ಎಲೆಚುಕ್ಕಿ ರೋಗ ಹಿನ್ನೆಲೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಆರಗ ಜ್ಞಾನೇಂದ್ರ
ಸಾಂಪ್ರದಾಯಿಕವಾಗಿ ಅಡಕೆಯನ್ನು ಬೆಳೆಯುತ್ತಿದ್ದ ಬೆಳೆಗಾರರಿಗೆ ಒಮ್ಮೆಲೇ ಎದುರಾಗಿರುವ ಎಲೆಚುಕ್ಕಿ ರೋಗದ ಕಠಿಣ ಸವಾಲನ್ನು ಎದುರಿಸುವಲ್ಲಿ ಬೆಳೆಗಾರರು ಆತ್ಮಸ್ಥೆ ೖರ್ಯ ಕಳೆದುಕೊಳ್ಳಬಾರದು. ನಿಮ್ಮ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದÜ ಸಹಾಯಹಸ್ತ ಸದಾ ಸಿದ್ಧ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ (ಅ.16) : ಸಾಂಪ್ರದಾಯಿಕವಾಗಿ ಅಡಕೆಯನ್ನು ಬೆಳೆಯುತ್ತಿದ್ದ ಬೆಳೆಗಾರರಿಗೆ ಒಮ್ಮೆಲೇ ಎದುರಾಗಿರುವ ಎಲೆಚುಕ್ಕಿ ರೋಗದ ಕಠಿಣ ಸವಾಲನ್ನು ಎದುರಿಸುವಲ್ಲಿ ಬೆಳೆಗಾರರು ಆತ್ಮಸ್ಥೆ ೖರ್ಯ ಕಳೆದುಕೊಳ್ಳಬಾರದು. ನಿಮ್ಮ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದÜ ಸಹಾಯಹಸ್ತ ಸದಾ ಸಿದ್ಧ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅಡಿಕೆ ಬೆಳೆಗಾರರಿಗೆ ನೆರವಾಗಿ: ಸರ್ಕಾರಕ್ಕೆ ಎಚ್‌ಡಿಕೆ ಒತ್ತಾಯ
ಆಗುಂಬೆ ಸಮಿಪದ ಗಿಳಿಗಿನಮನೆ ಮಂಜುನಾಥರ ಅಡಕೆ ತೋಟದಲ್ಲಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ, ಮತ್ತು ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಅಡಕೆ ಮರಗಳಿಗೆ ತಗುಲಿರುವ ಎಲೆಚುಕ್ಕಿ ರೋಗದ ಕುರಿತಂತೆ ಶನಿವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಉದ್ಭವವಾಗಿರುವ ದಾರುಣ ಸ್ಥಿತಿ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲಾಗಿದೆ. ಸಾಧ್ಯವಾದರೆ ಅವರನ್ನೇ ಇಲ್ಲಿಗೆ ಕರೆತರುವ ಪ್ರಯತ್ನವನ್ನೂ ಮಾಡಲಾಗುವುದು ಎಂದೂ ಭರವಸೆ ನೀಡಿದರು.
ಕೃಷಿ ವಿಜ್ಞಾನಿಗಳು ನೆರವಾಗಲಿ:
ಸಂಸದ ಬಿ.ವೈ.ರಾಘವೇಂದ್ರ ಅವರು ಅಡಕೆ ಬೆಳೆ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿ, ಮಲೆನಾಡು ಭಾಗದ ರೈತರ ಬದುಕಿನ ಭಾಗವಾಗಿರುವ ಅಡಕೆ ಗಿಡಗಳು ಒಣಗುತ್ತಿವೆ. ಬೆಳೆಗಾರರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಕೃಷಿ ಬಗ್ಗೆ ಹೆಚ್ಚು ಜ್ಞಾನವುಳ್ಳವರೂ ಆಗಿರುವ ರೈತರು ಆತ್ಮಸ್ಥೆ ೖರ್ಯವನ್ನು ಕಳೆದುಕೊಳ್ಳಬಾರದು. ಕೃಷಿ ವಿವಿ ಹಾಗೂ ಕೃಷಿ ವಿಜ್ಞಾನಿಗಳು ರೈತರ ನೆರವಿಗೆ ಮುಂದಾಗಬೇಕು. ಆ ಮೂಲಕ ಸಂಶೋಧನಾ ಕೇಂದ್ರಗಳ ಕಾರ್ಯ ಮತ್ತು ನಿಮ್ಮ ಅರ್ಹತೆ ಮತ್ತು ಪ್ರಯತ್ನ ಸಮಾಜಕ್ಕೆ ತಿಳಿಯುವಂತಾಗಬೇಕು. ಕೃಷಿ ವಿಜ್ಞಾನಿಗಳು ಇಂಥ ಸಮಸ್ಯೆ ಉಲ್ಬಣಗೊಳ್ಳುವ ಮುನ್ನವೇ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಗಮನವನ್ನೂ ಸೆಳೆಯುವುದಾಗಿ ತಿಳಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಗೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್.ಸಿ. ಜಗದೀಶ್ ಮಾತನಾಡಿ. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್ ಮಾತನಾಡಿದರು. ಮಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಹಿಂದಿನಿಂದಲೂ ಕಾಣಿಸಿಕೊಳ್ಳುತ್ತಿದ್ದ ಈ ರೋಗ ಈ ವರ್ಷ ಬಹಳ ಮುಂಚಿತವಾಗಿ ವ್ಯಾಪಿಸಿದೆ. ಅಡಕೆ ಬೆಳೆಗಾರರ ಪ್ರಾತಿನಿಧಿಕ ಸಂಸ್ಥೆಯಾದ ಮಾಮ್ಕೋಸ್ ವತಿಯಿಂದ ಸರ್ಕಾರದ ಗಮನವನ್ನು ಸೆಳೆಯಲಾಗಿದೆ ಎಂದರು.
ಭೂತಾನ್ ಅಡಕೆ ಆಮದಿನಿಂದ ದೇಶಿ ಧಾರಣೆ ಕುಸಿಯಲ್ಲ : ವೈ.ಎಸ್. ಸುಬ್ರಹ್ಮಣ್ಯ
ಹಿರಿಯ ರೈತ ಡಾಕಪ್ಪ ಹೆಗ್ಡೆ, ತಾಲೂಕು ಎಪಿಎಂಸಿ ಮಾಜಿ ಅದ್ಯಕ್ಷ ಹಸಿರುಮನೆ ಮಹಾಬಲೇಶ್ ಆಗುಂಬೆ ಗ್ರಾಪಂ ಸದಸ್ಯ ಶಶಾಂಕಹೆಗ್ಡೆ ಇತರರು ಕೂಡ ಸಲಹೆ ನೀಡಿದರು. ವೇದಿಕೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಿ.ಸಿ.ಪೂರ್ಣಿಮಾ ಇದ್ದರು.