ಬೆಂಗಳೂರಿನ ಉಚಿತ ಕೊರೋನಾ ಲಸಿಕಾ ಕೇಂದ್ರಗಳ ಪಟ್ಟಿ..ಹತ್ತಿರದಲ್ಲೇ ಇವೆ!
ಬೆಂಗಳೂರಿನಲ್ಲಿ ಕೊರೋನಾ ಲಸಿಕಾ ಕೇಂದ್ರಗಳು/ ನಿಮ್ಮ ಮನೆ ಬಳಿಯಲ್ಲೇ ಲಸಿಕೆ ಸಿಗಲಿದೆ/ ಸರ್ಕಾರದ ವತಿಯಿಂದ ಉಚಿತ ಲಸಿಕೆ/ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ/ ಎಲ್ಲರಿಗೂ ಲಸಿಕೆ ಸರ್ಕಾರದ ಉದ್ದೇಶ
ಬೆಂಗಳೂರು( ಏ. 07) ಕೊರೋನಾ ಲಸಿಕೆಯನ್ನು ಎಲ್ಲರಿಗೂ ತಲುಪಿಸಬೇಕು ಎಂದು ಸರ್ಕಾರ ಸಿದ್ಧತೆ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೊದಲು ಕೊರೋನಾ ವಾರಿಯರ್ಸ್ ಗೆ ನಂತರ ಹಿರಿಯ ನಾಗರಿಕರಿಗೆ ಲಸಿಕೆ ನೀಡುತ್ತಾ ಬರಲಾಯಿತು.
ಬೆಂಗಳೂರಿನಲ್ಲಿಯೂ ಕೊರೋನಾ ಲಸಿಕೆ ನೀಡಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ನಿಮಗೆ ಯಾವ ಲಸಿಕೆ ಅಂದರೆ ಕೋವಾಕ್ಸಿನ್ ಬೇಕೋ? ಅಥವಾ ಕೋವಿಡ್ ಶೀಲ್ಡ್ ಬೇಕೋ? ಎನ್ನುವುದನ್ನು ಆಸ್ಪತ್ರೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಆಸ್ಪತ್ರೆಯಲ್ಲಿ ಲಭ್ಯವಿರುವ ಲಸಿಕೆ ವಿವರವನ್ನು ನೀಡಲಾಗಿದೆ.
ಕೊರೋನಾ ತಡೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ
ಬೆಂಗಳೂರಿನಲ್ಲಿ ಉಚಿತವಾಗಿ ಸರ್ಕಾರದ ವತಿಯಿಂದ ಕೊರೋನಾ ಲಸಿಕೆ ನೀಡಿಕೆ ಕೇಂದ್ರಗಳ ಪಟ್ಟಿ ಇಲ್ಲಿದೆ. ಬಿಬಿಎಂಪಿ ವಲಯಗಳ ಆಧಾರದಲ್ಲಿ ಎಲ್ಲರಿಗೂ ಲಸಿಕೆ ಸಿಗುವಂತೆ ಕೇಂದ್ರಗಳನ್ನು ತೆರೆಯಲಾಗಿದೆ.
ಕೆಂಗೇರಿಯಿಂದ ಹಿಡಿದು ಯಲಹಂಕದವರೆಗೆ.. ಸರ್ಜಾಪುರದಿಂದ ಹಿಡಿದು ಯಶವಂತಪುರದವರೆಗೆ ಝೋನ್ ಗಳನ್ನು ಓಪನ್ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗೆ ಕೆಳಕಂಡ ಕೊಂಡಿಯನ್ನು ಕ್ಲಿಕ್ ಮಾಡಬಹುದು. ನಿಮ್ಮ ಹತ್ತಿರದ ಕೊರೋನಾ ಲಸಿಕೆ ಕೇಂದ್ರ ಹುಡುಕಿಕೊಳ್ಳಬಹುದು .
ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈಮೀರುವ ಮಟ್ಟಕ್ಕೆ ತಲುಪಿದ್ದು ದೆಹಲಿಯಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನ ನಾಲ್ಕು ಸಾವಿರ ಪ್ರಕರಣಗಳು ದಾಖಲಾಗಿದ್ದು ಆತಂಖ ಹೆಚ್ಚಿಸಿದೆ.
ಲಸಿಕಾ ಕೇಂದ್ರಗಳ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