ಮುನಿಸಿಕೊಂಡ ನಿಸರ್ಗ, ಭಾರತದಲ್ಲಿ ಭೂಕಂಪ
ಮಾನವನ ಮೇಲೆ ಮುನಿಸಿಕೊಂಡಿರುವ ನಿಸರ್ಗ ಸದ್ಯಕ್ಕೆ ಸುಮ್ಮನಾಗುವಂತೆ ಕಾಣುತ್ತಿಲ್ಲ. ಪ್ರಹಾಹದಿಂದ ಇಡೀ ಕೇರಳವನ್ನೇ ಬಲಿ ಪಡೆದಿದ್ದ ಪ್ರಕೃತಿಯಲ್ಲಿ ಇದೀಗ ಭೂಕಂಪನವೂ ಆಗಿದೆ.
ಅಂಡಮಾನ್[ಆ.25] ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಭೂಕಂಪನವಾಗಿದ್ದು ರಿಕ್ಟರ್ ಮಾಪನದಲ್ಲಿ 5.5 ತೀವ್ರತೆ ದಾಖಲಾಗಿದೆ. ಯುನೖಟೆಡ್ ಸ್ಟೇಟ್ಸ್ ಭೂಗರ್ಭ ವಿಭಾಗ ಹೇಳುವಂತೆ ಪೋರ್ಟ್ ಬ್ಲೇರ್ ನಿಂದ 150 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಕಂಡುಬಂದಿದೆ.
ಶುಕ್ರವಾರ ಮಧ್ಯಾಹ್ನ 4.19 ರ ವೇಳೆ 27 ಸೆಕೆಂಡ್ ಕಾಲ ಭೂಕಂಪ ಆಗಿದೆ. ಭೂಮಿಯ 10 ಕಿಮೀ ಆಳದದಲ್ಲಿ ಭೂಕಂಪನ ಆಗಿದ್ದು ಹಿಂದೆ ಜುಲೈ5 ಮತ್ತು 4 ರಂದು ಸಣ್ಣ ಪ್ರಮಾಣದಲ್ಲಿ ಭೂಮಿ ನಡುಗಿದ್ದ ವಿವರಗಳು ಲಭ್ಯವಾಗಿವೆ.
ಕೊಡಗು ಪ್ರವಾಹಕ್ಕೆ ಭೂಕಂಪನ ಕಾರಣವೆ?
ಒಂದು ಕಡೆ ಕೇರಳದಲ್ಲಿ ಜಲಪ್ರಳಯವಾಗಿದ್ದು ಜನರು ಮತ್ತೆ ಜೀವನ ಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ. ಕರ್ನಾಟಕದ ಕೊಡಗಿನಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ.