Asianet Suvarna News Asianet Suvarna News

ಹಾಸನ: ಹುಂಡಿ ಎಣಿಕೆ ಕಾರ್ಯ ಮುಕ್ತಾಯ, ಹಾಸನಾಂಬೆಗೆ ಹರಿದು ಬಂದ ಕೋಟಿ ಕೊಟಿ ಆದಾಯ..!

ಅ.13 ರಿಂದ ಅ.27 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವ, ಆರು ಲಕ್ಷಕ್ಕೂ ಅಧಿಕ ಭಕ್ತರಿಂದ ದೇವಿಯ ದರ್ಶನ 

36951251 Rs Collect in Hasanamba Temple Hundi in Hassan grg
Author
First Published Oct 29, 2022, 7:59 AM IST

ಹಾಸನ(ಅ.29):  ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಹಾಸನಾಂಬೆಗೆ ಈ ವರ್ಷವೂ ಕೋಟಿ ಕೊಟಿ ಆದಾಯ ಹರಿದು ಬಂದಿದೆ. ಹೌದು, ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ 3 ಕೋಟಿ 69 ಲಕ್ಷದ 51 ಸಾವಿರದ 251 ರೂ ಆದಾಯ ಬಂದಿದ್ದು ಈ ಪೈಕಿ  ಭಕ್ತರಿಂದ ಕಾಣಿಕೆ ರೂಪದಲ್ಲಿ 1 ಕೋಟಿ 88 ಲಕ್ಷದ 40 ಸಾವಿರದ 935 ರೂ ಸಂಗ್ರಹವಾಗಿದೆ. 

ವಿಶೇಷ ದರ್ಶನದ ಪಾಸ್ ಮಾರಾಟದಿಂದಲೂ 1 ಕೋಟಿ 48 ಲಕ್ಷದ 27 ಸಾವಿರದ 600 ರೂ ಸಂಗ್ರಹವಾಗಿದೆ. ಲಡ್ಡು ಪ್ರಸಾದ ಮಾರಾಟದಿಂದ 32 ಲಕ್ಷದ 82 ಸಾವಿರದ 716 ರೂ ಆದಾಯ ಸೇರಿ ಎಲ್ಲಾ ಮೂಲಗಳೂ ಸೇರಿ ಒಟ್ಟು 3,69,51,251 ರೂ. ಸಂಗ್ರಹವಾಗಿದೆ. 

ಜನವರಿವರೆಗೆ ತಪ್ಪೋಲ್ಲ ಲೋಕ ಕಂಟಕ, ದೇಹಗಳು ದಾರಿಯಲ್ಲೇ ಬಿದ್ದು ಸಾಯುತ್ವೆ; ಕೋಡಿಶ್ರೀ ಭವಿಷ್ಯ ಬಾಂಬ್!

ಹಾಸನಾಂಬೆ ದರ್ಶನದ ವೇಳೆ ಸಂಗ್ರಹದಲ್ಲಿ ಎರಡನೇ ಅತಿ ಹೆಚ್ಚು ಮೊತ್ತದ ದಾಖಲೆಯ ಆದಾಯ ಸಂಗ್ರಹವಾಗಿದೆ. ಕೋವಿಡ್ ಸಂದರ್ಭದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದೆ ಆದಾಯ ಕುಸಿದಿತ್ತು. ಈ ಬಾರಿ ಮತ್ತೆ ಕೋಟಿ ಕೋಟಿ ಆದಾಯ ಸಂಗ್ರಹವಾಗಿದೆ. 

ಈ ಹಿಂದೆ 2017 ರಲ್ಲಿ ಅತಿ ಹೆಚ್ಚು 4.14 ಕೋಟಿ ಹಣ ಸಂಗ್ರಹವಾಗಿತ್ತು 2017ರ ಹೊರತುಪಡಿಸಿ ಈ ವರ್ಷ ಅತಿಹೆಚ್ಚು ಆದಾಯ ಸಂಗ್ರಹವಾಗಿದೆ. ಒಟ್ಟು 15 ದಿನಗಳು ನಡೆದಿದ್ದ ಹಾಸನಾಂಬೆ ದರ್ಶನೋತ್ಸವದಲ್ಲಿ ಆರು ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಅಕ್ಟೋಬರ್ 13 ರಿಂದ ಅಕ್ಟೋಬರ್ 27 ರ ವರೆಗೆ ಹಾಸನಾಂಬೆ ಉತ್ಸವ ನಡೆದಿತ್ತು.  
 

Follow Us:
Download App:
  • android
  • ios