Asianet Suvarna News Asianet Suvarna News

ದಕ್ಷಿಣ ಕಾಶ್ಮೀರ ಕೊಡಗಿನಲ್ಲೂ ಬೆಳೆಯುತ್ತೆ ಸೇಬು..!

ಕಾಶ್ಮೀರದಲ್ಲಿ ಸಾಮಾನ್ಯವಾಗಿ ಬೆಳೆಯಲಾಗುವ ರಸಭರಿತ ಸೇಬನ್ನು ಈಗ ದಕ್ಷಿಣದ ಕಾಶ್ಮೀರ ಎಂದೇ ಕರೆಯಲಾಗುವ ಕೊಡಗು ಜಿಲ್ಲೆಯಲ್ಲೂ ಬೆಳೆಯುವತ್ತ ಕೃಷಿಕರು ಚಿತ್ತ ತೋರುತ್ತಿದ್ದು, ಸೇಬು ಬೆಳೆದು ಫಸಲು ಪಡೆಯುವ ಮೂಲಕ ನಮ್ಮ ಜಿಲ್ಲೆಯಲ್ಲೂ ಸೇಬು ಕೃಷಿಗೆ ಪೂರಕ ವಾತಾವರಣ ಇರುವುದನ್ನು ಕೆಲವು ರೈತರು ಸಾಬೀತುಪಡಿಸಿದ್ದಾರೆ.

Madikeri farmers grow apple
Author
Bangalore, First Published May 22, 2020, 3:39 PM IST

ಮಡಿಕೇರಿ(ಮೇ 22): ಕಾಶ್ಮೀರದಲ್ಲಿ ಸಾಮಾನ್ಯವಾಗಿ ಬೆಳೆಯಲಾಗುವ ರಸಭರಿತ ಸೇಬನ್ನು ಈಗ ದಕ್ಷಿಣದ ಕಾಶ್ಮೀರ ಎಂದೇ ಕರೆಯಲಾಗುವ ಕೊಡಗು ಜಿಲ್ಲೆಯಲ್ಲೂ ಬೆಳೆಯುವತ್ತ ಕೃಷಿಕರು ಚಿತ್ತ ತೋರುತ್ತಿದ್ದು, ಸೇಬು ಬೆಳೆದು ಫಸಲು ಪಡೆಯುವ ಮೂಲಕ ನಮ್ಮ ಜಿಲ್ಲೆಯಲ್ಲೂ ಸೇಬು ಕೃಷಿಗೆ ಪೂರಕ ವಾತಾವರಣ ಇರುವುದನ್ನು ಕೆಲವು ರೈತರು ಸಾಬೀತುಪಡಿಸಿದ್ದಾರೆ.

ಸೋಮವಾರಪೇಟೆ ದೊಡ್ಡಮಳ್ತೆಯ ಕೃಷಿಕ ರಾಶಿತ್, ತಮ್ಮ ತೋಟದಲ್ಲಿ ಸುಮಾರು 13 ವಿವಿಧ ತಳಿಯ ಸೇಬು ಬೆಳೆಸುತ್ತಿದ್ದಾರೆ. 2019ರಲ್ಲಿ ಹಿಮಾಚಲ ಪ್ರದೇಶದಿಂದ ಸೇಬು ಗಿಡಗಳನ್ನು ತಂದು ಕೃಷಿ ಮಾಡಿದ್ದಾರೆ. ಈ ಬಗ್ಗೆ ವಿಜ್ಞಾನಿಗಳಿಂದ ಸಲಹೆ ಪಡೆದುಕೊಂಡಿದ್ದಾರೆ. ಕೊಡಗಿನ ವಾತಾವರಣಕ್ಕೆ ಹೊಂದಿಕೊಂಡು ಪ್ರಸ್ತುತ ಐದು ತಳಿಯ ಫಸಲು ಉತ್ತಮವಾಗಿ ಬಂದಿವೆ.

ರಾಮನಗರ: ಮಾಗಡಿಯಲ್ಲಿ ಬೋನಿಗೆ ಬಿದ್ದ 10ನೇ ಚಿರತೆ

ಅವರು ತೋಟದಲ್ಲಿ 80ಸೇಬು ಗಿಡಗಳನ್ನು ಬೆಳೆಸಿದ್ದು, ಈ ಬಾರಿ 16 ಗಿಡದಲ್ಲಿ ಉತ್ತಮ ಫಸಲು ಬಂದಿದೆ. ಸೇಬು ಕೃಷಿಯೊಂದಿಗೆ ಗಿಡಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಸುಮಾರು 4000 ಗಿಡ ತರಿಸಿದ್ದು, ಒಂದು ಗಿಡವನ್ನು 500 ರು.ಗೆ ಮಾರಾಟ ಮಾಡುತ್ತಿದ್ದಾರೆ. ಸೇಬಿನ ಗಿಡಕ್ಕೆೆ ಹೆಚ್ಚಿನ ಬೇಡಿಕೆಯಿದ್ದು, ಜಿಲ್ಲೆ ಹಾಗೂ ಹೊರ ರಾಜ್ಯದ ಕೃಷಿಕರು ಗಿಡಗಳನ್ನು ಖರೀದಿಸಿದ್ದಾರೆ.

ಮಡಿಕೇರಿಯಲ್ಲಿ ಮಾಜಿ ಯೋಧ ಪ್ರಕಾಶ್ ಹೂಕುಂಡದಲ್ಲಿ ಸೇಬು ಗಿಡವನ್ನು ನೆಟ್ಟು ಪ್ರಯೋಗ ಮಾಡಿದ್ದು, ಈಗ ಗಿಡದಿಂದ ಫಸಲು ಪಡೆದಿದ್ದಾಾರೆ. ಈ ಪ್ರಯೋಗ ಯಶಸ್ವಿಯಾದರೆ ಮತ್ತಷ್ಟು ಸೇಬು ಗಿಡ ಬೆಳೆಯುವ ಚಿಂತನೆ ಮಾಡಿದ್ದಾರೆ.

ಚಿರತೆ ದಾಳಿ: ಮೃತರ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ, DCM ಅಶ್ವತ್ಥನಾರಾಯಣ

ಜಮ್ಮುವಿನಿಂದ ಸೇಬಿನ ಗಿಡ ತರಿಸಿಕೊಂಡಿದ್ದು, ನೆಟ್ಟು ಎರಡು ವರ್ಷದಲ್ಲಿ ಫಸಲು ಬಂದಿದೆ. ಮುಂದೆ ಗಿಡವನ್ನು ನೆಲದಲ್ಲಿ ನೆಡುವ ಚಿಂತನೆ ನಡೆಸಿದ್ದು, ಅದು ಚೆನ್ನಾಗಿ ಬಂದರೆ, ಮುಂದೆಯೂ ಕಾಶ್ಮೀರದಿಂದ ಗಿಡಗಳನ್ನು ತಂದು ನೆಡುವ ಚಿಂತನೆಯಲ್ಲಿದ್ದಾರೆ . 9 ವರ್ಷ ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡಿದ್ದ ಪ್ರಕಾಶ್, ಮಡಿಕೇರಿಯ ಸಂಪಿಗೆಕಟ್ಟೆಯಲ್ಲಿ ನೆಲೆಸಿದ್ದು, ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದಾರೆ.

.ಕಾಫಿ, ಕಾಳು ಮೆಣಸು, ಏಲಕ್ಕಿ, ಕಿತ್ತಳೆ, ಬೆಣ್ಣೆಹಣ್ಣು ಸೇರಿದಂತೆ ವಿವಿಧ ಬೆಳೆಗಳನ್ನು ಕೊಡಗಿನಲ್ಲಿ ಬೆಳೆಸಲಾಗುತ್ತಿದ್ದು,  ಮುಂದಿನ ದಿನಗಳಲ್ಲಿ ಸೇಬು ಕೂಡ ಸೇರ್ಪಡೆಯಾಗುವ ನಿರೀಕ್ಷೆಯಿದೆ.

ಕೊಡಗಿನ ಪ್ರಮುಖ ಬೆಳೆ ಸಾಧ್ಯತೆ!

ಕೊಡಗು ಜಿಲ್ಲೆಯಲ್ಲಿ ಕೆಲವು ರೈತರು ಸೇಬು ಬೆಳೆಯುವತ್ತ ಗಮನ ಹರಿಸಿದ್ದಾಾರೆ. ಉತ್ತಮ ಫಸಲು ಬಂದಿದ್ದು, ಗುಣಮಟ್ಟದಿಂದ ಕೂಡಿದೆ. ಹಿಮಪ್ರದೇಶದಲ್ಲಿ ಸಾಮಾನ್ಯವಾಗಿ ಸೇಬು ಬೆಳೆಯಲಾಗುತ್ತದೆ. ಕೊಡಗಿನಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ತಂಪಾದ ವಾತಾವರಣ ಇರುವುದರಿಂದ ಸೇಬು ಬೆಳೆಯಲು ಪೂರಕವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಸೇಬು ಪ್ರಮುಖ ಬೆಳೆಯಾಗುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

೨೦೧೨ರಿಂದ ಸೇಬು ಕೃಷಿ ಮಾಡುತ್ತಿದ್ದೇನೆ. ಹಿಮಾಚಲ ಪ್ರದೇಶದಿಂದ ಗಿಡಗಳನ್ನು ತಂದು ನೆಟ್ಟಿದ್ದೇನೆ. ಈ ಬಾರಿ 16 ಗಿಡದಲ್ಲಿ ಉತ್ತಮ ಫಸಲು ಬಂದಿದೆ. ಒಟ್ಟು 13 ತಳಿಗಳನ್ನು ಬೆಳೆಸಲಾಗಿದ್ದು, ಕೊಡಗಿನ ವಾತಾವರಣಕ್ಕೆ ಹೊಂದಿಕೊಂಡಂತೆ 5 ತಳಿಯ ಗಿಡಗಳಿಂದ ಉತ್ತಮ ಫಸಲು ಬರುತ್ತಿದೆ. ಸೇಬಿನ ಗಿಡಗಳನ್ನು ಕೂಡ ಮಾರಾಟ ಮಾಡುತ್ತಿದ್ದು, ಈಗಾಗಲೇ ಹಲವರು ಗಿಡವನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಕೃಷಿಕ ರಾಶಿತ್.

ನಂಜನಗೂಡು ಜುಬಿಲಿಯಂಟ್‌ ಕೇಸ್‌ ತನಿಖೆ ಸಿಬಿಐಗೆ..?

ಜಮ್ಮುವಿನಿಂದ ತಂದಿದ್ದ ಸೇಬಿನ ಗಿಡವನ್ನು ಮನೆ ಸಮೀಪ ಹೂಕುಂಡದಲ್ಲಿ ಬೆಳೆಸಿದ್ದೆೆ. ಕಳೆದ ಬಾರಿ ಫಲಪುಷ್ಟ ಪ್ರದರ್ಶನದಲ್ಲಿ ಪ್ರದರ್ಶನಕ್ಕಿಿಟ್ಟಿಿದ್ದೆೆ. ಈ ಬಾರಿಯೂ ಫಸಲು ಬಿಟ್ಟಿಿದೆ. ಮುಂದಿನ ದಿನಗಳಲ್ಲಿ ನೆಲದಲ್ಲಿ ನೆಡುವ ಚಿಂತನೆ ಮಾಡಿದ್ದೇನೆ. ಚೆನ್ನಾಾಗಿ ಬಂದರೆ ಮುಂದೆಯೂ ಕಾಶ್ಮೀರದಿಂದ ತಂದು ಸೇಬಿನ ಗಿಡಗಳನ್ನು ಬೆಳೆಸುತ್ತೇನೆ ಎಂದಿ ಮಾಜಿ ಯೋಧ ಪ್ರಕಾಶ್ ಹೇಳಿದ್ದಾರೆ.

ಕಳೆದ ಐದಾರು ವರ್ಷದಿಂದ ಸೋಮವಾರಪೇಟೆ ಮತ್ತಿತರ ಭಾಗದಲ್ಲಿ ಕೆಲವು ಕೃಷಿಕರು ಸೇಬು ಬೆಳೆಯುತ್ತಿದ್ದು, ಉತ್ತಮ ಫಸಲು ಬರುತ್ತಿಿದೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಸೇಬು ಪ್ರಮುಖ ಬೆಳೆಯಾಗುವ ಲಕ್ಷಣ ಕಾಣುತ್ತಿದೆ. ಇಲ್ಲಿನ ಕೃಷಿಕರು ಬೆಳೆದಿರುವ ಸೇಬಿನ ಗುಣಮಟ್ಟವೂ ಚೆನ್ನಾಾಗಿದೆ. ಸೇಬು ಬೆಳೆ ಕೊಡಗಿನಲ್ಲಿ ಯಶಸ್ವಿಯಾದರೆ ರೈತರಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿದೇಶಕ ಚಕ್ಕೇರ ಪ್ರಮೋದ್ ತಿಳಿಸಿದ್ದಾರೆ.

-ವಿಘ್ನೇಶ್ ಎಂ. ಭೂತನಕಾಡು

Follow Us:
Download App:
  • android
  • ios