ಶ್ರಾವಣದಲ್ಲೂ ಮದ್ಯ ಮಾರಾಟ ಜೋರಾಗಿಯೇ ನಡೆದಿದೆ. ಹುಬ್ಬಳ್ಳಿಯಲ್ಲಿ ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ  ಧಾರವಾಡ ಜಿಲ್ಲೆಯಲ್ಲಿ 1,32,648 ಪೆಟ್ಟಿಗೆಗಳು ಮಾರಾಟವಾಗಿವೆ.

ಹುಬ್ಬಳ್ಳಿ (ಸೆ.20): ಶ್ರಾವಣ ಮಾಸದಲ್ಲಿ ಮದ್ಯ ಹಾಗೂ ಮಾಂಸವನ್ನು ದೂರ ಮಾಡಿ ವೃತ ಆಚರಣೆ ಮಾಡಲು ಜನರು ಮುಂದಾಗುತ್ತಾರೆ. ಆದರೇ ಶ್ರಾವಣದಲ್ಲೂ ಮದ್ಯ ಮಾರಾಟ ಜೋರಾಗಿಯೇ ನಡೆದಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ದೇಶಿ ಮದ್ಯ (ಇಂಡಿಯನ್ ಮೇಡ್ ಲಿಕ್ಕರ್) ಮದ್ಯದ ಪೆಟ್ಟಿಗೆಗಳ ಮಾರಾಟ ಕೊಂಚ ಕುಸಿದಿದ್ದು, ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ (ಶ್ರಾವಣದ ಅವಧಿ) ಧಾರವಾಡ ಜಿಲ್ಲೆಯಲ್ಲಿ 1,32,648 ಪೆಟ್ಟಿಗೆಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ 1, 34,275 ಪೆಟ್ಟಿಗೆಗಳು ಮಾರಾಟವಾಗಿದ್ದು, ಪ್ರಮಾಣದಲ್ಲಿ ಕುಸಿತ ಕಂಡಿದೆ. ಆದ್ರೇ 2021ರ ಆಗಸ್ಟ್‌ನಲ್ಲಿ 54,387 ಬಿಯರ್ ಪೆಟ್ಟಿಗೆ ಮಾರಾಟವಾಗಿದ್ದವು. ಈ ವರ್ಷ ಆಗಸ್ಟ್‌ನಲ್ಲಿ 57,968 ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಗಣನೀಯ ಪ್ರಮಾಣದಲ್ಲಿ ಮಾರಾಟದ ಏರಿಕೆ ಕಂಡಿದೆ. ಧಾರವಾಡ ಜಿಲ್ಲೆಯಲ್ಲಿ ಸಿಎಲ್-2, ಸಿಎಲ್-9, ಸಿಎಲ್-7, ಸಿಎಲ್-4, ಎಂಎಸ್ಐಎಲ್ ಸೇರಿ ಒಟ್ಟು 286 ಮದ್ಯ ಮಾರಾಟ ಮಳಿಗೆಗಳು ಇವೆ. ಹುಬ್ಬಳ್ಳಿ ತಾಲೂಕಿನಲ್ಲಿ ಆಗಸ್ಟ್‌ನಲ್ಲಿ 63,511 ಐಎಂಎಲ್ ಮದ್ಯದ ಪೆಟ್ಟಿಗೆಗಳು ಮಾರಾಟವಾಗಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಧಾರವಾಡ ತಾಲೂಕು (40,367 ದೇಶಿ ಮದ್ಯ ಬಾಕ್ಸ್ ಇದೆ. ಕುಂದಗೋಳ ತಾಲೂಕು (8,364 ದೇಶಿ ಮದ್ಯದ ಬಾಕ್ಸ್) ಕೊನೆಯ ಸ್ಥಾನದಲ್ಲಿದೆ.

ಬಿಯರ್ ಖರೀದಿಯಲ್ಲೂ ಹುಬ್ಬಳ್ಳಿಗರು ಹಿಂದುಳಿದಿಲ್ಲ. 34,240 ಬಿಯರ್ ಬಾಕ್ಸ್ ಮಾರಾಟವಾಗಿವೆ. ನಂತರದ ಸ್ಥಾನ ಧಾರವಾಡ (17,347 ಬಿಯರ್ ಪೆಟ್ಟಿಗೆ ), ಕುಂದಗೋಳ ತಾಲೂಕು (1,526 ಬಿಯರ್ ಪೆಟ್ಟಿಗೆ) ಕೊನೆಯ ಸ್ಥಾನದಲ್ಲಿದೆ. ಬಿಯರ್ ಮಾರಾಟ ಕಳೆದ ವರ್ಷಕ್ಕಿಂತ ತುಸು ಹೆಚ್ಚಿಗೆ ಆಗಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಶ್ರಾವಣ ಮಾಸದಲ್ಲಿ ಮದ್ಯ ಕುಡಿಯುವವರ ಸಂಖ್ಯೆ ಕಡಿಮೆ ಎಂಬ ಅಂದಾಜಿದೆ. ಪೂಜೆ, ಪುನಸ್ಕಾರ, ಧಾರ್ಮಿಕ ಆಚರಣೆಯಲ್ಲಿ ಬಹಳಷ್ಟು ಜನರು ತೊಡಗಿರುತ್ತಾರೆ. ಆದರೆ, ಮದ್ಯ ಖರೀದಿ ಭರಾಟೆ ನೋಡಿದರೆ, ಕೆಲ ಜನರು ತಮ್ಮ ಮನದಿಂಗಿತವನ್ನು ಬದಲಾಯಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಯುವಕರು ಬಿಯರ್ ರುಚಿ ಸವಿದಿರೋದು ಸಾದ್ಯತೆ ಇದೆ ಅಂತಾರೆ.

ಪಾರ್ಟಿಗಾಗಿ ತೆರಳಿದ್ದಾಗ ತೆಪ್ಪ ಮುಳಗಿ ಇಬ್ಬರ ಸಾವು
ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ಜತೆ ಕೆರೆ ಬಳಿ ಪಾರ್ಟಿ ಮಾಡಲು ತೆರಳಿದ್ದ ಖಾಸಗಿ ಶಾಲೆಯ ಇಬ್ಬರು ಬಸ್‌ ಚಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಲ್ಲಫಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

2.43 ಲಕ್ಷ ಎಣ್ಣೆ ಬಾಟಲಿ ಮೇಲೆ ಹರಿದ ರೋಡ್ ರೋಲರ್, ಕ್ಷಣಾರ್ಧದಲ್ಲೇ 5 ಕೋಟಿ ಮೌಲ್ಯದ ಮದ್ಯ ನಾಶ!

ಗೊಲ್ಲಹಳ್ಳಿ ನಿವಾಸಿ ಶಂಕರ್‌(35) ಮತ್ತು ಹೆಮ್ಮಿಗೆಪುರ ನಿವಾಸಿ ಶಿವು (25) ಮೃತರು. ಚಿರಂಜೀವಿ ಎಂಬಾತ ಈಜಿ ದಡ ಸೇರಿದ್ದಾನೆ. ಶಂಕರ್‌, ಶಿವು, ಚಿರಂಜೀವಿ ಹಾಗೂ ಇತರೆ ಮೂವರು ಜೈನ್‌ ಶಾಲೆಯ ಬಸ್‌ ಚಾಲಕರಾಗಿದ್ದಾರೆ. ಶನಿವಾರ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಸಂಜೆ 5.30ರ ಸುಮಾರಿಗೆ ಆರು ಮಂದಿ ಮದ್ಯ ತೆಗೆದುಕೊಂಡು ತಲ್ಲಘಟ್ಟಪುರದ ಹೆಮ್ಮಿಗೆಪುರ ಕೆರೆ ಸಮೀಪ ಪಾರ್ಟಿ ಮಾಡಲು ತೆರಳಿದ್ದರು.

ಠಾಣೆಯಲ್ಲಿಯೇ ಎಣ್ಣೆ ಪಾರ್ಟಿ, ಪೊಲೀಸರ ಪುಂಡಾಟದ ವೀಡಿಯೋ ವೈರಲ್

ಮದ್ಯದ ಅಮಲಿನಲ್ಲಿ ಶಂಕರ್‌, ಶಿವು ಮತ್ತು ಚಿರಂಜೀವಿ ತೆಪದಲ್ಲಿ ಕೆರೆಗೆ ಹೋಗಿದ್ದರು. ನೂರು ಮೀಟರ್‌ನಷ್ಟುಮುಂದಕ್ಕೆ ಸಾಗಿದ ತೆಪ್ಪ ಏಕಾಏಕಿ ಮಗುಚಿಕೊಂಡಿದೆ. ಈ ವೇಳೆ ಮೂವರು ನೀರಿನಲ್ಲಿ ಮುಳಗಿದ್ದಾರೆ. ಈಜು ಕಲಿತಿದ್ದ ಚಿರಂಜೀವಿ ಈಜಿಕೊಂಡು ದಡ ಸೇರಿದ್ದಾನೆ. ಈಜು ಬಾರದ ಶಂಕರ್‌ ಮತ್ತು ಶಿವು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.