ಹೇಮಾವತಿ ಇಲಾಖೆಯಿಂದ ಭೂಸ್ವಾಧೀನ: ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪ

ಹೇಮಾವತಿ ಇಲಾಖೆ ವತಿಯಿಂದ ಕಾಲುವೆ ನಿರ್ಮಾಣ ಮಾಡುವ ಸಲುವಾಗಿ 1998 ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಿಗಳಿಗೆ ಪರಿಹಾರ ಧನ ವಿತರಣೆ ಮಾಡುವಲ್ಲಿ ಇಲಾಖೆ ತಾರತಮ್ಯ ಮಾಡಿದೆ ಎಂದು ತಾಲೂಕಿನ ದುಮ್ಮನಹಳ್ಳಿಯ ಹಲವಾರು ರೈತರು ಆರೋಪ ಮಾಡಿದ್ದಾರೆ.

Land acquisition by Hemavati department: Allegation of discrimination in distribution of compensation snr

  ತುರುವೇಕೆರೆ :  ಹೇಮಾವತಿ ಇಲಾಖೆ ವತಿಯಿಂದ ಕಾಲುವೆ ನಿರ್ಮಾಣ ಮಾಡುವ ಸಲುವಾಗಿ 1998 ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಿಗಳಿಗೆ ಪರಿಹಾರ ಧನ ವಿತರಣೆ ಮಾಡುವಲ್ಲಿ ಇಲಾಖೆ ತಾರತಮ್ಯ ಮಾಡಿದೆ ಎಂದು ತಾಲೂಕಿನ ದುಮ್ಮನಹಳ್ಳಿಯ ಹಲವಾರು ರೈತರು ಆರೋಪ ಮಾಡಿದ್ದಾರೆ.

ಹೇಮಾವತಿ ಇಲಾಖೆ ಕಾಲುವೆ ನಿರ್ಮಿಸಲು 1998 ರಲ್ಲೇ ಸರ್ವೆ ನಂಬರ್‌ 21, 22 ರಲ್ಲಿ ರೈತರ ಭೂಮಿಗಳನ್ನು ವಶಪಡಿಸಿಕೊಂಡು ಕಾಲುವೆ ಸಹ ನಿರ್ಮಾಣ ಮಾಡಿದ್ದಾರೆ. ಇದುವರೆಗೂ ಭೂ ಸ್ವಾಧೀನ ಮಾಡಿಕೊಂಡಿರುವ ಸಂಬಂಧ ಪರಿಹಾರ ಧನ ಬಿಡುಗಡೆ ಮಾಡಿರಲಿಲ್ಲ. ಆದರೆ ಈಗ ಪರಿಹಾರ ಧನ ವಿತರಣೆ ಮಾಡುವ ಸಂಬಂಧ ಇಲಾಖೆ ಪ್ರಕಟಣೆ ಹೊರಡಿಸಿದೆ.

ತಾರತಮ್ಯ: ಇಲ್ಲಿಯ ನೂರಾರು ರೈತರಿಗೆ ಪ್ರತಿ ಗುಂಟೆಗೆ ಹತ್ತು, ಹದಿನೈದು ಸಾವಿರ ರು. ಗಳ ಪರಿಹಾರವನ್ನು ಘೋಷಿಸಿದೆ. ಆದರೆ ಯಾವುದೇ ಗಿಡ ಮರಗಳು, ಬೋರ್‌ವೆಲ್‌ಗಳು ಇದ್ದ ಜಾಗವನ್ನು ವಶಪಡಿಸಿಕೊಳ್ಳದಿದ್ದರೂ ಸಹ ಕೆಲವು ರೈತರಿಂದ ಮರ, ಗಿಡ ಮತ್ತು ಬೋರ್‌ವೆಲ್‌ಗಳು ಇರುವ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಲಕ್ಷಾಂತರ ರು. ಗಳ ನಷ್ಟವನ್ನು ಉಂಟು ಮಾಡಲಾಗಿದೆ ಎಂದು ಗ್ರಾಮದ ಮುಖಂಡರಾದ ನಂದೀಪ್‌ ದೂರಿದ್ದಾರೆ.

