ಶಿವನೇ ನನಗೆ ಹುಡುಗಿ ಕರುಣಿಸು, ಶ್ರೀ ಚಾಮರಾಜೇಶ್ವರನಿಗೆ ಪತ್ರ ಬರೆದು ಹುಂಡಿಗೆ ಹಾಕಿದ ಭೂಪ!

 ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ವೇಳೆ ಚಿತ್ರ ವಿಚಿತ್ರ ಪತ್ರಗಳು ಸಿಕ್ಕಿವೆ. ಭಕ್ತನೋರ್ವ  ಶಿವನೇ ನನಗೆ ಹುಡುಗಿ ಕರುಣಿಸು ಎಂದು ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದು, ಹುಂಡಿ ಎಣಿಕೆ ಸಂದರ್ಭದಲ್ಲಿ ಸಿಕ್ಕಿದೆ.

Lord Shiva give me a girl devotee wrote a letter to Sri Chamarajeshwara god gow

ಚಾಮರಾಜನಗರ (ಡಿ.23): ತನ್ನ ಇಷ್ಟಾರ್ಥಗಳನ್ನು ಈಡೇರಿಸುವ ಎಂದು ದೇವರಲ್ಲಿ ಎಲ್ಲರೂ ಪ್ರಾರ್ಥಿಸಿ ಕಾಣಿಕೆ ಹಾಕುತ್ತೇವೆ. ಆದರೆ ಇಲ್ಲೋಬ್ಬ ಭೂಪ, ಶಿವನೇ ನನಗೆ ಹುಡುಗಿ ಕರುಣಿಸು ಎಂದು ಪತ್ರ ಬರೆದು ಹುಂಡಿಯಲ್ಲಿ ಹಾಕಿದ್ದು, ಹುಂಡಿ ಎಣಿಕೆ ಸಂದರ್ಭದಲ್ಲಿ ಹಣದ ಜೊತೆ ಪತ್ರ ಸಿಕ್ಕಿದೆ.  ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ವೇಳೆ ಚಿತ್ರ ವಿಚಿತ್ರ ಪತ್ರಗಳು ಸಿಕ್ಕಿದ್ದು, ರಾಜೇಂದ್ರ ಉಪ್ಪಾರ ಬೀದಿ ಎಂದು ಬರೆದಿರುವ ಪತ್ರದಲ್ಲಿ ನನಗೆ ಹುಡುಗಿ ಕರುಣಿಸು ಎಂದು  ಉಲ್ಲೇಖಿಸಲಾಗಿದೆ. ದೇವರ ರಾಜ್ಯವು ಸಮೀಪಿಸಿದೆ ಎಂಬ ಒಕ್ಕಣೆಯುಳ್ಳ ಮತ್ತೊಂದು ಪತ್ರವೂ ಪತ್ತೆಯಾಗಿದೆ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದು ಕೊಂಡ ಎಂದು  ಪತ್ರದಲ್ಲಿ ಬರೆದಿರುವುದು ಕಂಡುಬಂದಿದೆ. ಪತ್ರಿ ಭಾರಿಯಂತೆ ಈ ಬಾರಿಯೂ ಶ್ರೀ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ನಡೆದಿದ್ದು, ಒಟ್ಟು 7,61,641.00  ಲಕ್ಷ ನಗದು ಸಂಗ್ರಹವಾಗಿದೆ.

ಹುಂಡಿಯಲ್ಲಿ ಪ್ರೇಮಪತ್ರ, ಯುವತಿ ಫೋಟೋ!: 
ಚಾಮರಾಜನಗರ ತಹಶಿಲ್ದಾರ್ ಬಸವರಾಜ್ ನೇತೃತ್ವದಲ್ಲಿ ಅರ್ಚಕ ರಾಮಕೃಷ್ಣ ಭಾರದ್ವಜ್, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್‌ ಹಾಗೂ ಇನ್ನಿತರರು 7 ತಾಸು ಹುಂಡಿ ಎಣಿಕೆ ಕಾರ್ಯ ನಡೆಸಿದ್ದು 7,61,641 ರು. ಹಣ ಸಂಗ್ರಹವಾಗಿದೆ.

ಸರಿಸುಮಾರು ಒಂದೂವರೆ ವರ್ಷಗಳ ಬಳಿಕ ಎಣಿಕೆ ಕಾರ್ಯ ಗುರುವಾರ ನಡೆದಿರುವುದರಿಂದ ಇದುವರೆಗೆ ಸಂಗ್ರಹವಾಗಿದ್ದ ಅತಿಹೆಚ್ಚು ಹಣ ಇದಾಗಿದೆ. ದೇವಾಲಯ ಜೀರ್ಣೋದ್ಧಾರ ಹಾಗೂ ರಥೋತ್ಸವ ನಡೆದಿದ್ದರಿಂದ ಇಷ್ಟುಹಣ ಸಂಗ್ರಹವಾಗಿದೆ ಎನ್ನಲಾಗಿದೆ.

ಚಾಮರಾಜನಗರ: ಮಾದಪ್ಪನ ಹುಂಡಿಯಲ್ಲಿ 1.70 ಕೋಟಿ ಹಣ, ಕೆಜಿಗಟ್ಟಲೇ ಆಭರಣ..!

ಹುಂಡಿ ಎಣಿಕೆ ವೇಳೆ ಹಣದೊಂದಿಗೆ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿದ್ದು, ಏಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಬರೆದು ದೇವರ ಹುಂಡಿಗೆ ಹಾಕಿದ್ದು ದೇವರ ರಾಜ್ಯ ಸಮೀಪಿಸಿದೆ ಎಂಬ ನಿಗೂಢಾರ್ಥ ವಾಕ್ಯವನ್ನು ಬರೆದುಕೊಂಡಿದ್ದಾನೆ.

ಹಾಸನ: ಹುಂಡಿ ಎಣಿಕೆ ಕಾರ್ಯ ಮುಕ್ತಾಯ, ಹಾಸನಾಂಬೆಗೆ ಹರಿದು ಬಂದ ಕೋಟಿ ಕೊಟಿ ಆದಾಯ..!

ಅಲ್ಲದೇ ಯುವಕನೋರ್ವ ತನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದಾನೆ. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿದೆ.

Latest Videos
Follow Us:
Download App:
  • android
  • ios