ಶಿವಮೊಗ್ಗ: ಮಲಗಿದ್ದ ವೇಳೆ ರೈತನ ಮೇಲೆ ಚಿರತೆ ದಾಳಿ, ಗಂಭೀರ ಗಾಯ

: ಮಲಗಿದ್ದ ವೇಳೆ ರೈತನ ಮೇಲೆ ಚಿರತೆ ಮಾಡಿರುವ ಘಟನೆ ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಮರಾಠಿ ಗ್ರಾಮದಲ್ಲಿ ನಡೆದಿದೆ.

leopard attacked a farmer while he was sleeping, seriously injured in sagar shivamogga rav


ಶಿವಮೊಗ್ಗ (ಜೂ.30) : ಮಲಗಿದ್ದ ವೇಳೆ ರೈತನ ಮೇಲೆ ಚಿರತೆ ಮಾಡಿರುವ ಘಟನೆ ಸಾಗರ ತಾಲೂಕಿನ ಬ್ಯಾಕೋಡು ಸಮೀಪದ ಮರಾಠಿ ಗ್ರಾಮದಲ್ಲಿ ನಡೆದಿದೆ.

ಗಣೇಶ್ ಕಂಚಿಕೇರಿ ಚಿರತೆ ದಾಳಿಗೆ ಗಾಯಗೊಂಡಿರುವ ರೈತ. ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಕಾಂಡಂಚಿನಲ್ಲಿರುವ ಗ್ರಾಮ. ನಿನ್ನೆ ಮಲಗಿದ್ದ ವೇಳೆ  ಬೇಟೆಗೆ ಬಂದಿರುವ ಚಿರತೆ. ಮೊದಲಿಗೆ ಮಲಗಿದ್ದ ಸಾಕು ನಾಯಿಯ ಮೇಲೆ ದಾಳಿ ಮಾಡಿರುವ ಚಿರತೆ. ಹೆದರಿದ ನಾಯಿ ಜೀವ ಉಳಿಸಿಕೊಳ್ಳಲು ಮನೆಯೊಳಗೆ ನುಗ್ಗಿ ಮೂಲೆ ಸೇರಿಕೊಂಡಿದೆ. ಚಿರತೆ ಮನೆಯೊಳಗೂ ಬಂದು ನಾಯಿಯನ್ನು ಎಳೆದೊಯ್ಯಲು ಯತ್ನಿಸಿದೆ ಈ ವೇಳೆ ರೈತ ಗಣೇಶ್ ಕೈ ಕಚ್ಚಿದೆ. 

ರೈತನ ಕೈಗೆ ಬಲವಾಗಿ ಕಚ್ಚಿದ್ದರಿಂದ ರಕ್ತಸ್ರಾವವಾಗಿದೆ. ಕೂಡಲೇ ಗಾಯಾಳುವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರು: ಚಿರತೆ ದಾಳಿಗೆ ಬೆಚ್ಚುತ್ತಿದ್ದಾರೆ ಕುರಿಗಾಯಿಗಳು!

ಚಿರತೆ ದಾಳಿಗೆ ಕರು ಬಲಿ:

ಯಲ್ಲಾಪುರ: ತಾಲೂಕಿನ ಮಾಗೋಡಿನ ಭಾಗದಲ್ಲಿ ಕಳೆದೆರಡು ತಿಂಗಳುಗಳಿಂದ ಮನೆಯ ಕೊಟ್ಟಿಗೆಗಳಿಗೆ ಚಿರತೆಯೊಂದು ನುಗ್ಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದು, ಮಂಗಳವಾರ ರಾತ್ರಿ ಮಾಗೋಡಿನ ಹೆಬ್ಬಾರಮನೆಯ ನಾಗೇಶ ಗೋಪಾಲ ಭಾಗ್ವತರ ಮನೆಯ ಕೊಟ್ಟಿಗೆಯಲ್ಲಿದ್ದ ಆಕಳ ಕರುವೊಂದನ್ನು ಕೊಂದಿದೆ.

ಕಳೆದ 2-3 ದಿನಗಳಿಂದ ಹುಲಿಯಂತಹ ಪ್ರಾಣಿ ರಾತ್ರಿ ಸಮಯದಲ್ಲಿ ಕೂಗುವುದನ್ನು ಸ್ಥಳೀಯ ಜನ ಕೇಳಿಸಿಕೊಂಡಿದ್ದರು. 2 ತಿಂಗಳ ಹಿಂದಷ್ಟೇ ಇಲ್ಲಿನ ರೈತರ ಕೊಟ್ಟಿಗೆಯಲ್ಲಿನ ಆಕಳನ್ನು ಕೂಡಾ ಯಾವುದೋ ಕಾಡು ಪ್ರಾಣಿ ಬಲಿ ತೆಗೆದುಕೊಂಡಿತ್ತು. ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಅಧಿಕಗೊಳ್ಳುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಇದೀಗ ಅದು ಚಿರತೆ ಎಂದು ತಿಳಿದುಬಂದಿದೆ.

Davanagere: ಚಿರತೆ ದಾಳಿಯಿಂದ ಮಾಲೀಕ ಮತ್ತು ಮನೆ ನಾಯಿಯನ್ನು ಕಾಪಾಡಿದ ಹಸು!

ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಅನೇಕ ಬಾರಿ ಬೋನು ಅಳವಡಿಸಿದ್ದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ಇದೀಗ ಚಿರತೆ ಹಾವಳಿ ಮಿತಿಮೀರಿದ್ದು, ಕೂಡಲೇ ಚಿರತೆ ಸೆರೆಗೆ ಅರಣ್ಯ ಇಲಾಖೆಯವರು ಕಟ್ಟುನಿಟ್ಟಿನ ಕ್ರಮಕೈಗೊಂಡು, ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios