ಮೀನು ಸಾಕಾಣಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳಿ
ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಮೀನು ಸಾಕಾಣಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಎಸ್.ಎಂ.ಸವಿತಾ ತಿಳಿಸಿದರು.
ಮಾಗಡಿ (ಡಿ.17): ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಮೀನು ಸಾಕಾಣಿಕೆಯನ್ನು ಉದ್ಯೋಗವನ್ನಾಗಿಸಿಕೊಳ್ಳಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಎಸ್.ಎಂ.ಸವಿತಾ ತಿಳಿಸಿದರು.
ತಾಲೂಕಿನ ಚಂದೂರಾಯನಹಳ್ಳಿಯಲ್ಲಿರುವ ಕೃಷಿ (Agriculture) ವಿಜ್ಞಾನ (Science) ಕೇಂದ್ರದಲ್ಲಿ ಏರ್ಪಡಿಸಿದ್ದ ಗೆಂಡೆ ಮೀನುಗಳಿಗೆ ಪರ್ಯಾಯ ಸುಧಾರಿತ ತಿಲಾಪಿಯಾ ಬಗ್ಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಗ್ರ ಮೀನು ಸಾಕಾಣಿಕೆಯಿಂದ ರೈತರಿಗೆ ಮೂಲ ಕಸುಬಿನ ಜೊತೆ ಆರ್ಥಿಕ ಸುಧಾರಣೆ ಆಗುವುದರಿಂದ ಗ್ರಾಮೀಣಾ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಕೆರೆಗಳು, ಕೃಷಿ ಹೊಂಡ, ತಡೆ ಅಣೆಕಟ್ಟು, ನೀರಾವರಿ ಬಾವಿಗಳು ಹಾಗೂ ಜಲ ಸಂಪನ್ಮೂಲಗಳಿದ್ದಲ್ಲಿ ಮೀನು ಸಾಕಾಣೆಗೆ ಒಂದು ಒಳ್ಳೆ ಅವಾಕಾಶವಿದೆ. ಕೃಷಿಗೆ ಯೋಗ್ಯವಲ್ಲದ ಅತಿ ತೇವಾಶಂಶವಿರುವ ಮತ್ತು ಜೌಗು ಪ್ರದೇಶವನ್ನು ಮೀನು ಸಾಕಾಣಿಕೆಗೆ ಉಪಯೋಗಿಸುವುದರಿಂದ ಭೂಮಿಯ ಸದ್ಬಳಕೆಯಾಗುತ್ತದೆ ಎಂದು ತಿಳಿಸಿದರು.
ಮೀನು ಒಂದು ಪೌಷ್ಠಿಕ ಆಹಾರ. ಆರೋಗ್ಯಕ್ಕೆ ಅಗತ್ಯವಾದ ಸಸಾರಜನಕ, ಜೀವಸತ್ವ ಮತ್ತು ಲವಣಗಳನ್ನು ಒದಗಿಸುತ್ತದೆ. ಗ್ರಾಮದ ಕೆರೆ, ಕುಂಟೆ, ನಾಲೆ, ಜೌಗು ತಗ್ಗು ಪ್ರದೇಶಗಳಲ್ಲಿ ಕೃತಕವಾಗಿ ಕೆರೆ ಹಳ್ಳಕೊಳ್ಳಗಳು, ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡಬಹುದು ಎಂದು ಸವಿತಾ ಹೇಳಿದರು.
ತರಬೇತಿಯ ಮುಖ್ಯ ಸಂಪನ್ಮೂಲ ವ್ಯಕ್ತಿಯಾದ ಡಾ.ಬಿ.ವಿ ಕೃಷ್ಣಮೂರ್ತಿ ಮಾತನಾಡಿ, ಗೆಂಡೆ ಮೀನುಗಳಿಗಿಂತ ತಿಲಾಪಿಯಾ ಮೀನು ಸಾಕಣೆಯಲ್ಲಿ ಇರುವ ಉಪಯೋಗಗಳು, ಅದರ ಸಾಕಣೆ ವಿಧಾನವನ್ನು ವಿವರಿಸಿದರು.
ನೈಲ್ತಿಲಾಪಿಯಾ ಮೀನಿನ ಸಾಕಣೆ ಮಾಡಲು ಸ್ಥಳೀಯ ಮೀನುಗಾರಿಕೆ ಇಲಾಖೆಯಿಂದ ನೋಂದಣಿ ಪ್ರಮಾಣ ಪತ್ರವನ್ನು ಪಡೆದು, ಹೆಬ್ಬಾಳದ ಒಳನಾಡು ಮೀನುಗಾರಿಕಾ ವಿಭಾಗದಿಂದ ತಿಲಾಪಿಯಾ ಮೀನು ಮರಿಗಳನ್ನು ಖರೀದಿಸಬಹುದಾಗಿದೆ. 250-300 ಗ್ರಾಂ ತೂಕದ ಮೀನುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ವರ್ಷದಲ್ಲಿ 3 ರಿಂದ 4 ಬೆಳೆ ತೆಗೆದು ರೈತರು ತಮ್ಮ ಆದಾಯ ದ್ವಿಗುಣಗೊಳಿಸಬಹುದೆಂದು ತಿಳಿಸಿದರು.
ಚಂಡಮಾರುತಕ್ಕೆ ಕೊಚ್ಚಿ ಹೋದ ಬೆಳೆಗಳು
ಉಡುಪಿ (ಡಿ.15) : ಕರಾವಳಿಯಲ್ಲಿ ಚಂಡಮಾರುತ ಹಿನ್ನಲೆಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಕೃಷಿಯ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾಗಿ ಗುರುತಿಸಿಕೊಂಡಿರುವ ನೆಲಗಡಲೆ, ಉದ್ದು ಅಕಾಲಿಕ ಮಳೆಯಿಂದಾಗಿ ಬಹುತೇಕ ಬೆಳೆ ನೆಲಕಚ್ಚಿದೆ.
