Asianet Suvarna News Asianet Suvarna News

Hubballi: ಹವಾಮಾನ ವೈಪರೀತ್ಯ: ಲ್ಯಾಂಡಿಂಗ್‌ ಆಗದ ಸಿಎಂ ಬೊಮ್ಮಾಯಿ ಇದ್ದ ವಿಮಾನ

*  ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿಳಿಯಬೇಕಿದ್ದ ವಿಮಾನ
*  ಆಗಸದಲ್ಲೇ ಮೂರು ಸುತ್ತು ಹೊಡೆದ ವಿಮಾನ 
*  ಹುಬ್ಬಳ್ಳಿ ನಗರದಲ್ಲಿ ಮಂಜು ಕವಿದ ವಾತಾರವಣ 

Landing Problem for CM Basavaraj Bommai Traveling Flight in Hubballi grg
Author
Bengaluru, First Published Dec 10, 2021, 8:50 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಡಿ.10):  ಹವಾಮಾನ ವೈಪರೀತ್ಯದಿಂದ(Climate Change) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಸೇರಿ ಹಲವು ಗಣ್ಯರು ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡ್ ಆಗಲು ಕೆಲ ಕಾಲ ಸಮಸ್ಯೆಯಾದ ಘಟನೆ ನಗರದ ವಿಮಾನ ನಿಲ್ದಾಣದಲ್ಲಿ ಇಂದು(ಶುಕ್ರವಾರ) ನಡೆದಿದೆ. ದಟ್ಟವಾದ ಮಂಜು ಆವರಿಸಿದ್ದರಿಂದ ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ ಆಕಾಶದಲ್ಲೇ ಮತ್ತೆ ಮೂರು ಸುತ್ತು ಹೊಡೆದ ಬಳಿಕ ಲ್ಯಾಂಡ್ ಆಗಿದೆ ಎಂಬ ವಿಚಾರ ತಿಳಿದು ಬಂದಿದೆ. 

"

ವಿಧಾನ ಪರಿಷತ್ ಚುನಾವಣೆ(Vidhan Parishat Election) ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಇನ್ನಿತರ ಗಣ್ಯರು ಬೆಂಗಳೂರಿನಿಂದ(Bengaluru) ಬೆಳಗ್ಗೆ 6 ಗಂಟೆಗೆ ವಿಮಾನದಲ್ಲಿ ಹುಬ್ಬಳ್ಳಿಗೆ(Hubballi) ಹೊರಟಿದ್ದರು. ಈ ವಿಮಾನ ಬೆಳಿಗ್ಗೆ 7.30 ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ ದಟ್ಟವಾದ ಮಂಜು ಆವರಿಸಿದ್ದ ಪರಿಣಾಮ ಬರೋಬ್ಬರಿ 26 ನಿಮಿಷ ತಡವಾಗಿ ಲ್ಯಾಂಡ್(Land) ಆಗಿದೆ. ಇನ್ನು ಅರ್ಧ ಗಂಟೆ ತಡವಾಗಿದ್ದರಿಂದ ವಿಮಾನವನ್ನು(Flight) ಮಂಗಳೂರು(Mangaluru) ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು. ಅಂತಿಮವಾಗಿ ಹುಬ್ಬಳ್ಳಿಯಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ರೂಂನಿಂದ ರನ್ ವೇ ನಲ್ಲಿ ಲ್ಯಾಂಡಿಂಗ್‌ಗೆ ಕ್ಲಿಯರೆನ್ಸ್ ಸಿಕ್ಕಿದೆ. ಹೀಗಾಗಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್‌ ಬಾಕ್ಸ್ ಕೊನೆಗೂ ಪತ್ತೆ!

