Asianet Suvarna News Asianet Suvarna News

ಮಹಿಷ ಸಂಭ್ರಮದ ಮೂಲಕ ಅತಿ ಬುದ್ಧಿವಂತಿಕೆ ಪ್ರದರ್ಶನ : ಮಾಳವಿಕ

ಬುದ್ಧಿವಂತರು ಮಹಿಷ ಸಂಭ್ರಮದ ಮೂಲಕ ಅತಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ. ಇದು ಚೇಷ್ಟೆಯೇ ಸರಿ ಎಂದು ಚಲನಚಿತ್ರ ನಟಿ ಮಾಳವಿಕಾ ಅವಿನಾಶ್‌ ಹೇಳಿದರು.

  Malavika Reacts on Mahisha dasara snr
Author
First Published Nov 7, 2023, 10:19 AM IST

  ಮೈಸೂರು :  ಬುದ್ಧಿವಂತರು ಮಹಿಷ ಸಂಭ್ರಮದ ಮೂಲಕ ಅತಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ. ಇದು ಚೇಷ್ಟೆಯೇ ಸರಿ ಎಂದು ಚಲನಚಿತ್ರ ನಟಿ ಮಾಳವಿಕಾ ಅವಿನಾಶ್‌ ಹೇಳಿದರು.

ನಗರದ ಕಲಾಮಂದಿರದಲ್ಲಿ ರಾಷ್ಟ್ರಭಾರತಿ ಚಾರಿಟಬಲ್‌ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಕನ್ನಡಹಬ್ಬದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡ ಹಬ್ಬದ ಸಂದರ್ಭದಲ್ಲಿ ಚಾಮುಂಡೇಶ್ವರಿಯ ಆರಾಧನೆಯ ನಡುವೆಯು ಅಪಭ್ರಂಶ ನಡೆದಿದೆ. ಮಹಿಷಾ ದಸರ ಆಚರಣೆಯನ್ನು ಕೊನೆಗಾಣಿಸಬೇಕು. ಇಂತಹ ಪ್ರಸಂಗಗಳಿಗೆ ಪ್ರೋತ್ಸಾಹ ಸಿಗಬಾರದು. ಚಾಮುಂಡೇಶ್ವರಿ ಮತ್ತು ಭಕ್ತರ ನಡುವೆ ಬರಲು ಇವರು ಯಾರು ಎಂದು ಪ್ರಶ್ನಿಸಿದರು.

ಮಹಿಷ ದಸರಾ ಆಚರಣೆಗೆ ಪರೋಕ್ಷ ಪ್ರೋತ್ಸಾಹ ದೊರೆತಿದೆ. ಇದರ ಬೆನ್ನಿಗೆ ನಿಂತಿದ್ದ ಮೈಸೂರಿನ ರಾಜಕಾರಣಿ ಲೋಹಿಯಾ ವಾದವನ್ನು ಜನರ ಮೇಲೆ ಹೇರಬಾರದು ಎಂದು ಕುಟುಕಿದರು.

ಮೈಸೂರು ರಾಜಮನೆತನಕ್ಕೆ ಮಹಿಷಾ ದಸರಾ ಆಚರಣೆ ಮೂಲಕ ಅವಮಾನಿಸಲಾಗಿದೆ. ಇದನ್ನು ಆಚರಿಸುವವರಿಗೆ ಇತಿಹಾಸ, ಪರಂಪರೆಯ ಅರಿವು ಇಲ್ಲ. ಆದ್ದರಿಂದ ಮುಂದಿನ ವರ್ಷ ಇವರಿಗೆ ಬುದ್ಧಿ ಕಲಿಸಬೇಕು ಎಂದರು.

