2.43 ಲಕ್ಷ ಎಣ್ಣೆ ಬಾಟಲಿ ಮೇಲೆ ಹರಿದ ರೋಡ್ ರೋಲರ್, ಕ್ಷಣಾರ್ಧದಲ್ಲೇ 5 ಕೋಟಿ ಮೌಲ್ಯದ ಮದ್ಯ ನಾಶ!
ಒಂದಲ್ಲ ಎರಡಲ್ಲ ಬರೋಬ್ಬರಿ 2.43 ಲಕ್ಷ ಮದ್ಯ ತುಂಬಿರುವ ಬಾಟಲಿ. ಸರಿಸಮುಮಾರು 6 ಕೋಟಿ ರೂಪಾಯಿ. ಆದರೆ ಒಂದೇ ಸಮನೆ ರೋಡ್ ರೋಲರ್ ಈ ಬಾಟಲಿ ಮೇಲೆ ಹರಿದು, ಎಲ್ಲಾ ಮದ್ಯ ನಾಶಮಾಡಲಾಗಿದೆ. ಈ ಕುರಿತ ವರದಿ ಇಲ್ಲಿದೆ.
ಆಂಧಪ್ರದೇಶ(ಸೆ.15): ಬರೋಬ್ಬರಿ 5.47 ಕೋಟಿ ರೂಪಾಯಿ ಮೌಲ್ಯದ ಮದ್ಯ. ರೋಲರ್ ಈ ಮದ್ಯದ ಬಾಟಲಿ ಮೇಲೆ ಸಾಗುತ್ತಿದ್ದರೆ ಕುಡುಕರ ಕರುಳ್ ಚುರ್ ಎನ್ನುತ್ತಿತ್ತು. 2 ಬಾಟಲಿ ಉಳಿಯಬಾರದಿತ್ತಾ ಅನ್ನೋ ಬಯಕೆ ಮನದಲ್ಲೇ ಮೂಡುತ್ತಿತ್ತು. ಆದರೆ ಬರೋಬ್ಬರಿ 2.43 ಲಕ್ಷ ಮದ್ಯ ತುಂಬಿದ ಬಾಟಲಿಯನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಲಾಗಿದೆ. ಕಾರಣ ಇವೆಲ್ಲಾ ಅಕ್ರಮ ಮದ್ಯ. ಇದೇ ಕಾರಣಕ್ಕೆ ಮೌಲ್ಯ ಕೋಟಿಯಲ್ಲಿದ್ದರೂ, ಪೊಲೀಸರು ಮುಲಾಜಿಲ್ಲದೆ ಮದ್ಯದ ಮೇಲೆ ರೋಡ್ ರೋಲರ್ ಹರಿಸಿ ನಾಶ ಮಾಡಿದ್ದಾರೆ. ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯ ನಂದಿಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಕ್ರಮ ಮದ್ಯ ಪತ್ತೆ ಹಚ್ಚಿ ನಾಶ ಮಾಡಿದ ಪೊಲೀಸರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ತೆಲಂಗಾಣದಿಂದ(Telanagana) ಆಂಧ್ರ ಪ್ರದೇಶಕ್ಕೆ(Andhra Pradesh) ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯಗಳ(illicit Liquor) ಮೇಲೆ ನಿರಂತರವಾಗಿ ಪೊಲೀಸರು(Police) ದಾಳಿ ಮಾಡುತ್ತಿದ್ದಾರೆ. ಈ ಕುರಿತು ಮಾಹಿತಿ ಪಡೆದ ಆಂಧ್ರ ಪ್ರದೇಶ ಪೊಲೀಸರು ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಕಠಿಣ ತಪಾಸಣೆ ನಡೆಸಲು ಸೂಚಿಸಿದ್ದಾರೆ. ತೆಲಂಗಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಕೆಲವೇ ದಿನಗಳಲ್ಲಿ ಈ ಮದ್ಯದ ಬಾಟಲಿ ಸಂಖ್ಯೆ 2.43 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಮೌಲ್ಯ 5.47 ಕೋಟಿಯಾಗಿದೆ.
Viral Video: ಮದ್ಯದಂಗಡಿ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು: ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು
ಅಕ್ರಮವಾಗಿ ವಶಪಡಿಸಿಕೊಂಡ ಮದ್ಯ ತುಂಬಿದ ಬಾಟಲಿಗಳನ್ನು ಆಂಧ್ರ ಪ್ರದೇಶ ಪೊಲೀಸರು(Police) ರಸ್ತೆ ಮೇಲಿಟ್ಟು ರೋಡ್ ರೋಲರ್(Road Roller) ಹರಿಸಿ ನಾಶಪಡಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಣೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಕುರಿತು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ಯಾವುದೇ ರೀತಿ ಅಕ್ರಮ ಮದ್ಯಮಾರಾಟ ಹಾಗೂ ಸಾಗಾಣೆಗೆ ಅವಕಾಶ ನೀಡಬಾರದು ಎಂದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಸತತ ದಾಳಿ ನಡೆಸುತ್ತಿದ್ದಾರೆ.
ಅಕ್ರಮ ಮದ್ಯ ಸಾಗಾಟ: ಬಂಧನ
ತೆಲಂಗಾಣಾದ ವಾರಂಗಲ್ ಬನುಪೇಟ್ ಜಗನ್ ಮೋಹನ್ ರಾಮನ್ ಪೆಟ್ ಬಂಧಿತ ಆರೋಪಿಯಾಗಿದ್ದಾನೆ. 474 ಲೀ.ಗೋವಾ ಮದ್ಯ ಹಾಗೂ 18 ಲೀ ಗೋವಾ ಪೆನ್ನಿ ಹಾಗೂ ಖಾಲಿ(ಸ್ಕ್ರ್ಯಾಪ್) ಬಾಟಲಿಗಳನ್ನು ಜಪ್ತು ಮಾಡಲಾಗಿದೆ. ಮದ್ಯದ ಅಂದಾಜು ಮೌಲ್ಯ .63,4000, ಗೋವಾ ಪೆನ್ನಿ ಮೌಲ್ಯ .7,200 ಹಾಗೂ ವಾಹನದ ಮೌಲ್ಯದ .10,0000 ಸ್ಕ್ರ್ಯಾಪ್ ಬಾಟಲಿಗಳ ಮೌಲ್ಯ .4,4000 ಒಟ್ಟೂಮೌಲ್ಯ .16,86000 ಆಗಿದೆ.
ಪಾರ್ಟಿ ಶುರು...ಇನ್ನು ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಮದ್ಯ, ಸರ್ವೀಸ್ ಆರಂಭಿಸಿದ ಬೂಜಿ ಕಂಪನಿ!
ಅಕ್ರಮ ಮದ್ಯ ದಾಸ್ತಾನಿನ ಮೇಲೆ ದಾಳಿ: ಇಬ್ಬರ ವಿರುದ್ಧ ಪ್ರಕರಣ
ಕೊಟ್ಟೂರು ತಾಲೂಕಿನ ಕುಡಿತಿನ ಮಗ್ಗಿ ಗ್ರಾಮ ಬಳಿ ಇರುವ ಡಾಬಾದಲ್ಲಿ ಅಕ್ರಮ ಮದ್ಯ ದಾಸ್ತಾನು ಇರಿಸಿಕೊಂಡ ಮಾಹಿತಿ ಮೇರೆಗೆ ಕೊಟ್ಟೂರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿಜಯ ಕೃಷ್ಣ ಶನಿವಾರ ಸಂಜೆ ಡಾಬಾದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ವಿಸ್ಕಿ ಬಾಟಲ್‌ಗಳನ್ನು ವಶಪಡಿಸಿಕೊಂಡು ಪ್ರಕ್ರರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಡಾಬಾದ ಅಶೋಕನ ಮೇಲೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ತಾಲೂಕಿನ ಸುಂಕದಕಲ್ಲು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಲ್ಲೇಶ ಎಂಬಾತನ ಮೇಲೂ ಸಬ್‌ಇನ್‌ಸ್ಪೆಕ್ಟರ್ ದಾಳಿ ಮಾಡಿ 40 ಟೆಟ್ರಾ ಪ್ಯಾಕ್‌ಗಳನ್ನು ವಶಪಡಿಸಿಕೊಂಡು ಕಾಳಾಪುರ ಮಲ್ಲೇಶನ ಎಂಬಾತಾನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.