ಧಾರವಾಡ: ಲೋಕ ಅದಾಲತ್‌: 1.21 ಲಕ್ಷ ರಾಜೀ ಸಂಧಾನ, ₹97 ಕೋಟಿ ವಸೂಲಿ!

ಜಿಲ್ಲಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಬರೋಬ್ಬರಿ 1,21,186 ಪ್ರಕರಣ ರಾಜೀ ಸಂಧಾನ ಮಾಡುವ ಮೂಲಕ ಒಟ್ಟು .₹97,57,46,183 ವಸೂಲಿ ಮಾಡಲಾಗಿದೆ.

Lok Adalat 1.21 lakh compromise and 97 crore recovery at dharwad rav

ಧಾರವಾಡ (ಫೆ.12) : ಜಿಲ್ಲಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಬರೋಬ್ಬರಿ 1,21,186 ಪ್ರಕರಣ ರಾಜೀ ಸಂಧಾನ ಮಾಡುವ ಮೂಲಕ ಒಟ್ಟು . 97,57,46,183 ವಸೂಲಿ ಮಾಡಲಾಗಿದೆ.

ಅದಾಲತ್‌(Lok Adalat) ಅಂಗವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ(District Legal Services Authority)ರದ ಅಧ್ಯಕ್ಷರಾದ ಕೆ.ಜಿ. ಶಾಂತಿ(K.G.Shanti) ಅವರ ಮಾರ್ಗದರ್ಶನದಲ್ಲಿ ಧಾರವಾಡ 16, ಹುಬ್ಬಳ್ಳಿ 17, ಕುಂದಗೋಳ 1, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 2 ಪೀಠಗಳು ಸೇರಿ ಒಟ್ಟು 38 ಪೀಠಗಳನ್ನು ಸ್ಥಾಪಿಸಲಾಗಿತ್ತು.

ಧಾರವಾಡ: ಕಾನೂನಿಗೆ ಗೌರವ ಕೊಡಬೇಕು, ಹೆದರುವ ಅಗತ್ಯವಿಲ್ಲ: ನ್ಯಾ.ಕೆ.ಜಿ. ಶಾಂತಿ

ಜಿಲ್ಲೆಯ ವಿವಿಧ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ವಿವಿಧ ರೀತಿಯ ರಾಜೀ ಆಗಬಹುದಾದಂತಹ 17,283 ಪ್ರಕರಣ ತೆಗೆದುಕೊಂಡು ಅವುಗಳ ಪೈಕಿ 12,995 ಹಾಗೂ 1,08,191 ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಒಟ್ಟು 1,21,186 ಪ್ರಕರಣ ರಾಜೀ ಸಂಧಾನ ಮಾಡಿಸಲಾಗಿದೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ 2008ರ ಅಸಲು ದಾವೆಯಲ್ಲಿ ಮೇಲ್ಮನವಿ ದಾಖಲಾಗಿದ್ದು, ಅದರಲ್ಲಿ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಮತ್ತು ಸಂಧಾನಕಾರ ವಕೀಲರಾದ ಪ್ರಭಾವತಿ ದೇಸಾಯಿ ಅವರನ್ನೊಳಗೊಂಡ ಪೀಠದಲ್ಲಿ 15 ವರ್ಷದ ಹಿಂದಿನ ಆಸ್ತಿ ವ್ಯಾಜ್ಯವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅಲ್ಲದೆ ಈ ದಾವೆಯಲ್ಲಿ 65 ವರ್ಷದ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ವ್ಯಾಜ್ಯ ಇತ್ಯರ್ಥಪಡಿಸಿಕೊಂಡಿದ್ದಾರೆ.

ಜಿಲ್ಲೆಯ ವಿವಿಧ ಲೋಕ ಅದಾಲತ್‌ ಪೀಠದಲ್ಲಿ 19 ಜೋಡಿಗಳನ್ನು ರಾಜೀ ಸಂಧಾನದ ಮೂಲಕ ಒಂದುಗೂಡಿಸಲಾಗಿದೆ. ನವಲಗುಂದ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಸಂತೋಷ ಎಂ.ಎಸ್‌. ಮತ್ತು ಸಂಧಾನಕಾರ ವಕೀಲರಾದ ಹೊಳೆಯಣ್ಣವರ ಅವರನ್ನೊಳಗೊಂಡ ಪೀಠದಲ್ಲಿ 11 ವರ್ಷದಿಂದ ನ್ಯಾಯಾಲಯದಲ್ಲಿ ಬಾಕಿ ಇದ್ದ 1 ಆಸ್ತಿ ವ್ಯಾಜ್ಯ ದಾವೆ ಮತ್ತು 2 ಹಣ ವಸೂಲಾತಿ ಅಪರಾದ ಪ್ರಕರಣ ಇತ್ಯರ್ಥ ಪಡಿಸಲಾಗಿದೆ.

 

ರಾಷ್ಟ್ರೀಯ ಲೋಕ ಅದಾಲತ್‌: ದಾಖಲೆ 14.8 ಲಕ್ಷ ಕೇಸ್‌ ಇತ್ಯರ್ಥ

ಧಾರವಾಡ, ಹುಬ್ಬಳ್ಳಿ, ನವಲಗುಂದ ಮತ್ತು ಕುಂದಗೋಳ ಕೌಟುಂಬಿಕ ನ್ಯಾಯಾಲಯ ಒಳಗೊಂಡಂತೆ 20 ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿ ಒಂದುಗೂಡಿಸುವಲ್ಲಿ ಮತ್ತು 208 ಆಸ್ತಿ ವ್ಯಾಜ್ಯ ದಾವೆ, 104 ಅಪಘಾತದ ಪರಿಹಾರದ ಪ್ರಕರಣ, 577 ಚೆಕ್‌ ಬೌನ್ಸ್‌ ಪ್ರಕರಣ ಮತ್ತು 820 ಡಿ.ವಿ. ಆಕ್ಟ್ ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸುವಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಶಸ್ವಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪುಷ್ಪಲತ ಸಿ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios