Asianet Suvarna News Asianet Suvarna News

ಮಾಜಿ ಸಚಿವರ ನಿವಾಸದಲ್ಲಿ ಐಷಾರಾಮಿ ಕಾರು ಕಳ್ಳತನ

ಮಾಜಿ ಸಚಿವ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕೋಟೆ ಶಿವಣ್ಣ ಅವರ ಐಷಾರಾಮಿ ಕಾರನ್ನು ಮೂವರು ಮುಸುಕುಧಾರಿಗಳು ಕಳ್ಳತನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ 3ನೇ ಹಂತದ ಶಿವಣ್ಣ ಅವರ ನಿವಾಸದಲ್ಲಿ ಘಟನೆ 

 Luxury car theft at former minister s residence snr
Author
First Published Jun 8, 2023, 5:39 AM IST

 ಮೈಸೂರು :  ಮಾಜಿ ಸಚಿವ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕೋಟೆ ಶಿವಣ್ಣ ಅವರ ಐಷಾರಾಮಿ ಕಾರನ್ನು ಮೂವರು ಮುಸುಕುಧಾರಿಗಳು ಕಳ್ಳತನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ 3ನೇ ಹಂತದ ಶಿವಣ್ಣ ಅವರ ನಿವಾಸದಲ್ಲಿ ಘಟನೆ ನಡೆದಿದ್ದು, ಶಿವಣ್ಣ ಅವರಿಗೆ ಸೇರಿದ ಇನ್ನೋವಾ ಕಾರನ್ನು ಖದೀಮರು ಕದ್ದೊಯ್ದಿದ್ದಾರೆ. ಮುಖಕ್ಕೆ ಮಾಸ್ಕ್… ಹಾಕಿ, ಮನೆಗೆ ನುಗ್ಗಿದ ಕಳ್ಳರು ಈ ಕೃತ್ಯವೆಸಗಿದ್ದಾರೆ. ಜೂ. 6 ರಂದು ಮಧ್ಯರಾತ್ರಿ 1 ಗಂಟೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಕಾಂಪೌಂಡ್‌ ಹಾರಿ ಬಂದು ಮನೆಯಲ್ಲಿದ್ದ ಬೀಗವನ್ನು ಕದ್ದು, ಕಾರು ಕದ್ದೊಯ್ದಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗಳ್ಳನ ಬಂಧನ - ಚಿನ್ನಾಭರಣ ಜಪ್ತಿ

ಕಲಬುರಗಿ(ಜೂ.07):  ರಾತ್ರಿ ಮನೆ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಬಾಲಕನೊಬ್ಬನನ್ನು ಬಂಧಿಸಿ 25 ಗ್ರಾಂ. ಬಂಗಾರ ಮತ್ತು 150 ಗ್ರಾಂ. ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.

ಮನೆ ಬೀಗ ಮುರಿದು 10 ಗ್ರಾಂ. ಬಂಗಾರದ ಆಭರಣ ಮತ್ತು 17 ಸಾವಿರ ರು. ನಗದು ಕಳವು ಮಾಡಲಾಗಿದೆ ಎಂದು ನಗರದ ಎಂಎಸ್‌ಕೆಮಿಲ್‌ ಬಡಾವಣೆಯ ಇಕ್ಬಾಲ್‌ ಕಾಲೋನಿಯ ಮೊಹ್ಮದ್‌ ಜುಲ್ಪೇಖಾರೋದ್ದಿನ್‌ ಅವರು ರಾಘವೇಂದ್ರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು

10 ಕೋಟಿ ಮೌಲ್ಯದ 15000 ಎಲ್‌ಎಸ್‌ಡಿ ಮಾತ್ರೆಗಳು ವಶ: ಇತಿಹಾಸದಲ್ಲೇ ಬೃಹತ್‌ ಮೊತ್ತದ ಡ್ರಗ್ಸ್ ಜಪ್ತಿ

ಈ ದೂರಿನ ಅನ್ವಯ ನಗರ ಉಪ ಪೊಲೀಸ್‌ ಆಯುಕ್ತ ಅಡ್ಡೂರು ಶ್ರೀನಿವಾಸಲು ಅವರ ಮಾರ್ಗದರ್ಶನದಲ್ಲಿ ದಕ್ಷಿಣ ಉಪ ವಿಭಾಗದ ಎಸಿಪಿ ಭೂತೇಗೌಡ, ರಾಘವೇಂದ್ರ ನಗರ ಪೊಲೀಸ್‌ ಠಾಣೆ ಪಿಐ ಕುಬೇರ ಎಸ್‌.ರಾಯಮಾನೆ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಿಕ್ರೇಶ್ವರ, ಉಮೇಶ, ಮುಜಾಹಿದ್‌ ತೊತ್ವಾಲ್‌, ಶರಣಬಸವ, ಉಮೇಶ, ಆತ್ಮಕುಮಾರ ಅವರು ತನಿಖೆ ನಡೆಸಿ ಕಾನೂನು ಸಂಘರ್ಷಕ್ಕೆ ಒಳಪಟ್ಟ 16 ವರ್ಷದ ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಬಾಲಕ ಮೂರು ಮನೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. 

ಬಂಧಿತ ಆರೋಪಿಯಿಂದ 25 ಗ್ರಾಂ.ಬಂಗಾರದ ಆಭರಣ ಮತ್ತು 150 ಗ್ರಾಂ.ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಕ್ಕೆ ನಗರ ಪೊಲೀಸ್‌ ಆಯುಕ್ತ ಚೇತನ್‌ ಆರ್‍.ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios