ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ಹಿಂದೂ ಜಾಗರಣಾ ವೇದಿಕೆ ಶಿರ್ಲಾಲು ಘಟಕದ ಕಾರ್ಯಕರ್ತರು ಲವ್‌ ಜಿಹಾದ್‌ ನ ಎಚ್ಚರಿಕೆ ನೀಡುವ ಬ್ಯಾನರ್‌ ಅಳವಡಿಸಿದ್ದಾರೆ.

ಕಾರ್ಕಳ (ನ.26): ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ ಹಿಂದೂ ಜಾಗರಣಾ ವೇದಿಕೆ ಶಿರ್ಲಾಲು ಘಟಕದ ಕಾರ್ಯಕರ್ತರು ಲವ್‌ ಜಿಹಾದ್‌ ನ ಎಚ್ಚರಿಕೆ ನೀಡುವ ಬ್ಯಾನರ್‌ ಅಳವಡಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಖಾಸಗಿ ಬಸ್‌ ಚಾಲಕನೋರ್ವ 30 ಕಾಲೇಜು ವಿದ್ಯಾರ್ಥಿನಿಯರನ್ನು ಅಶ್ಲೀಲ ಚಿತ್ರಗಳನ್ನು ರವಾನಿಸಿ ಬ್ಲಾಕ್‌ ಮೆಲ್‌ ಮಾಡಿ ಲವ್‌ ಜಿಹಾದ್‌ ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂತಹ ಬ್ಯಾನರ್‌ ಅಳವಡಿಸಲಾಗಿದೆ ಎಂದು ಹಿಂಜಾವೆ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಹಿಂದೂ ಶ್ರದ್ಧಾ ಹುಡುಗಿ ಶ್ರದ್ಧಾ ಹತ್ಯೆ ದೇಹವನ್ನು 35 ತುಂಡು ಮಾಡಿದರು ಕಾರಣ ಲವ್‌ ಜಿಹಾದ್‌ ನೀವು ಇದಕ್ಕೆ ಬಲಿಯಾಗಬೇಡಿ ಎಂದು ಬ್ಯಾನರ್‌ ನಲ್ಲಿ ಬರೆಯಲಾಗಿದೆ.

ದಕ್ಷಿಣ ಕನ್ನಡ: ಡಿ.1ರಿಂದ ಆಟೋ ಪ್ರಯಾಣ ದರ ಕನಿಷ್ಠ ದರ 35 ರು.

ಅನೈತಿಕ ಪೊಲೀಸ್‌ಗಿರಿ ಆರೋಪ: ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗೆ ಹಲ್ಲೆ

ಮಂಗಳೂರು: ನಗರದ ನಂತೂರು ಬಳಿ ಕಾರ್ಕಳದ ಖಾಸಗಿ ಕಾಲೇಜು ವಿದ್ಯಾರ್ಥಿ ಸೈಯದ್‌ ರಶೀಮ… ಉಮರ್‌ (20) ಎಂಬಾತನಿಗೆ ತಂಡವೊಂದು ಗುರುವಾರ ಸಂಜೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಇದೊಂದು ಅನೈತಿಕ ಪೊಲೀಸ್‌ಗಿರಿ ಎಂದು ಆರೋಪಿಸಲಾಗಿದೆ. ಕಾರ್ಕಳ-ನಿಟ್ಟೆಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಒಂದೇ ಸೀಟ್‌ನಲ್ಲಿ ಹಿಂದೂ ಯುವತಿ ಹಾಗೂ ಸಹಪಾಠಿ ಜತೆ ಸೈಯದ್‌ ರಶೀಮ್‌ ಉಮರ್‌ ಪ್ರತಿ ದಿನ ಪ್ರಯಾಣಿಸುತ್ತಿದ್ದ. ಈ ವಿಚಾರದಲ್ಲಿ 3-4 ಮಂದಿ ಅಪರಿಚಿತರು ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಆತನನ್ನು ಎಳೆದು ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಅಲ್ಲಿ ಕರ್ತವ್ಯ ನಿರತ ಸಂಚಾರಿ ಪೊಲೀಸರು ಆಗಮಿಸಿ ಘಟನೆಯನ್ನು ತಡೆದಿದ್ದಾರೆ.

ತಂಡ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದೆ ಎಂದು ಸೈಯದ್‌ ರಶೀಮ್‌ ಉಮರ್‌ ಕದ್ರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆ ನಡೆಸಿದ್ದು ಹಿಂದೂ ಸಂಘಟನೆ ಸೇರಿದವರು ಎಂದು ಆರೋಪಿಸಲಾಗಿದೆ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃದ್ಧೆಯನ್ನ ಲೂಟಿ ಮಾಡಿದ ಹೋಮ್‌ ನರ್ಸ್‌ ಬಂಧನ

ಹಿರಿಯಡ್ಕ: ವಯೋವೃದ್ಧೆಯನ್ನು ಲೂಟಿ ಮಾಡಿದ ಹೋಮ್‌ ನರ್ಸ್‌ ರೇಖಾ ಹೆಬ್ಬಾಳಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆಯ ನಿವಾಸಿಯಾಗಿರುವ ರೇಖಾ ಎಂಬಾಕೆಯನ್ನು ಮ್ಯಾರೇಜ್‌ ಬ್ಯುರೋವೊಂದರ ಮೂಲಕ ಇಲ್ಲಿನ ಮದಗ ಎಂಬಲ್ಲಿನ ನಿವಾಸಿ ಸರಸ್ವತಿ (98) ಎಂಬವರ ಆರೈಕೆಗೆ ನಿಯೋಜಿಸಲಾಗಿತ್ತು. ನ.21ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಸುಮಾರು 1.45 ಲಕ್ಷ ರು. ಬೆಲಬಾಳುವ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಳು. ಈ ಬಗ್ಗೆ ವೃದ್ಧೆಯ ಮಗ ಶುಕ್ರವಾರ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಅದೇ ದಿನ ಉಡುಪಿಯಲ್ಲಿ ಹೋಂನರ್ಸ್‌ ರೇಖಾಳನ್ನು ವಶಕ್ಕೆ ಪಡೆದು ಕಳವು ಮಾಡಿದ ಸರವನ್ನು ವಶಪಡಿಸಿಕೊಂಡು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಿರಿಯಡ್ಕ ಠಾಣೆಯ ಎಸ್‌ಐ ಅನಿಲ್‌ ಬಿ.ಎಂ. ಮತ್ತು ಸಿಬ್ಬಂದಿಯ ಈ ಕ್ಷಿಪ್ರ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

 ಆರೋಗ್ಯ ಸಹಾಯಕಿಗೆ ನಿಂದನೆ: ದೂರು

ಕಾರ್ಕಳ: ಆರೋಗ್ಯ ಸಹಾಯಕಿಗೆ ವ್ಯಕ್ತಿಯೊಬ್ಬರು ಬೆದರಿಸಿ ನಿಂದಿಸಿದ ಘಟನೆ ಕಾರ್ಕಳ ಪುರಸಭೆಯಲ್ಲಿ ಗುರುವಾರ ನಡೆದಿದೆ. ಉಮೇಶ್‌ ಕಲ್ಲೊಟ್ಟೆಎಂಬಾತ ಕಾರ್ಕಳ ಪುರಸಭೆಯ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್‌ ಎಂಬವರಿಗೆ ಬೆದರಿಕೆ ಹಾಕಿದ ವ್ಯಕ್ತಿ.

ಸಮಾಜಘಾತುಕ ಶಕ್ತಿಗಳ ಬಗ್ಗೆ ಮೃದು ಧೋರಣೆ ಇಲ್ಲ: ಸಚಿವ ಸುನಿಲ್‌ ಕುಮಾರ್‌

ಪುರಸಭೆಯಲ್ಲಿ ಆರೋಗ್ಯ ಸಹಾಯಕಿಯಾಗಿರುವ ಲೈಲಾ ಥೋಮಸ್‌ ಅವರು ಕಚೇರಿ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆಗಮಿಸಿದ ಉಮೇಶ್‌ ಕಲ್ಲೊಟ್ಟೆ, ನಾನು ಈ ಹಿಂದೆ ಆಡು ಮತ್ತು ಕುರಿ ಮಾಂಸದ ಅಂಗಡಿ ನಡೆಸಲು ವ್ಯಾಪಾರ ಪರವನಾಗಿ ಕೋರಿ ಅರ್ಜಿ ಸಲ್ಲಿಸಿದ್ದೆ. ಆದರೆ ಈವರೆಗೂ ಯಾಕೆ ಪರವಾನಗಿ ನೀಡಿಲ್ಲ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾನೆ. ವ್ಯಾಪಾರ ಪರವಾನಗಿ ನೀಡುವ ಬಗ್ಗೆ ಮೇಲಧಿಕಾರಿಯವರಲ್ಲಿ ಕೇಳುವಂತೆ ತಿಳಿಸಿದಾಗ ತನಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.