ಮತದಾನಕ್ಕೆ ಆಗಮಿಸಿದ ಸಿಎಂ

ಇಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ(Haveri) ಜಿಲ್ಲೆಯ ಶಿಗ್ಗಾವಿನಲ್ಲಿ(Shiggoan) ಮತ(Vote) ಚಲಾವಣೆ ಮಾಡಲಿದ್ದಾರೆ. ಹೀಗಿರುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಹವಾಮಾನ ವೈಪರೀತ್ಯರಿಂದ ವಿಮಾನ ತಡವಾಗಿ ಲ್ಯಾಂಡಿಂಗ್ ಆಗಿದೆ. ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಶಿಗ್ಗಾವಿಯಲ್ಲಿ ಮತಚಲಾವಣೆ ಮಾಡುವೆ ಎಂದು ತಿಳಿಸಿದ್ದಾರೆ.
ಇನ್ನು ಲಾಕ್‌ಡೌನ್(Lockdown) ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಮಿಕ್ರೋನ್(Omicorn) ಹಿನ್ನಲೆಯಲ್ಲಿ ಕ್ರಿಸ್ಮಸ್(Christmas) ಹಾಗೂ ಹೊಸ ವರ್ಷ ಆಚರಣೆ (New Year Celebration) ಬಗ್ಗೆ ಯಾವುದೇ ನಿರ್ಬಂಧನೆ ಸದ್ಯಕ್ಕಿಲ್ಲ. ಈ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಬೆಳಗಾವಿ ಅಧಿವೇಶನದ(Belagavi Session) ಬಗ್ಗೆಯೂ ಮಾತನಾಡಿದ ಸಿಎಂ ಬೊಮ್ಮಾಯಿ, ಉತ್ತರ ಕರ್ನಾಟಕದ(North Karnataka) ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಮಹದಾಯಿ(Mahadayi) ವಿಚಾರ ನ್ಯಾಯಾಲಯದಲ್ಲಿದೆ. ಮಹದಾಯಿ ಕಾಮಗಾರಿ ಆರಂಭಿಸಲು ಎನೂ ಮಾಡಬೇಕು ಅದನ್ನು ಮಾಡುತ್ತವೆ. ಬೆಳೆ ಹಾನಿ ಹಿನ್ನಲೆ ಪರಿಹಾರ ವಿತರಣೆ ಆರಂಭವಾಗಿದೆ. ಪರಿಹಾರ ಅನ್ನುವ ಆ್ಯಪ್ ಮೂಲಕ ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

ಚಿಕ್ಕಬಳ್ಳಾಪುರ: ಕುಮಾರಸ್ವಾಮಿಗೆ ಕೈ ಕೊಟ್ಟ ಹೆಲಿಕಾಪ್ಟರ್‌

ಒಂದೂವರೆ ಗಂಟೆ ಆಕಾಶದಲ್ಲೇ ಸುತ್ತಾಡಿ ಲ್ಯಾಂಡ್‌ ಆದ ಅನಂತ್ ಕುಮಾರ್ ಹೆಗಡೆ ಇದ್ದ ವಿಮಾನ

ಹುಬ್ಬಳ್ಳಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸುಮಾರು ಒಂದೂವರೆ ಗಂಟೆ ಆಕಾಶದಲ್ಲಿ ಸುತ್ತಾಡಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದ ಘಟನೆ ಆ.16 ರಂದು ನಡೆದಿತ್ತು. ಹೀಗಾಗಿ ವಿಮಾನದಲ್ಲಿದ್ದ ಬಿಜೆಪಿಯ ಸಂಸದ ಅನಂತ್ ಕುಮಾರ್ ಹೆಗಡೆ(Anantkumar Hegde) ಸೇರಿದಂತೆ 46 ಪ್ರಯಾಣಿಕರು(Passengers) ನಿರಾಳರಾಗಿದ್ದರು.

ಏರ್ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಬೆಂಗಳೂರಿನಿಂದ ಹುಬ್ಬಳ್ಳಿಗೆ ನಿಲ್ದಾಣದಲ್ಲಿ ಬೆಳಿಗ್ಗೆ 8:55ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ 10:25ರವರೆಗೆ ಆಕಾಶದಲ್ಲೇ ಗಿರಕಿ ಹೊಡೆಯುತ್ತಿತ್ತು. ವಿಮಾನದ ಪೈಲಟ್ ಏರ್‌ ಟ್ರಾಫಿಕ್ ಕಂಟ್ರೋಲರ್ ಅನುಮತಿಗೆ ಕಾಯುತ್ತಿದ್ದರು. ಕೊನೆಗೆ ಅನುಮತಿ ಸಿಕ್ಕಿದ್ದರಿಂದ ಸುರಕ್ಷಿತವಾಗಿ ವಿಮಾನ ಲ್ಯಾಂಡ್‌ ಅಗಿತ್ತು.
 

Follow Us:
Download App:
  • android
  • ios