ಹೇಮಾವತಿ ನಾಲಾ ಎಂಜಿನಿಯರ್‌ಗಳು ಭೂಸ್ವಾಧೀನ ಪಡಿಸಿಕೊಂಡಿರುವ ಕುರಿತು ಹೊಸದಾಗಿ ಪಟ್ಟಿತಯಾರಿಸಿದ್ದಾರೆ. ಬಹುಪಾಲು ರೈತರಿಗೆ ಪ್ರತಿ ಗುಂಟೆಗೆ ಹತ್ತು, ಹದಿನೈದು ಸಾವಿರ ರು. ಗಳನ್ನು ನಿಗದಿಪಡಿಸಿದ್ದಾರೆ. ಆದರೆ ಅದೇ ಪ್ರಕಾರವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಕೆಲವು ರೈತರಿಗೆ ಐದು ಲಕ್ಷ ರು. ಗಳ ಪರಿಹಾರ ಧನ ನೀಡುವಂತೆ ಶಿಫಾರಸು ಮಾಡಿದ್ದಾರೆ. ಈ ರೀತಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಹೇಮಾವತಿ ನಾಲಾ ಅಧಿಕಾರಿಗಳು ಮತ್ತು ರೈತರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಹೇಮಾವತಿ ನಾಲಾ ಇಲಾಖಾ ಅಧಿಕಾರಿಗಳಿಗೆ ಹಾಗೂ ಶಾಸಕರು, ಲೋಕಾಯುಕ್ತರು ಸೇರಿದಂತೆ ಇನ್ನಿತರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ನಂದೀಪ್‌ ತಿಳಿಸಿದ್ದಾರೆ.

ಹೇಮಾವತಿ ಅಧಿಕಾರಿಗಳು ಭೂಸ್ವಾಧೀನ ಮಾಡಿಕೊಂಡಿರುವ ಎಲ್ಲಾ ರೈತರಿಗೂ ಸಮಾನಾಂತರವಾಗಿ ಭೂ ಪರಿಹಾರವನ್ನು ನೀಡಬೇಕೆಂದೂ, ಯಾವುದೇ ತಾರತಮ್ಯ ಮಾಡಬಾರದೆಂದೂ ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ಪುಟ್ಟರಾಜ್‌, ನಂಜಪ್ಪ, ಲಕ್ಕಣ್ಣ, ಶಿವಣ್ಣ, ವಿಜಯ್‌, ಅಜಯ್‌, ಲೋಕೇಶ್‌, ರವಿಚಂದ್ರ, ಶಂಕರಣ್ಣ, ಕುಮಾರ್‌ ಸೇರಿದಂತೆ ಹಲವಾರು ಮಂದಿ ಇದ್ದರು.

ಡಿಸಿಎಂ ಎದುರು ರೈತರ ಕಣ್ಣೀರು

ಬೆಂಗಳೂರು (ಆ.1) :  ‘ನನ್ನ ಫೋಟೋಗೆ ಹಾರ ಹಾಕುವುದಕ್ಕೆ ಮೊದಲು ಭೂಸ್ವಾಧೀನ ಮಾಡಿಕೊಂಡು ನಮಗೆ ಪರಿಹಾರ ನೀಡಿ, ಯೋಜನೆ ಆರಂಭಿಸಿ, ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಬಂದ ಹಣದಿಂದ ನಿರ್ಮಿಸಿದ ಮನೆಯಲ್ಲಿ ವಾಸ ಮಾಡದ ಪರಿಸ್ಥಿತಿ ಎದುರಾಗಿದೆ, ಪೆರಿಫೆರಲ್‌ ರಿಂಗ್‌ ರಸ್ತೆ ಮಾರ್ಗ ಬದಲಿಸುವ ಮೂಲಕ ನಮಗೆ ನೆಮ್ಮದಿ ನೀಡಬೇಕು’

-ಇವು ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆಗೆ ಭೂಮಿ ನೀಡುತ್ತಿರುವ ರೈತರು/ಭೂಮಾಲಿಕರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌(DK Shivakumar) ಸೋಮವಾರ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಭೂಮಾಲಿಕರು ಯೋಜನೆಯಿಂದ ತಮಗಾಗುತ್ತಿರುವ ಸಮಸ್ಯೆಗಳು, ತಮ್ಮ ಬೇಡಿಕೆಗಳನ್ನು ಹೇಳಿಕೊಂಡರು.

