ಗಂಗಮ್ಮ ಎಂಬ ವೃದ್ಧೆಯನ್ನು ಚಿರತೆ ಹೊತ್ತು ಕೊಂಡು ಹೋಗಿದ್ದ ಚಿರತೆ| ಕೊತ್ತಗಾನಹಳ್ಳಿಯ ಬಳಿ ಚಿರತೆಗಳನ್ನು ಸೆರೆ ಹಿಡಿಯಲು ಇಟ್ಟ ಬೋನ್| ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 2 ವರ್ಷದ ಹೆಣ್ಣು ಚಿರತೆ ಸೆರೆ|
ಮಾಗಡಿ (ಮೇ.22): ಸೋಲೂರು ಹೋಬಳಿ ಕೊತ್ತಗಾನಹಳ್ಳಿ ಬಳಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ 2 ವರ್ಷ ವಯಸ್ಸಿನ ಹೆಣ್ಣು ಚಿರತೆ ಸೆರೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಾಲೂಕಿನ ಸೊಲೂರು ಹೋಬಳಿ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರ ಬೆಳಿಗ್ಗೆ 5.30ರ ಸಮಯದಲ್ಲಿ ಮನೆಯ ಕಾಂಪೌಂಡ್‌ನಲ್ಲಿದ್ದ ಗಂಗಮ್ಮ ಎಂಬ ವೃದ್ಧೆಯನ್ನು ಚಿರತೆ ಹೊತ್ತು ಕೊಂಡು ಹೋಗಿತ್ತು. ಈ ಸ್ಥಳಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್, ಮಾಗಡಿ ಹಾಗೂ ನೆಲಮಂಗಲ ಶಾಸಕರು ಭೇಟಿ ನೀಡಿದ್ದರು.
ಚಿರತೆ ದಾಳಿ: ಮೃತರ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ, DCM ಅಶ್ವತ್ಥನಾರಾಯಣ
ಕೊತ್ತಗಾನಹಳ್ಳಿಯ ಬಳಿ ಚಿರತೆಗಳನ್ನು ಸೆರೆ ಹಿಡಿಯಲು ಬೋನ್ ಇಡುವುದರ ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಆಳವಡಿಸಲಾಗಿತ್ತು. ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 2 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
