ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ನ್ಯಾ. ಪಾಟೀಲ್ ದಿಢೀರ್ ಭೇಟಿ, ಆಸ್ಪತ್ರೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗಕ್ಕೆ ಭೇಟಿ ನೀಡಿ ಮಕ್ಕಳ ಪಾಲಕರನ್ನು ವಿಚಾರಿಸಿದರು. ಆಸ್ಪತ್ರೆಯ ಅವ್ಯವಸ್ಥೆಗೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಗರಂ ಆದರು.
ಶಿವಮೊಗ್ಗ (ಜ.7): ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗಕ್ಕೆ ಭೇಟಿ ನೀಡಿ ಮಕ್ಕಳ ಪಾಲಕರನ್ನು ವಿಚಾರಿಸಿದರು. ಈ ವೇಳೆ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಕ್ಕಳ ಪಾಲಕರು ದೂರು ನೀಡಿದ್ದಾರೆ. ಸಿಬ್ಬಂದಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ದಾರೆ. ಜೊತೆಗೆ ಕಳಪೆ ಆಹಾರ ಕೊಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಆಸ್ಪತ್ರೆ ವಾತಾವರಣ ಕಂಡು ಗರಂ ಆದ ಲೋಕಾಯುಕ್ತರು ಹಳೇ ಕಟ್ಡಡ ನಿರ್ವಹಣೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ಭೇಟಿಯೊಳಗೆ ಕಟ್ಟಡ ದುರಸ್ತಿ ಆಗಿರಬೇಕೆಂದು ವೈದ್ಯರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.
ಆಸ್ಪತ್ರೆ ವಾರ್ಡ್, ಮಕ್ಕಳ ತೀವ್ರ ನಿಗಾ ಘಟಕ ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದುಕೊಂಡ ಲೋಕಾಯುಕ್ತರು. ಮಕ್ಕಳ ವಿಭಾಗಕ್ಕೂ ಭೇಟಿ ನೀಡಿ ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ಘಟಕ, ಪೌಷ್ಠಿಕ ಪುನರ್ವಸತಿ ಕೇಂದ್ರ ವೀಕ್ಷಣೆ ನಡೆಸಿದರು.
ಶರಾವತಿ ಮಕ್ಕಳ ವಿಭಾಗ ಜೀರ್ಣಾವಸ್ಥೆ ಹಿನ್ನೆಲೆ. ಲೋಕಾಯುಕ್ತರು ಮೆಗ್ಗಾನ್ ಸಿವಿಲ್ ವಿಭಾಗದ ಅಧಿಕಾರಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿಕೊಂಡರು. ಎಇಇ, ಇಇ, ಸಿಇ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಬಳಿಕ ಅಧಿಕಾರಿಗಳಿಗೆ ನ್ಯಾ. ಬಿ.ಎಸ್. ಪಾಟೀಲ್ ಒಂದು ತಿಂಗಳ ಗಡುವು ನೀಡಿದ್ದಾರೆ.
ಸರ್ಕಾರದಿಂದ ಗುತ್ತಿಗೆದಾರರ ₹6 ಸಾವಿರ ಕೋಟಿ ಬಾಕಿ: ಸುಭಾಸ ಪಾಟೀಲ ಆರೋಪ
ಫೆಬ್ರವರಿ ತಿಂಗಳಲ್ಲಿ ಮತ್ತೆ ಭೇಟಿ ನೀಡುತ್ತೇನೆ. ಇಡೀ ತಂಡದೊಂದಿಗೆ ಮತ್ತೆ ಬರುತ್ತೇನೆ. ಆಸ್ಪತ್ರೆಯಲ್ಲಿ ಸೌಲಭ್ಯ ಸಮರ್ಪಕವಾಗಿರಬೇಕು. ಸಿಬ್ಬಂದಿ ಹಾಜರಾತಿ, ಔಷಧ ರಿಜಿಸ್ಟರ್ ಸಮರ್ಪಕವಾಗಿರಬೇಕು ಎಂದು ಎಚ್ಚರಿಕೆ ನೀಡಿ ವೈದ್ಯರಿಗೆ ಕೂಡ ಖಡಕ್ ಸೂಚನೆ ನೀಡಿದರು.
ಚಿಕಿತ್ಸೆ ಜೊತೆ ರೋಗಿಗಳಿಗೆ ಸಹಾನುಭೂತಿಯ ಆರೈಕೆಯೂ ಬೇಕು: ವೈದ್ಯರೊಬ್ಬರು ಹೇಳ್ತಾರೆ ಕೇಳಿ!
ಶಿವಮೊಗ್ಗದಲ್ಲಿ ಲೋಕಾಯುಕ್ತರಿಂದ ಸಿಟಿ ರೌಂಡ್ಸ್:
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಶಿವಮೊಗ್ಗ ನಗರದಲ್ಲಿ ಸ್ವಚ್ಛತೆ ಪರಿಶೀಲಿಸಿದರು. ನಗರದಲ್ಲಿನ ಕಸ ವಿಲೇವಾರಿ ಕಾರ್ಯ ವೀಕ್ಷಿಸಿದರು. ಗೋಪಾಳ ರಸ್ತೆ, ಸಾಗರ ರಸ್ತೆ, ವಿನೋಬ ನಗರ, ಶಂಕರಮಠ ರಸ್ತೆ, ಬಿ.ಹೆಚ್. ರಸ್ತೆ, ಎನ್.ಟಿ. ರಸ್ತೆ, ಗೋಪಿ ವೃತ್ತ, ಕುವೆಂಪು ರಸ್ತೆಗಳಲ್ಲಿ ಲೋಕಾಯುಕ್ತರು ಸಂಚಾರ ಮಾಡಿದರು.