ಪೆರಿಫೆರಲ್‌ ರಸ್ತೆ ಯೋಜನೆ ರದ್ದುಗೊಳಿಸಲು ಸಾಧ್ಯವಿಲ್ಲ: ಡಿಸಿಎಂ ಡಿಕೆ ಶಿವಕುಮಾರ

ಶಿವಕುಮಾರ್‌ ಎಂಬುವವರು ಮಾತನಾಡಿ, 2007ರಲ್ಲಿ ಪೆರಿಫೆರಲ್‌ ರಿಂಗ್‌ರಸ್ತೆ ಅಂತಿಮ ನೋಟಿಫಿಕೇಷನ್‌ ಆದ ನಂತರ 5 ಬಾರಿ ಮಾರ್ಗ ಬದಲಿಸಲಾಗಿದೆ. ಪ್ರತಿ ಬಾರಿ ಅಲೈನ್‌ಮೆಂಟ್‌ ಮಾಡಿದಾಗಲೂ ಅಲ್ಲಿ ರಾಜಕಾರಣಿಗಳು, ಪ್ರಭಾವಿಗಳ ಭೂಮಿಯು ಯೋಜನೆಗಾಗಿ ಸ್ವಾಧೀನವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅದಕ್ಕಾಗಿ ಪದೇಪದೆ ಅಲೈನ್‌ಮೆಂಟ್‌ ಬದಲಿಸಲಾಗಿದೆ. ಅದೇ ರೀತಿ ಈಗ ರೈತರ ಭೂಮಿ ಉಳಿಸಲು ಮಾರ್ಗ ಬದಲಿಸಿ ಎಂದು ಆಗ್ರಹಿಸಿದರು.

ದೇಶದ ನೆಮ್ಮದಿಗಾಗಿ ದುಡಿದೆ, ನನಗೇ ನೆಮ್ಮದಿಯಿಲ್ಲ:

ಭೂಮಾಲಿಕರೊಬ್ಬರು ಮಾತನಾಡಿ, 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಿಂದ ಬಂದ ದುಡ್ಡಿನಲ್ಲಿ 2004ರಲ್ಲಿ ನಾಗೇನಹಳ್ಳಿಯಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದೆ. ಆದರೆ, ಮನೆ ಗೃಹ ಪ್ರವೇಶ ಮಾಡಿದ ನಂತರ ಪೆರಿಫೆರಲ್‌ ರಿಂಗ್‌ರಸ್ತೆ ನೋಟಿಫಿಕೇಷನ್‌ ಮಾಡಲಾಯಿತು. ಆಗ ಬಿಡಿಎ ಅಧಿಕಾರಿಗಳು ಬದಲಿ ನಿವೇಶನ ನೀಡುತ್ತೇವೆ ಎಂದು ಹೇಳಿದರು. ಆದರೆ, ಈವರೆಗೆ ನನಗೆ ಬದಲಿ ನಿವೇಶನ ದೊರೆತಿಲ್ಲ. ದೇಶಕ್ಕಾಗಿ ದುಡಿದ ನನಗೆ ಈಗ ನಿದ್ದೆಯಿಲ್ಲದೆ, ನೆಮ್ಮದಿಯಿಲ್ಲದೆ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಬಂದೊದಗಿದೆ ಎಂದು ಅಳಲು ತೋಡಿಕೊಂಡರು.

Latest Videos
Follow Us:
Download App:
  • android
  • ios