ಸಾಲ ಮಾಡಿ ಬೆಳೆಯ ಮೂಲಕ ಸಮಸ್ಯೆಯ ಮುಕ್ತಿ ಕಾಣಹೊರಟ ರೈತಾಪಿ ವರ್ಗ ಮತ್ತೆ ಹವಾಮಾನ ವೈಪರೀತ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸುವಂತಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯುವ ವಾಣಿಜ್ಯ ಬೆಳೆ ಎಂದರೆ ಅದು ಉದ್ದು ಮತ್ತು ನೆಲಗಡಲೆ. ಜಿಲ್ಲೆಯ ಕೋಟ ಹೋಬಳಿಯಲ್ಲಿ ಅತೀ ಹೆಚ್ಚು ನೆಲಗಡಲೆ ಬೆಳೆಯುವ ಕೃಷಿ ಭೂಮಿ ಕೃಷಿಕರಿದ್ದಾರೆ. ಈ ಬಾರಿ ಭತ್ತ ಬೆಳೆದು ಕೈ ಸುಟ್ಟು ಕೊಂಡಿದ್ದ ಈ ಭಾಗದ ರೈತರು ನೆಲಗಡಲೆ ಮತ್ತು ಉದ್ದು ಬೆಳೆಯ ಮೂಲಕ ಲಾಭ ನೋಡುವ ಆಸೆಯಿಂದ ಎಕರೆಗಟ್ಟಲೇ ಕೃಷಿ ಭೂಮಿಯಲ್ಲಿ ಬೀಜ ಬಿತ್ತನೆ ಮಾಡಿದ್ದರು.
Udupi: ಚಂಡಮಾರುತ ಎಫೆಕ್ಟ್: ಮಟ್ಟು ಗುಳ್ಳ ಮಣ್ಣು ಪಾಲು
ಆದರೆ ರೈತರ ಆಸೆಗೆ ಚಂಡಮಾರುತ ತಣ್ಣೀರು ಎರೆಚಿದೆ. ಹವಾಮಾನ ವೈಪರೀತ್ಯ ದಿಂದಾಗಿ ಅಕಾಲಿಕ ಮಳೆ ಸುರಿದ ಪರಿಣಾಮ ಬಿತ್ತನೆ ಮಾಡಿದ ನೆಲಗಡಲೆ, ಉದ್ದಿನ ಬೀಜ ಮೊಳಕೆ ಬರುವ ಮೊದಲೆ ಕೊಳೆತು ಹೋಗಿದೆ.
ಕೋಟ ಹೋಬಳಿಯ ಕೋಟತಟ್ಟು ಭಾಗದಲ್ಲಿ ಅತೀ ಹೆಚ್ಚು ರೈತರು ನೆಲಗಡಲೆ ಉದ್ದು ಬೆಳೆಯುವ ಮೂಲಕ ಆದಾಯ ಪಡೆಯುತ್ತಿದ್ದರು. ಆದರೆ ಈ ಬಾರಿ ಪ್ರಕೃತಿ ಈ ರೈತರ ಮೇಲೆ ಮುನಿಸಿಕೊಂಡಿದ್ದು, ವರ್ಷವಿಡಿ ಮಳೆಯ ಕಾಟ ಹೆಚ್ಚಾಗಿ ಯಾವ ಬೆಳೆಯೂ ಕೂಡ ಸರಿಯಾಗಿ ತೆಗೆಯಲಾರದ ಪರಿಸ್ಥಿತಿಯಲ್ಲಿದ್ದಾರೆ.
ಭತ್ತದ ಕೃಷಿ ಸಂದರ್ಭದಲ್ಲೂ ಕೂಡು ನಿರಂತರವಾಗಿ ಮಳೆಯ ಕಾರಣ ಈ ಭಾಗದಲ್ಲಿ ಭತ್ತದ ಕೃಷಿ ಮಾಡಿದ ಕೃಷಿಕ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ನೆಲಗಡಲೇ ಉದ್ದು ಎರಡು ಬೆಳೆಗಳು ಕೂಡ ಮಳೆಗೆ 95 % ಹಾಳಾಗಿ ಹೋಗಿದೆ. ಅದರಲ್ಲೂ ಮೊದಲು ಹಾಕಲಾಗಿದ್ದ ನೆಲಗಡಲೆ ಗದ್ದೆಗಳಲ್ಲಿ ಕಳೆ ಅಧಿಕವಾಗಿದ್ದು, ಇಳಿವರಿ ಕುಂಠಿತವಾಗುವ ಸ್ಥಿತಿ ನಿರ್ಮಾಣವಾಗಿದೆ.
Kodagu: ಮ್ಯಾಂಡೌಸ್ ಪರಿಣಾಮ ಅಕಾಲಿಕ ಮಳೆ: ಅಪಾರ ಬೆಳೆ ನಷ್ಟ
ಒಟ್ಟಾರೆಯಾಗಿ ಈ ವರ್ಷದ ಕೃಷಿ ಲಾಭದಾಯಕವಾಗಿಲ್ಲ ಎನ್ನುವುದು ಕೃಷಿಕರ ಮಾತು. ಸದ್ಯ ಹಾಳಾಗಿರುವ ಕೃಷಿಗೆ ಪರಿಹಾರವಾದರು ಇಲಾಖೆ ವತಿಯಿಂದ ನೀಡಿ ದೇಶದ ಬೆನ್ನೆಲುಬಿಗೆ ಶಕ್ತಿ ನೀಡಿ ಎನ್ನುವುದು ರೈತರ ಬೇಡಿಕೆಯಾಗಿದೆ.