ಉಡುಪಿ(ಜು.29): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.

ಆ ಕಾರ್ಯಕ್ರಮದ ಯಶಸ್ವಿಯಾಗಿ ಮತ್ತು ಶೀಘ್ರ ಮಂದಿರ ನಿರ್ಮಾಣ ಕಾರ್ಯವು ನಿರ್ವಿಘ್ನವಾಗಿ ನಡೆಯಲಿ, ಸಮಸ್ತ ಲೋಕಕ್ಕೆ ಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ, ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ವ್‌ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಲಕ್ಷ ತುಲಸೀ ಅರ್ಚನೆಯನ್ನು ನಡೆಸುವುದಾಗಿ ಸಂಕಲ್ಪಿಸಿದ್ದಾರೆ.

ವಿನ್ಯಾಸದಲ್ಲಿ ಸಣ್ಣ ಬದಲಾವಣೆ: ರಾಮ ಮಂದಿರ ಜಗತ್ತಿನಲ್ಲಿಯೇ ಮೂರನೇ ದೊಡ್ಡ ಹಿಂದೂ ದೇಗುಲ ..!

ಅಂದು ನೀಲಾವರ ಗೋಶಾಲೆಯಲ್ಲಿರುವ ತಮ್ಮ ಆರಾಧ್ಯಮೂರ್ತಿ ಶ್ರೀ ರಾಮವಿಠಲ ದೇವರಿಗೆ ಲಕ್ಷ ತುಲಸೀ ಅರ್ಚನೆ ನಡೆಯಲಿದೆ. ಆದ್ದರಿಂದ ಸಾಧ್ಯ ಇರುವ ಭಕ್ತರು, ಆ. 4ರ ಮಧ್ಯಾಹ್ನ 1 ಗಂಟೆಯ ಒಳಗೆ ಉಡುಪಿಯ ಶ್ರೀ ಪೇಜಾವರ ಮಠ ಅಥವಾ ನೀಲಾವರ ಗೋಶಾಲೆಗೆ ತುಳಸಿ ದಳಗಳನ್ನು ತಂದೊಪ್ಪಿಸಬೇಕು ಎಂದು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9449082198 , 9448451023 , 9845895136ನ್ನು ಸಂಪರ್ಕಿಸಬಹುದಾಗಿದೆ.

ಬೆಳ್ಳಿ ಇಟ್ಟಿಗೆ ಇರಿಸಿ ರಾಮಮಂದಿರಕ್ಕೆ ಮೋದಿ ಶಂಕು: ಕಾರ್ಯಕ್ರಮಕ್ಕೆ ಭರದ ಸಿದ್ಧತೆ!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆ.5ರಂದು ಶಿಲಾನ್ಯಾಸ ನೆರವೇರಿಸುವುದು ಖಚಿತವಾಗಿದೆ. ಜೊತೆಗೆ ಸ್ವತಃ ಪ್ರಧಾನಿ ಮೋದಿ ಅವರೇ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ದೇಗುಲ ನಿರ್ಮಾಣ ಮಂಡಳಿ ಟ್ರಸ್ಟಿಗಳಲ್ಲಿ ಒಬ್ಬರಾದ ಸ್ವಾಗಿ ಗೋವಿಂದ ದೇವ್‌ಗಿರಿ ಮಹಾರಾಜ್‌ ತಿಳಿಸಿದ್ದಾರೆ.