Asianet Suvarna News Asianet Suvarna News

ಚಿಕ್ಕಮಗಳೂರಿನಲ್ಲಿ ಭೂಕಂಪ, ಏನಾಗಿದೆ ಪರಿಸರಕ್ಕೆ?

ಮಲೆನಾಡಲ್ಲಿ  ಮತ್ತೆ ಭೂಮಿ ಕಂಪಿಸಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ‌ತಾಲೂಕಿನ‌ ಕೊಗ್ರೆ, ಅಬ್ಬಿಕಲ್ಲು ಗ್ರಾಮದಲ್ಲಿ ಭೂಕಂಪನದ ಅನುಭವವಾಗಿದೆ. 

Low-magnitude earthquake rattles Chikkamagaluru
Author
Bengaluru, First Published Aug 25, 2018, 6:14 PM IST

ಚಿಕ್ಕಮಗಳೂರು[ಆ.25]  ಭಾರೀ ಶಬ್ದದೊಂದಿಗೆ ಮತ್ತೆ ಮಲೆನಾಡಿನಲ್ಲಿ ಭೂಮಿ ಕಂಪಿಸಿದೆ.  ಭೂಮಿಯೊಳಗಿಂದ ಶಬ್ದ ಕೇಳಿ ಬಂದಿದೆ.  ಕೊಪ್ಪ ‌ತಾಲೂಕಿನ‌ ಕೊಗ್ರೆ, ಅಬ್ಬಿಕಲ್ಲು ಗ್ರಾಮದಲ್ಲಿ  ಭೂಕಂಪನದ ಅನುಭವವಾಗಿದೆ.

ಹತ್ತಿರದ ಕೊಗ್ರೆ ಗ್ರಾಮ ಕೆಲ ಸೆಕೆಂಡ್  ಕಾಲ‌ ಭೂಮಿ ಕಂಪನದ  ‌ಅನುಭವ. ಮಧ್ಯ ರಾತ್ರಿ ಕೇಳಿ ಬಂದ ಶಬ್ದಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ 10 ದಿನದ ಹಿಂದೆಯೂ ಹೀಗೆ ಭೂಮಿ ಕಂಪಿಸಿತ್ತು.  ಭೂಕಂಪನದ ಪರಿಣಾಮ ನಾಲ್ಕಕ್ಕೂ ಅಧಿಕ ಮನೆಗಳು ಬಿರುಕು ಬಿಟ್ಟಿವೆ.

ನಿರಂತರವಾಗಿ ಭೂಮಿ ಕಂಪಿಸಲು ಏನು ಕಾರಣ


ಒಂದೆಡೆ ನಿರಂತರ ಮಳೆ, ಭೂಕುಸಿತದಿಂದ ಜರ್ಜರಿತವಾಗಿರುವ ಮಲೆನಾಡಿನಲ್ಲಿ ಇದೀಗ ಭೂ ಕಂಪದ ಆತಂಕವೂ ಕಾಡುತ್ತಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹಾನಿ ನಿರಂತರವಾಗಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

Follow Us:
Download App:
  • android
  • ios