ಶಿವಮೊಗ್ಗ[ಆ.09]  ಜೋಗ ಜಲಪಾತದ ರಾಜಾ-ರಾಣಿ-ರೋರರ್‌- ರಾಕೆಟ್‌ ಕವಲುಗಳ ಪಕ್ಕದಲ್ಲಿರುವ ಪುರಾತನವಾದ ಬಾಂಬೆ ಬಂಗ್ಲೋ ಎದುರಿನ ಗುಡ್ಡ ಕುಸಿಯುತ್ತಿದೆ. ಕಟ್ಟಡ ಜೋಗ ಜಲಪಾತದ ತಳ ಸೇರುವ ಪರಿಸ್ಥಿತಿ ಗುರುವಾರ ನಿರ್ಮಾಣವಾಗಿದೆ.

ಈ ಬಂಗ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.  ಜೋಗ ಜಲಪಾತದ ವ್ಯಾಪ್ತಿಯೇ ಅಂಥಹದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕುಗಳನ್ನು ಒಳಗೊಳ್ಳುತ್ತದೆ.

ಪ್ರಸ್ತುತ ಬ್ರಿಟಿಷರ ಕಾಲದ ಬಾಂಬೆ ಬಂಗ್ಲೆಯಲ್ಲಿ ಪ್ರವಾಸಿಗರಿಗೆ, ವಿಐಪಿಗಳಿಗೆ ವಸತಿ ಅವಕಾಶವನ್ನು ಕೊಡುವುದನ್ನು ನಿಲ್ಲಿಸಲಾಗಿತ್ತು. ಈ ಕಟ್ಟಡದಿಂದ ಜಲಪಾತದ ನಾಲ್ಕು ಕವಲುಗಳು ಜಲಪಾತದ ತಳದತ್ತ ಬೀಳುವುದನ್ನು ನೋಡುವುದೇ ದೊಡ್ಡ ವಿಸ್ಮಯವಾಗಿತ್ತು.

ಇನ್ನು ಆರು ದಿನ ರಣ ಮಳೆ: ಕರಾರುವಕ್ಕಾದ ಭವಿಷ್ಯ

ಕಳೆದ ಐದು ದಿನಗಳ ಮಳೆಯ ರಭಸಕ್ಕೆ ಬಾಂಬೆ ಬಂಗ್ಲೆ ಇರುವ ಗುಡ್ಡ ಕುಸಿಯಲಾರಂಭಿಸಿದೆ.ಇದರಿಂದ ಜೋಗ ಜಲಪಾತದ ಎಡ ಪಕ್ಕದಲ್ಲಿ ಕೃತಕವಾದ ಕೆಂಪು ಮಣ್ಣಿನ ಒಂದು ಧಾರೆ ಪ್ರವಾಸಿಗರಿಗೆ ಕಾಣಲಾರಂಭಿಸಿದೆ. ಗುಡ್ಡದಿಂದ ಹರಿದು ಬರುತ್ತಿರುವ ನೀರು ಬಾಂಬೆ ಬಂಗ್ಲೆಯ ತಳದ ಮಣ್ಣನ್ನು ಕೊರೆದು ಜಲಪಾತವಾಗಿ ಧುಮುಕುತ್ತಿದೆ. ಮಳೆ ಹೀಗೆ ಮುಂದುವರಿದರೆ ಬಂಗ್ಲೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.