Asianet Suvarna News Asianet Suvarna News

ಅಡುಗೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಯಾದಗಿರಿಯಲ್ಲಿ ತಪ್ಪಿದ ಭಾರೀ ದುರಂತ!

ಅಡುಗೆ ಸಿಲಿಂಡರ್‌ಗಳನ್ನು ಹೊತ್ತುಕೊಂಡು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ  ಹುನಗುಂದ-ಸುರಪುರ ರಾಜ್ಯ ಹೆದ್ದಾರಿ ಬಳಿ ನಡೆದಿದೆ.

Lorry carrying the cooking cylinder overturned At Yadgir gvd
Author
First Published May 22, 2023, 11:30 PM IST

ಯಾದಗಿರಿ (ಮೇ.22): ಅಡುಗೆ ಸಿಲಿಂಡರ್‌ಗಳನ್ನು ಹೊತ್ತುಕೊಂಡು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ  ಹುನಗುಂದ-ಸುರಪುರ ರಾಜ್ಯ ಹೆದ್ದಾರಿ ಬಳಿ ನಡೆದಿದೆ. ಲಾರಿ ಪಲ್ಟಿಯಿಂದ ನೂರಾರು ಸಿಲಿಂಡರ್ ಗಳು‌ ರಸ್ತೆ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಶ್ರೀನಿಧಿ ಗ್ಯಾಸ್ ಎಂಬ ಏಜೆನ್ಸಿಗೆ ಸೇರಿದ ಸಿಲಿಂಡರ್ ತೆಗೆದುಕೊಂಡು ಲಾರಿ ಹೋಗುತಿದ್ದಾಗ ಈ ದುರಂತ ನಡೆದಿದೆ. 

ಲಾರಿ ಪಲ್ಟಿಯಿಂದಾಗಿ ಲಾರಿಯಲ್ಲಿದ್ದ ನೂರಾರು ಅಡುಗೆ ಸಿಲಿಂಡರ್ ಗಳು ರಸ್ತೆಯ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆದ್ರೆ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ. ಈ ಘಟನೆಯಲ್ಲಿ ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಅಡುಗೆ ಸಿಲಿಡಂರ್ ಲಾರಿ ಪಲ್ಟಿಯಿಂದ ನೂರಾರು ಸಿಲಿಂಡರ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡ ಸಾರ್ವಜನಿಕರು ಕೆಲಕಾಲ ಭಯಬೀತರಾಗಿದ್ದಾರೆ. ಈ ಘಟನೆಯು ಕೆಂಭಾವಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Chamarajanagar: ತಾತ, ಅಪ್ಪನಂತೆ ಸೋಲದೆ ಗೆದ್ದ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌!

ಮದ್ಯದ ಲಾರಿ ಪಲ್ಟಿ: ಯಲ್ಲಾಪುರ ತಾಲೂಕಿನ ಆರ್ತಿಬೈಲ್‌ ಘಟ್ಟದಲ್ಲಿ ಮದ್ಯದ ಬಾಕ್ಸ್‌ ತುಂಬಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗಟಾರಕ್ಕೆ ಉರುಳಿಬಿದ್ದ ಘಟನೆ ಮಂಗಳವಾರ ಸಂಭವಿಸಿದೆ. ಕಲ್ಬುರ್ಗಿಯಿಂದ ಉಡುಪಿಗೆ ವಿವಿಧ ಮಾದರಿಯ ಮದ್ಯದ ಬಾಟಲ್‌ ಇರುವ ಬಾಕ್ಸ್‌ಗಳನ್ನು ಲೋಡ್‌ ಮಾಡಿಕೊಂಡು ಸಾಗುತ್ತಿದ್ದ ಲಾರಿಯು ತಾಲೂಕಿನ ಅರ್ತಿಬೈಲ್‌ ಘಟ್ಟಪ್ರದೇಶದ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. 

ಬಿದ್ದ ರಭಸಕ್ಕೆ ಲಾರಿಯ ಮುಂಬಾಗ ಜಖಂ ಆಗಿದ್ದು ಲಾರಿಯಲಿದ್ದ ಚಾಲಕ ಮತ್ತು ಸಹಾಯಕನಿಗೆ ಪೆಟ್ಟಾಗಿದೆ. ಮಾಹಿತಿ ಲಭಿಸುತ್ತಲೇ ತಕ್ಷಣ 108 ಆ್ಯಂಬುಲೆನ್ಸ್‌ ಮೂಲಕ ಚಿಕಿತ್ಸೆಗಾಗಿ ಯಲ್ಲಾಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪಘಾತ ತಪ್ಪಿಸಲು ಯತ್ನಿಸಿ ಲಾರಿ ಪಲ್ಟಿ: ಉತ್ತರ ಪ್ರದೇಶದ ಲಖನೌದಿಂದ ತಂಪು ಪಾನೀಯಗಳ ಬಾಟಲಿಗಳನ್ನು ಹೊತ್ತು ಹೊರಟಿದ್ದ ಲಾರಿಯೊಂದು ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಹೊಡೆದಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ನಗರದ ಹೊರ ವಲಯದ ಅಗಲಗುರ್ಕಿ ಬೈಪಾಸ್‌ ಬಳಿ ನೆಲಮಂಗಲಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದ್ದು ಅದೃಷ್ಟವಾಶಾತ್‌ ಲಾರಿ ಚಾಲಕ ಮತ್ತು ಕ್ಲೀನರ್‌ ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ: ಸಚಿವ ಮುನಿಯಪ್ಪ

ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಲಾರಿ ಚಾಲಕ ದಿಢೀರ್‌ ಅಂತ ಬ್ರೇಕ್‌ ಹಾಕಿದಾಗ ಈ ಘಟನೆ ನಡೆದಿದೆ. ಅಪಘಾತ ವೇಳೆ ಲಾರಿಯಲ್ಲಿ ತುಂಬಿದ್ದ ಅಪಾರ ಪ್ರಮಾಣದ ತಂಪು ಪಾನೀಯಗಳ ಬಾಟಲುಗಳು ಲಾರಿಯಿಂದ ಹೊರ ಬಿದ್ದು ಅಪಾರ ಪ್ರಮಾಣದ ನಷ್ಠ ಸಂಭಭವಿಸಿದೆ. ರಸ್ತೆಗೆ ಬಿದ್ದಿದ್ದ ತಂಪು ಪಾನೀಯಗಳನ್ನು ದಾರಿಹೋಕರು ತೆಗೆದುಕೊಂಡು ಹೊಗಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಕ್ರೈನ್‌ ಬಳಸಿ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Follow Us:
Download App:
  • android
  • ios