ಚಿಕ್ಕಬಳ್ಳಾಪುರ(ಡಿ.03): ಉಪ ಚುನಾವಣೆ ಪ್ರಚಾರದ ಭರಾಟೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೋಮವಾರ ಹೆಲಿಕಾಪ್ಟರ್‌ ಕೈ ಕೊಟ್ಟಿದೆ. ಗೋಕಾಕ್‌ದಿಂದ ಚಿಕ್ಕಬಳ್ಳಾಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟ ಕುಮಾರಸ್ವಾಮಿ ಅವರಿದ್ದ ಕಾಪ್ಟರ್‌ ಹವಾಮಾನ ವೈಪರೀತ್ಯದಿಂದಾಗಿ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗಿತ್ತು.

ಅಲ್ಲಿಂದ ಮತ್ತೊಂದು ಹೆಲಿಕಾಪ್ಟರ್‌ ಮೂಲಕ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾರೆ. ಆದರೆ, ಚಿಕ್ಕಬಳ್ಳಾಪುರಕ್ಕೆ ಬಂದ ಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಕೆ.ಆರ್‌.ಪೇಟೆಗೆ ಹೋಗಬೇಕಿದ್ದ ಕುಮಾರಸ್ವಾಮಿಯವರು ಚಿಕ್ಕಬಳ್ಳಾಪುರದಿಂದ ಕಾರಿನಲ್ಲಿ ಜಕ್ಕೂರು ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಮತ್ತೊಂದು ಹೆಲಿಕಾಪ್ಟರ್‌ ಮೂಲಕ ಕೆ.ಆರ್‌.ಪೇಟೆಗೆ ತೆರಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಕೇಳಿದ್ದನ್ನೆಲ್ಲ ಕೊಟ್ಟರೂ ಪಕ್ಷ ಬಿಟ್ಟರು: ಸಿದ್ದರಾಮಯ್ಯ ಕಿಡಿ

ಡಿಸೆಂಬರ್ 5 ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದು ಕೊನೆಯ ದಿನದ ಬಹಿರಂಗ ಪ್ರಚಾರ ನಡೆಯಲಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ.

ಮುಂಬೈ ದುಡ್ಡು, ಕಾಂಗ್ರೆಸ್‌ಗೆ ವೋಟು: ಸಿದ್ದರಾಮಯ್ಯ