ಇತಿಹಾಸವನ್ನು ಆಳುವ ಸರ್ಕಾರದ ಪರವಾಗಿ ರಚಿಸಿರುವುದು ಈ ದೇಶದ ದುರಂತ. ತುಘಲಕ್ ಕುರಿತು ನಾಟಕ ರಚಿಸಿರುವ ಜ್ಞಾನಪೀಠ ಪುರಸ್ಕೃತರು, 3ನೇ ಬಲ್ಲಾಳ ರಾಜನ ಕುರಿತು ನಾಟಕವನ್ನು ಬರೆಯಲಿಲ್ಲ. ಆದ್ದರಿಂದ ನೈಜ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಪರೋಕ್ಷವಾಗಿ ಗಿರೀಶ್‌ಕಾರ್ನಾಡರನ್ನು ಕುಟುಕಿದರು.

ಇತಿಹಾಸವನ್ನು ಇತಿಹಾಸದಂತೆ ಹೇಳಿಲ್ಲ. ಇತಿಹಾಸಕೋರರು ಬೇರೆಯೇ ಇತಿಹಾಸ ಬರೆದಿದ್ದಾರೆ. ಆ ಮೂಲಕ ಇತಿಹಾಸದಲ್ಲಿಯೂ ರಾಜಕಾರಣ ನಡೆದಿದೆ. ನೈಜ ಇತಿಹಾಸವನ್ನು ಜನರಿಗೆ ತಲುಪಿಸಬೇಕಿದೆ. ದೆಹಲಿ ಸುಲ್ತಾನರು, ಮಹಮ್ಮದ್‌ಬಿನ್‌ತುಘಲಕ್‌, ಅಲ್ಲಾವುದ್ದೀನ್‌ಖಲ್ಜಿಯಂತಹ ಮುಸ್ಲಿಂ ದಾಳಿ ಕೋರರನ್ನು ಸೇರಿಸಿದ್ದಾರೆಯೇ ಹೊರತು ದೇಶ, ನಾಡು ಕಟ್ಟಿದ ಮಹನೀಯರ ಹೆಸರನ್ನು ಮರೆ ಮಾಚಲಾಗಿದೆ. ಇದು ದೇಶ ದ್ರೋಹದ ಕೆಲಸವಲ್ಲವೇ ಎಂದು ಅವರು ಪ್ರಶ್ನಿಸಿದರು.

ಕರ್ನಾಟಕ ಏಕೀಕರಣದ ರೂವಾರಿ, ಕನ್ನಡದ ಕುಲಪುರೋಷಿತ ಆಲೂರು ವೆಂಕಟರಾವ್ ಅವರ ಹೆಸರಿನಲ್ಲಿ ಒಂದು ಸ್ಮಾರಕವಿಲ್ಲ. ಇವರ ಕುರಿತು ಯುವ ಜನರಿಗೆ ಗೊತ್ತಿಲ್ಲ. ಬೆಂಗಳೂರಿನ ಇವರ ಹೆಸರಿನ ರಸ್ತೆಗೆ ಟಿಪ್ಪು ಸುಲ್ತಾನ್ ಎಂದು ಮರುನಾಮಕರಣ ಮಾಡಲು ಹಿಂದಿನ ಮತ್ತು ಈಗಿನ ಮುಖ್ಯಮಂತ್ರಿ ಮುಂದಾಗಿದ್ದರು. ಹೋರಾಟ ಮಾಡಿ ಇದಕ್ಕೆ ತಡೆವೊಡ್ಡಲಾಯಿತು ಎಂದರು.

ಟಿಪ್ಪು ಸುಲ್ತಾನ ಹೇಗೆ ‘ಮೈಸೂರು ಹುಲಿ’ಯಾದನೋ ಗೊತ್ತಿಲ್ಲ. ಇವರ ಆಳ್ವಿಕೆ ಕಾಲದಲ್ಲೇ ಉರ್ದು, ಪರ್ಷಿಯನ್ ಭಾಷೆ ತುರುಕಿದರು. ಇವರನ್ನು ನಾಯಕರೆಂದು ಬಿಂಬಿಸಿ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios