿಸುವಂತೆ, ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಈ ಹಿಂದೆ ನೀಡುತಿದ್ದ ಮಾದರಿಯಲ್ಲೇ ಡೀಸೆಲ್ ಸಬ್ಸಿಡಿಯನ್ನು ನೇರವಾಗಿ ನೀಡುವಂತೆ, ಮಲ್ಪೆ ಬಂದರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವಂತೆ ಮೀನುಗಾರರು ಸಚಿವರಲ್ಲಿ ಮಾಡಿಕೊಂಡಿದ್ದಾರೆ.
ಕೊಡಗು: ಕಾಡಾನೆ ದಾಳಿ ತಡೆಯಲು ಹಾಕಿದ್ದ ಸೌರ ಬೇಲಿಗಳು ಕಾಡುಪಾಲು!.