ಎಂಜಿನಿಯರ್‌ಗಳು, ಗುತ್ತಿಗೆದಾರರು ಗುಣಮಟ್ಟದಲ್ಲಿ ಎಂದೂ ಹೊಂದಾಣಿಕೆ ಮಾಡಿಕೊಳ್ಳದೆ ಪ್ರಾಮಾಣಿಕತೆ ಹಾಗೂ ವಿಶ್ವಾಸರ್ಹತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಕಿವಿಮಾತು ಹೇಳಿದರು. 

ಭಾಲ್ಕಿ (ಸೆ.25): ಎಂಜಿನಿಯರ್‌ಗಳು, ಗುತ್ತಿಗೆದಾರರು ಗುಣಮಟ್ಟದಲ್ಲಿ ಎಂದೂ ಹೊಂದಾಣಿಕೆ ಮಾಡಿಕೊಳ್ಳದೆ ಪ್ರಾಮಾಣಿಕತೆ ಹಾಗೂ ವಿಶ್ವಾಸರ್ಹತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಕಿವಿಮಾತು ಹೇಳಿದರು. ಪಟ್ಟಣದ ಟೌನ್‌ ಹಾಲ್‌ ಸಭಾಂಗಣದಲ್ಲಿ ಕರ್ನಾಟಕ ಎಂಜನಿಯರ್‌ಗಳ ಸಂಘ ಮತ್ತು ಕರ್ನಾಟಕ ಎಂಜನಿಯರ್‌ಗಳ ಸೇವಾ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಅಭಿಯಂತರರ ದಿನಾಚರಣೆ ಮತ್ತು ತಾಂತ್ರಿಕ ಕಾರ್ಯಾಗಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಇರಬೇಕು. ತಂತ್ರ ಜ್ಞಾನ ಎಷ್ಟೇ ಮುಂದುವರೆದರೂ ಎಂಜನಿಯರ್‌ಗಳು ಇಲ್ಲದೇ ಏನೂ ಮಾಡಲಾಗಲ್ಲ. ಅಭಿವೃದ್ಧಿ ಕೆಲಸಗಳಿಗೆ ಎಂಜನಿಯರ್‌ಗಳ ಅವಶ್ಯಕತೆ ಇದೆ. ಎಂಜನಿಯರ್‌ಗಳು ಪ್ರಾಮಾಣಿಕತೆ, ವಿಶ್ವಾಸರ್ಹತೆಯಿಂದ ಕಾರ್ಯನಿರ್ವಹಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು. ಶಿಸ್ತು, ಯೋಜನಾ ಬದ್ಧ ನಿರ್ಣಯ, ಅಭಿವೃದ್ಧಿಪರ ದೂರದೃಷ್ಟಿ, ಪ್ರಾಮಾಣಿಕತೆ ಕಾರಣದಿಂದ ಇಂದಿಗೂ ನಾವು ವಿಶ್ವೇಶ್ವರಯ್ಯ ಅವರನ್ನು ನೆನಪು ಮಾಡಿಕೊಳ್ಳುತ್ತೇವೆ. ಯುವ ಎಂಜನಿಯರ್‌ಗಳು ಕೂಡ ವಿಶ್ವೇಶ್ವರಯ್ಯರ ದಾರಿಯಲ್ಲಿ ನಡೆಯಬೇಕು. 

ಸ್ಮಶಾನ ಭೂಮಿ ಖರೀದಿ ತಡವಾದ್ರೆ ದೇಣಿಗೆ ಸಂಗ್ರಹಿಸಿ ನೀಡ್ತೇವೆ: ಈಶ್ವರ ಖಂಡ್ರೆ

ಹೊಸ ಚಿಂತನೆಗಳು, ಹೊಸ ಮಾದರಿಯ ಸಂಶೋಧನೆಗಳಿಗೆ ಒತ್ತು ಕೊಡಬೇಕು. ಜಿಲ್ಲೆಯಲ್ಲಿ ಇನಷ್ಟುಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲು ಎಂಜನಿಯರ್‌ಗಳು ಹೊಸ ಚಿಂತನೆ, ಆಲೋಚನೆಗಳು ಮಾಡಬೇಕು ಎಂದು ತಿಳಿಸಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಎಂಜನಿಯರ್‌ಗಳು ಇಲ್ಲದ ಬದುಕು ಊಹಿಸಿಕೊಳ್ಳುವುದು ಕಷ್ಟ. ಸುಂದರ ಕಟ್ಟಡ, ಜಲಾಶಯ, ಅಣೆಕಟ್ಟು, ರಸ್ತೆ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳಲ್ಲಿ ಎಂಜನಿಯರ್‌ಗಳ ಕೊಡುಗೆ ಶ್ರೇಷ್ಠವಾಗಿದೆ ಎಂದು ತಿಳಿಸಿದರು.

ಧಾರವಾಡ ಜಿಎಂಎಸ್‌ ನಿರ್ದೇಶಕ ಎಸ್‌ಬಿ ಯಳಸಂಗಿಮಠ, ಕಲಬುರಗಿ ಕೆಬಿಎನ್‌ ಎಂಜನಿಯರಿಂಗ್‌ ಪ್ರಾಂಶುಪಾಲ ಡಾ. ಎಸ್‌. ಕಮಲ್‌ ಆಝುಮ್‌ ಉಪನ್ಯಾಸ ನೀಡಿದರು. ಕಲಬುರಗಿ ವೃತ್ತದ ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ವಿಭಾಗದ ಅಧೀಕ್ಷಕ ಅಭಿಯಂತರ ರಾಜು ಡಾಂಗೆ, ವಿಶೇಷ ಸ್ಮನಾನ ಸ್ವೀಕರಿಸಿದ ಭೀಮರಾಯನ ಗುಡಿ ಕೆಬಿಜೆಎನ್‌ಎಲ್‌ ಮುಖ್ಯ ಅಭಿಯಂತರರಾದ ಪ್ರೇಮಸಿಂಗ್‌, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಶಶಿಕಾಂತ ಮಳ್ಳಿ ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ: ಸಿದ್ದು ಮತ್ತೆ ಸಿಎಂ ಅಗ್ತಾರೆ, ರೇವಣ್ಣ

ಬೀದರ್‌ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸುಭಾಷ ಎಲ್‌, ಬೀದರ್‌ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸುರೇಶ ಮೇಧಾ, ಬೀದರ್‌ ಕಾರಂಜಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಶಿವಕುಮಾರ ಸ್ವಾಮಿ, ಬೀದರ್‌ ಗ್ರಾಮೀಣ ಕುಡಿಯುವ ನೀರು ಮತ್ತಿ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ತುಕಾರಾಮ ತ್ಯಾಗಿ, ಬೀದರ್‌ ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ್‌, ಬೀದರ್‌ ನಗರಾಭಿವೃದ್ಧಿ ಕೋಶ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅರುಣ ದಸ್ತಗೊಂಡ್‌, ತಾಪಂ ಅಧಿಕಾರಿ ದೀಪಿಕಾ ನಾಯ್ಕರ್‌ ಇದ್ದರು. ಲೋಕೋಪಯೋಗಿ ಇಲಾಖೆ ಎಇಇ ಶಿವಶಂಕರ ಕಾಮಶೆಟ್ಟಿಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ಠಮಕೆ ನಿರೂಪಿಸಿದರೆ ನಿವೃತ್ತ ಎಂಜನಿಯರ್‌ ವಿಲಾಸಕುಮಾರ ಮಾಶೆಟ್ಟೆವಂದಿಸಿದರು.