ವಿನ್ಯಾಸದಲ್ಲಿ ಸಣ್ಣ ಬದಲಾವಣೆ: ರಾಮ ಮಂದಿರ ಜಗತ್ತಿನಲ್ಲಿಯೇ ಮೂರನೇ ದೊಡ್ಡ ಹಿಂದೂ ದೇಗುಲ ..!

ಮೊದಲೇ ಹೇಳಲಾದ ರಾಮ ಮಂದಿರ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದ ನಂತರ ಇದೀಗ ಅಂತಿಮ ಮಾಡಲಾದ ರೂಪುರೇಷೆಯ ಪ್ರಕಾರ ಅಯೋಧ್ಯೆಯ ರಾಮ ಮಂದಿರ ಜಗತ್ತಿನಲ್ಲಿಯೇ ಮೂರನೇ ಅತ್ಯಂತ ದೊಡ್ಡ ದೇಗುಲವಾಗಿರಲಿದೆ.

ram temple to be 3rd largest hindu shrine in world trust after few changes in design

ಮೊದಲೇ ಹೇಳಲಾದ ರಾಮ ಮಂದಿರ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದ ನಂತರ ಇದೀಗ ಅಂತಿಮ ಮಾಡಲಾದ ರೂಪುರೇಷೆಯ ಪ್ರಕಾರ ಅಯೋಧ್ಯೆಯ ರಾಮ ಮಂದಿರ ಜಗತ್ತಿನಲ್ಲಿಯೇ ಮೂರನೇ ಅತ್ಯಂತ ದೊಡ್ಡ ದೇಗುಲವಾಗಿರಲಿದೆ.

ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ಕಮಲ್ ನಯನ್ ಈ ಬಗ್ಗೆ ಮಾತನಾಡಿ, ಮೊದಲೇ ಮಾಡಿದ್ದ ಮಾಡೆಲ್‌ಗೆ ಕೆಲವು ಬದಲಾವಣೆ ಮಾಡಿದ್ದರೂ, ಮೊದಲಿನ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬೆಳ್ಳಿ ಇಟ್ಟಿಗೆ ಇರಿಸಿ ರಾಮಮಂದಿರಕ್ಕೆ ಮೋದಿ ಶಂಕು: ಕಾರ್ಯಕ್ರಮಕ್ಕೆ ಭರದ ಸಿದ್ಧತೆ!

ಈ ಯೋಜನೆಯ ಮುಖ್ಯ ವಾಸ್ತು ಶಿಲ್ಪಿ ಚಂದ್ರಕಾಂತ್ ಸೋಂಪುರ ಹಾಗೂ ಅವರ ಪುತ್ರರಾದ ನಿಖಿಲ್ ಹಾಗೂ ಆಶಿಶ್ ಹೊಸ ವಿನ್ಯಾಸ ತಯಾರಿಸಲಿದ್ದಾರೆ. ಈಗಾಗಲೇ ಈ ಇಬ್ಬರು ವಾಸ್ತುಶಿಲ್ಪಿಗಳು ರಾಮ ಮಂದಿರದ ವಿನ್ಯಾಸದ ಕರಡು ಪ್ರತಿಯನ್ನು ಮಹಂತ್ ನೃತ್ಯ ಗೋಪಾಲ್ ಅವರಿಗೆ ತೋರಿಸಿದ್ದಾರೆ.

ಹೊಸ ವಿನ್ಯಾಸ್ 140 ಫೀಟ್‌ನಿಂದ 270-280 ಫೀಟ್‌ನಷ್ಟು ಬದಲಾವಣೆ ಹೊಂದಲಿದೆ. ಉದ್ದ 268ರಿಂದ 280-300 ಫೀಟ್ ಆಗಲಿದೆ. ಎತ್ತರವು 128ರಿಂದ 161 ಫೀಟ್‌ನಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios