Asianet Suvarna News Asianet Suvarna News

ಧಾರವಾಡ: ಕಾನೂನಿಗೆ ಗೌರವ ಕೊಡಬೇಕು, ಹೆದರುವ ಅಗತ್ಯವಿಲ್ಲ: ನ್ಯಾ.ಕೆ.ಜಿ. ಶಾಂತಿ

ಭಾರತೀಯ ಕಾನೂನಿನ ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಜನರು ಕಾನೂನಿಗೆ ಹೆದರುವ ಅಗತ್ಯವಿಲ್ಲ; ಕಾನೂನನ್ನು ಗೌರವಿಸಿ ಅದರಂತೆ ನಡೆಯಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ. ಶಾಂತಿ ಅವರು ಹೇಳಿದರು.

Law should be respectedNo need to fear says justic KG shanti at dharwad rav
Author
First Published Feb 5, 2023, 11:49 AM IST

ವರದಿ : ಪರಮೇಶ್ವರ ಅಂಗಡಿ‌ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಫೆ.5) : ಭಾರತೀಯ ಕಾನೂನಿನ ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಜನರು ಕಾನೂನಿಗೆ ಹೆದರುವ ಅಗತ್ಯವಿಲ್ಲ; ಕಾನೂನನ್ನು ಗೌರವಿಸಿ ಅದರಂತೆ ನಡೆಯಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ. ಶಾಂತಿ ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ಜಿಲ್ಲಾ ನ್ಯಾಯಾಲಯದ ಸಂಭಾಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಧಾರವಾಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ಸೇರಿದಂತೆ, ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ಒಟ್ಟು 50,944 ಪ್ರಕರಣಗಳು ಬಾಕಿ ಇದ್ದು, ಇವುಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ರಾಜಿ ಮಾಡಿಸಲು ಗುರುತಿಸಿದ ನಂತರ ಒಟ್ಟು 47000 ಕ್ಕಿಂತ ಹೆಚ್ಚು ಪ್ರಕರಣಗಳು ತನಿಖೆಗೆ ಬಾಕಿ ಇವೆ ಎಂದು ಅವರು ಹೇಳಿದರು. 

ಸಚಿವೆ ಶಶಿಕಲಾ ಜೊಲ್ಲೆ ಬ್ಯಾಂಕ್‌ಗೆ ಕನ್ನ: ಖದೀಮರು ಸಿಕ್ಕಿದ್ದು ರೋಚಕ

ಕಳೆದ ಜನವರಿ 2022 ರಿಂದ ಡಿಸೆಂಬರ್ 2022 ರ ವರೆಗೆ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ಗಳಲ್ಲಿ ಪೂರ್ವವ್ಯಾಜ್ಯ ಪ್ರಕರಣ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಒಟ್ಟು 2,08,630 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಇವುಗಳಲ್ಲಿ 619 ಕ್ರಿಮಿನಲ್ ಪ್ರಕರಣಗಳು, 1988 ಚೆಕ್‍ಬೌನ್ಸ್ ಪ್ರಕರಣಗಳು, 110 ಹಣ ವಸೂಲಾತಿ ಪ್ರಕರಣಗಳು, 300 ಅಪಘಾತ ಪರಿಹಾರ ಪ್ರಕರಣಗಳು, 812 ಆಸ್ತಿ ವಿಭಾಗ ದಾವೆ ಪ್ರಕರಣಗಳು, 52 ಕೌಟುಂಬಿಕ ಪ್ರಕರಣಗಳು ಮತ್ತು ಜೀವನಾಂಶ ಹಾಗೂ ಡಿ.ವ್ಹಿ. ಪ್ರಕರಣಗಳ ಪೈಕಿ 169 ಪ್ರಕರಣಗಳು ಸೇರಿವೆ ಎಂದು ಅವರು ತಿಳಿಸಿದರು.

ಕಳೆದ ಸಾಲಿನಲ್ಲಿ 1 ಲಕ್ಷಕ್ಕೂ ಅಧಿಕ ಜನರಿಗೆ ಕಾನೂನು ಅರಿವು ಮೂಡಿಸುವ 555 ಕಾರ್ಯಕ್ರಮಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಲಾಗಿದೆ. ಮತ್ತು ಕಾನೂನು ನೆರವು ಬಯಸಿ ಬಂದ 130 ಜನರಿಗೆ ಪ್ರಾಧಿಕಾರದಿಂದ ವಕೀಲರನ್ನು ನೀಡುವ ಮೂಲಕ ಕಾನೂನು ನೆರವು ನೀಡಲಾಗಿದೆ. ಬರುವ ಫೆ.11 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸುತ್ತಿದ್ದು, ಈ ಸಂದರ್ಭದಲ್ಲಿ ರಾಜಿಗಾಗಿ 28630 ಪೂರ್ವವ್ಯಾಜ್ಯ ಪ್ರಕರಣಗಳನ್ನು ಗುರುತಿಸಲಾಗಿದೆ. ರಾಜಿ ಆಗಬಹುದಾದ ಪ್ರಕರಣಗಳನ್ನು ಗುರುತಿಸಿ, ಕಕ್ಷಿದಾರರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ನ್ಯಾಯಾಧೀಶರು, ನ್ಯಾಯವಾದಿಗಳು ಮತ್ತು ಪ್ರಾಧಿಕಾರದ ಸಿಬ್ಬಂದಿಗಳು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶರು ವಿವರಿಸಿದರು. ಪರಿಣಿತ ನ್ಯಾಯವಾದಿಗಳ ನೆರವು ನೀಡಲು ಕಳೆದ ಜನವರಿ 13 ರಂದು 4 ಜನ ವಕೀಲರ ತಂಡ ಕರ್ತವ್ಯ ನಿರ್ವಹಿಸುವ ಅಭಿರಕ್ಷಕರ ಕಚೇರಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ಹೇಳಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರವು ಅನುಮೋದಿಸಿದ್ದು, ಜನವರಿ 1 ರಿಂದ 11 ರ ವರೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಿದೆ. ಜಿಲ್ಲೆಯ ಇಂತಹ ಪ್ರಕರಣಗಳ ಹೊಂದಿರುವ ವಾಹನ ಸವಾರರು ಮತ್ತು ಮಾಲೀಕರು ತಮ್ಮ ದಂಡ ಮೊತ್ತದ ಶೇ. 50 ರಷ್ಟು ಹಣವನ್ನು ತುಂಬಿ ಮುಕ್ತರಾಗಬೇಕು. ಸರ್ಕಾರದ ಈ ಆದೇಶದ ಸದುಪಯೋಗ ಮಾಡಿಕೊಂಡು ಮುಂದಿನ ದಿನಗಳಲ್ಲಿ ಮತ್ತೇ ಇಂತಹ ಸಂಚಾರಿ ನಿಯಮ ಉಲ್ಲಂಘಿಸಿ, ಅಪರಾಧ ಮಾಡದಂತೆ ಅವರು ತಿಳಿಸಿದರು.

ಉಪ ಪೊಲೀಸ್ ಆಯುಕ್ತ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, 2019 ರಿಂದ 2022 ರವರೆಗೆ ಮಹಾನಗರ ವ್ಯಾಪ್ತಿಯಲ್ಲಿ ಒಟ್ಟು 3,25,406 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಇವುಗಳಿಂದ ರೂ.15,91,64,550 ದಂಡ ಮೊತ್ತ ಬಾಕಿ ಇದೆ. ಸರ್ಕಾರ ಹೊರಡಿಸಿರುವ ದಂಡ ರಿಯಾಯಿತಿಯ ಆದೇಶದಿಂದ ಸುಮಾರು 7.50 ಕೋಟಿಗಿಂತ ಹೆಚ್ಚು ಮೊತ್ತ ಜಮೆ ಆಗುತ್ತದೆ. ಈಗಾಗಲೇ ಕಳೆದ ಎರಡು ದಿನಗಳಿಂದ ಅನೇಕ ಜನ ತಮ್ಮ ದಂಡದ ಮೊತ್ತವನ್ನು ಭರಿಸುತ್ತಿದ್ದಾರೆ. ಆದರೆ ಪ್ರಕರಣಗಳ ಸಂಖ್ಯೆಯನ್ನು ನೋಡಿದಾಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಕಿದಾರರು ಹಣ ಕಟ್ಟಬೇಕಾಗುತ್ತದೆ ಎಂದು ಅವರು ಹೇಳಿದರು ದಂಡದ ಮೊತ್ತವನ್ನು ರಿಯಾಯಿತಿಯಲ್ಲಿ ತುಂಬುವ ದಿನಾಂಕವು ಫೆ.11 ಆಗಿರುವುದರಿಂದ ಬಾಕಿ ಹೊಂದಿರುವ ಬಾಕಿದಾರರು ತಮ್ಮ ಮೊತ್ತವನ್ನು ಹುಬ್ಬಳ್ಳಿ-ಧಾರವಾಡ ಒನ್, ಕರ್ನಾಟಕ ಒನ್, ಅವಳಿ ನಗರದ ಸಂಚಾರಿ ಪೊಲೀಸ್ ಠಾಣೆ ಹಾಗೂ ಪಿಡಿಎ ಮಷೀನ್ ಹೊಂದಿರುವ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿಯ ಬಳಿಯೂ ಭರಿಸಬಹುದಾಗಿದೆ. 

ಫೆ.11 ರ ನಂತರ ಬಾಕಿದಾರರು ದಂಡದ ಪೂರ್ಣ ಮೊತ್ತವನ್ನು ತುಂಬ ಬೇಕಾಗುತ್ತದೆ. ಆದ್ದರಿಂದ ನಿಗದಿತ ದಿನಾಂಕದೊಳಗೆ ದಂಡದ ಮೊತ್ತವನ್ನು ಭರಿಸಿ ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಿಸಿಪಿ ಗೋಪಾಲ ಬ್ಯಾಕೋಡ ತಿಳಿಸಿದರು. 

ಮೊದಲ ಪತ್ನಿ ಇದ್ರೂ ಅಪ್ರಾಪ್ತೆ ಜತೆ ಮದುವೆ; ಎಫ್‌ಐಆರ್ ದಾಖಲಾದ ಬಳಿಕ ನಾಪತ್ತೆ

ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪೊಲೀಸ್ ಪಾಟೀಲ ಮಾತನಾಡಿ, ಕಾನೂನು ಪಾಲನೆ ಹಾಗೂ ನ್ಯಾಯಯುತ ನಿರ್ಣಯಗಳಿಗೆ ವಕೀಲರ ಸಂಘವು ಸದಾ ಬೆಂಬಲಿಸುತ್ತಾ ಬಂದಿದೆ. ರಾಷ್ಟ್ರೀಯ ಲೋಕ ಅದಾಲತ್‍ದಲ್ಲಿ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ವಕೀಲರ ಸಂಘದ ಸದಸ್ಯರು ಸದಾ ಬೆಂಬಲಿಸಿ ಸಹಕಾರ ನೀಡುತ್ತಿದ್ದಾರೆ. ಇದರಿಂದ ವಕೀಲರಿಗೂ ಮತ್ತು ನ್ಯಾಯಾಲಯಕ್ಕೂ ಅನುಕೂಲವಾಗಿದೆ ಎಂದು ಹೇಳಿದರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಂ. ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಭೆ ನಿರ್ವಹಿಸಿದರು.

Follow Us:
Download App:
  • android
  • ios