ಮೈಸೂರು(ಮೇ 22): ಜಿಲ್ಲೆಯಲ್ಲಿ ಹೆಚ್ಚಿನ ಕೊರೋನಾ ಪ್ರಕರಣ ಹರಡಲು ಕಾರಣವಾಗಿರುವ ನಂಜನಗೂಡಿನ ಜುಬಿಲಿಯೆಂಟ್‌ ಕಾರ್ಖಾನೆಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್‌ ಆಗ್ರಹಿಸಿದರು.

ಜುಬಿಲಿಯೆಂಟ್‌ ಕಾರ್ಖಾನೆಯಲ್ಲಿ ಕೊರೋನಾ ಸೋಂಕು ಯಾರಿಂದ, ಎಲ್ಲಿಂದ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸಲು ದಕ್ಷ ಅಧಿಕಾರಿ ಹರ್ಷಗುಪ್ತ ಅವರನ್ನು ನೇಮಕ ಮಾಡಿದರೂ ತನಿಖೆ ಸಫಲವಾಗಲಿಲ್ಲ.

ಸಾರಾ ಮಹೇಶ್‌ಗಿರುವಷ್ಟು ಬುದ್ಧಿ ನನಗಿಲ್ಲ: ಜಿಟಿಡಿ

ಕಾರ್ಖಾನೆಯ ಮಾಲೀಕರು ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದು, ತನಿಖೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಸಂಘದ ಕಾರ್ಯದರ್ಶಿ ಸುರೇಶ್‌, ಸಂಘಟನಾ ಕಾರ್ಯದರ್ಶಿ ಕುಮಾರ್‌ ಇದ್ದರು.