Asianet Suvarna News Asianet Suvarna News

ಲೋಕಸಭಾ ಚುನಾವಣೆ- ಮೈಸೂರು ಜಿಲ್ಲೆಯಲ್ಲಿ 26,99,835 ಮತದಾರರು

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರು ಸೇರಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 26,99,835 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

Lok Sabha Elections- 26,99,835 voters in Mysore district snr
Author
First Published Jan 23, 2024, 11:51 AM IST

 ಮೈಸೂರು : 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಹೊಸ ಮತದಾರರು ಸೇರಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 26,99,835 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22 ರಂದು ಅಂತಿಮ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಪುರುಷರು 1331772, ಮಹಿಳೆಯರು 1367843 ಮತ್ತು ತೃತೀಯ ಲಿಂಗಿಗಳು 220 ಮತದಾರರಿದ್ದಾರೆ ಎಂದರು.

50696 ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. 27159 ಪುರುಷರು, 23770 ಮಹಿಳೆಯರು, ನಾಲ್ವರು ತೃತೀಯ ಲಿಂಗಿ ಮತದಾರರಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 34070 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 16899 ಯುವ ಮತದಾರರ ಏರಿಕೆಯಾಗಿದೆ. ಹಾಗೆಯೇ, 16726 ಮತದಾರರು ಮೃತರಾಗಿದ್ದಾರೆ. 19482 ಸ್ಥಳಾಂತರ, 6495 ಮತದಾರರು ಪುನರಾವರ್ತನೆ ಇದ್ದು, ಜಿಲ್ಲೆಯಲ್ಲಿ ಒಟ್ಟು 42,704 ಮತದಾರರನ್ನು ಕೈ ಬಿಡಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲೆಯಲ್ಲಿ 31631 ವಿಶೇಷಚೇತನ ಮತದಾರರಿದ್ದಾರೆ. 1148 ಸೇವಾ ಮತದಾರರು. ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳ ಸೇರಿ 2862 ಗಣ್ಯ ಮತದಾರರನ್ನು ಪಟ್ಟಿ ಮಾಡಲಾಗಿದೆ ಎಂದರು.

10 ಮತಗಟ್ಟೆ ಹೆಚ್ಚಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ 2905 ಮತಗಟ್ಟೆಗಳಿದ್ದವು. 10 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ. ಮತದಾರರಿಗೆ ಗೊಂದಲವಾಗದಂತೆ ಮತಗಟ್ಟೆ ಕೇಂದ್ರದಲ್ಲಿ ಹೆಸರು, ಮತದಾರರ ಸಂಖ್ಯೆ ನಮೂದಿಸಲಾಗುವುದು. ಮಾಹಿತಿ ನೀಡಲು ಸಿಬ್ಬಂದಿ ನಿಯೋಜಿಸುವುದಾಗಿ ಅವರು ಹೇಳಿದರು.

ಅರ್ಹ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗವು ನಿಗದಿಪಡಿಸಿದ ದಿನಾಂಕದವರೆಗೂ ಸೇರ್ಪಡೆಗೆ ಅವಕಾಶವಿದೆ. ಈ ಮೊದಲು ಜನವರಿ 1ರ ತನಕ 18 ವರ್ಷ ಪೂರ್ಣಗೊಂಡವರು ಸೇರ್ಪಡೆಯಾಗಬಹುದಿತ್ತು. ಈಗ ಏಪ್ರಿಲ್ 1ರ ತನಕ ಅವಕಾಶ ನೀಡಲಾಗಿದೆ. ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ಪಟ್ಟಿಯಲ್ಲಿ ತಮ ಹೆಸರು ಖಾತ್ರಿ ಮಾಡಿಕೊಳ್ಳಲು ಜಿಲ್ಲಾ ಸಹಾಯವಾಣಿ 1077, ಮತದಾರರ ಪಟ್ಟಿಯ ಪರಿಷ್ಕರಣೆ ಸಹಾಯವಾಣಿ 1950 ಸಂಪರ್ಕಿಸಬಹುದು ಎಂದರು.

2024ರ ಏಪ್ರಿಲ್ 1 ರಂದು 18 ವರ್ಷ ಪೂರ್ಣಗೊಂಡವರು ವೋಟರ್ ಹೆಲ್ಪ್ ಲೈನ್ ಆ್ಯಪ್ ಅಥವಾ ಬಿಎಲ್ಒ ಸಂಪರ್ಕಿಸಿ ಗರುಡಾ ಆ್ಯಪ್ ಮುಖಾಂತರ ನೋಂದಾಯಿಸಿಕೊಳ್ಳಬೇಕು. ಎಪಿಕ್ ಮುಖಾಂತರ ಮತದಾರರ ಗುರುತಿನ ಚೀಟಿ ತಲುಪಿಸಲಾಗುತ್ತದೆ. ಅಧಿಕೃತ ಜಾಲತಾಣ

25 ರಂದು ರಾಷ್ಟ್ರೀಯ ಮತದಾರರ ದಿನ

ಮತದಾನದ ಪ್ರಮಾಣ ಹೆಚ್ಚಿಸಲು ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಯುವ ಮತದಾರರಿಗೆ ಗುರುತಿನ ಚೀಟಿ ವಿತರಣೆ, ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್ಒಗಳನ್ನು ಅಭಿನಂದಿಸಲಾಗುವುದು ಎಂದು ಅವರು ಹೇಳಿದರು.

ವಿದ್ಯುನಾನ ಮತಯಂತ್ರಗಳನ್ನು ಕಾಲ ಕಾಲಕ್ಕೆ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಜತೆಗೆ ಅರಿವು ಮೂಡಿಸಲಾಗುತ್ತಿದೆ. ಪ್ರಥಮ ಹಂತದ ಪರಿಶೀಲನೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಶೇ.10 ಸಂಖ್ಯೆಯ ಮತಯಂತ್ರಗಳು, ವಿವಿ ಪ್ಯಾಟ್ ಗಳನ್ನು ಬಳಸಲಾಗುತ್ತಿದೆ ಎಂದರು.

ಲೋಕಸಭಾ ಚುನಾವಣೆಯ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ಧತೆ ಕಾರ್ಯಗಳು ಚಾಲ್ತಿಯಲ್ಲಿದ್ದು, ಚುನಾವಣೆ ಸಂಬಂಧ ಈಗಾಗಲೇ ನೇಮಕ ಮಾಡಲಾಗಿರುವ ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ತಂಡ, ಸ್ಟಾಟಿಕ್ ಸರ್ವೆಯಲನ್ಸ್ ತಂಡ, ವೀಡಿಯೊ ಸರ್ವೆಯಲನ್ಸ್ ತಂಡಗಳನ್ನು ನೇಮಿಸಲಾಗಿದೆ.

- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ಮೈಸೂರು

Follow Us:
Download App:
  • android
  • ios