ಉಡುಪಿ-ಚಿಕ್ಕಮಗಳೂರಲ್ಲಿ ಮಹಿಳಾ ಮತದಾರರೇ ಹೆಚ್ಚು: ಚುನಾವಣಾಧಿಕಾರಿಯೂ ನಾರಿಯೇ..!
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಅಧಿಕವಾಗಿದ್ದು ಮಹಿಳಾ ಅಧಿಕಾರಿಗಳು ಉಸ್ತುವಾರಿಯಲ್ಲಿ ಚುನಾವಣಾ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮಹಿಳಾ ಅಧಿಕಾರಿಗಳಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿರುವ ಮೀನಾ ನಾಗರಾಜ್, ಉಡುಪಿ ಜಿಲ್ಲಾಧಿಕಾರಿ ಆಗಿರುವ ಡಾ.ವಿದ್ಯಾಕುಮಾರಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.02): ಚುನಾವಣೆ ಕಾವು ದಿನದಿಂದ ದಿನಕ್ಕ ಹೆಚ್ಚಾಗುತ್ತಿದೆ. ಗದ್ದುಗೆ ಏರಲು ರಾಜಕೀಯ ಪಕ್ಷಗಳ ತಾಲೀಮು ಕೂಡ ಜೋರಿದೆ. ರಣರಂಗದ ಪೈಪೋಟಿ ನೋಡಿದ್ರೆ ಫಲಿತಾಂಶ ಅಚ್ಚರಿ ಮೂಡ್ಸೋದಂತು ಗ್ಯಾರಂಟಿ. ಇದಕ್ಕೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೂ ಹೊರತಾಗಿಲ್ಲ. ಆಡಳಿತದ ಚುಕ್ಕಾಣಿ ಹಿಡಿಯೋಕೆ ನಾನಾ-ನೀನಾ ಅಂತ ಪಕ್ಷಗಳು ಷಡ್ಯಂತ್ರ ರೂಪಿಸ್ತಿದ್ದಾರೆ. ಈ ನಡುವೆ ಹೆಚ್ಚು ಕದನ ಕುತೂಹಲಕ್ಕೆ ಕಾರಣವಾಗಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಅಧಿಕವಾಗಿದ್ದು ಮಹಿಳಾ ಅಧಿಕಾರಿಗಳು ಉಸ್ತುವಾರಿಯಲ್ಲಿ ಚುನಾವಣಾ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಪುರುಷರುಗಿಂತ ಮಹಿಳಾ ಮತದಾರರೇ ಅಧಿಕ :
ಚಿಕ್ಕಮಗಳೂರು ಲೋಕಸಭಾ ಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿರುವ ಕ್ಷೇತ್ರ. ದಿವಗಂತ ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ರಾಜಕೀಯ ಮರುಹುಟ್ಟು ನೀಡಿದ ಕ್ಷೇತ್ರ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಚುನಾವಣಾ ಆರಂಭದಿಂದ ಇಲ್ಲಿಯ ತನಕ ಮೂವರು ಮಹಿಳೆಯರು ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ಉಡುಪಿಯ ನಾಲ್ಕು ವಿಧಾನಸಭಾ ಕ್ಷೇತ್ರ, ಚಿಕ್ಕಮಗಳೂರಿನ 4 ಕ್ಷೇತ್ರದಲ್ಲೂ ಮಹಿಳೆ ಮತದಾರರೇ ಹೆಚ್ಚುದಿದ್ದಾರೆ.ಚಿಕ್ಕಮಗಳೂರು ಉಡುಪಿ ಕ್ಷೇತ್ರದಲ್ಲಿ 15,65,339 ಒಟ್ಟು ಮತದಾರರು ಇದ್ದು ಪುರುಷರು 759120 ಮತದಾರದ್ದು ಮಹಿಳೆಯರು 806182 ಮತದಾನದ ಹಕ್ಕು ಹೊಂದಿದ್ದಾರೆ. ಪುರುಷರುಗಿಂತ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್ ಆಫರ್ ಮಾಡಿದರೂ ನಾನೇ ನಿರಾಕರಿಸಿದೆ; ಮಾಜಿ ಸಚಿವ ಸಿ.ಟಿ. ರವಿ
ಮಹಿಳಾ ಅಧಿಕಾರಿಗಳು ಉಸ್ತುವಾರಿಯಲ್ಲಿ ಚುನಾವಣೆ :
ಮಲೆನಾಡು, ಕರಾವಳಿ ಹಾಗೂ ಬಯಲು ಪ್ರದೇಶಗಳೊಂದಿಗೆ ಭೌಗೋಳಿಕವಾಗಿ ಹಲವು ವೈಶಿಷ್ಠ್ಯಗಳನ್ನು ಹೊಂದಿರುವ ಚಿಕ್ಕಮಗಳೂರು , ಉಡುಪಿ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೂ ಮಹತ್ವ ಪಡೆದುಕೊಂಡಿದೆ. ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ . ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವಿಸ್ತರಣೆಯಲ್ಲಿ ಅತ್ಯಂತ ದೊಡ್ಡ ಕ್ಷೇತ್ರ, ಘಟ್ಟದ ಕೆಳೆಗೆ, ಮೇಲೆ ಎನ್ನುವ ಭಾವನೆಯೂ ಇದೆ,ಇದರ ಜೊತೆಗೆ ಮಹಿಳಾ ಮತದಾರರೇ ಅಧಿಕವಾಗಿರುವುದು ಮಾತ್ರವಲ್ಲ ಎರಡು ಜಿಲ್ಲೆಯಲ್ಲೂ ಮಹಿಳಾ ಅಧಿಕಾರಿಗಳು ಉಸ್ತುವಾರಿಯಲ್ಲಿ ಚುನಾವಣೆಯ ನಡೆಯುವುದು ಮತ್ತೊಂದು ವಿಶೇಷವಾಗಿದೆ.
ಉಡುಪಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮಹಿಳಾ ಅಧಿಕಾರಿಗಳಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿರುವ ಮೀನಾ ನಾಗರಾಜ್, ಉಡುಪಿ ಜಿಲ್ಲಾಧಿಕಾರಿ ಆಗಿರುವ ಡಾ.ವಿದ್ಯಾಕುಮಾರಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಭಿನ್ನ ಸಂಸ್ಕೃತಿ, ಭಾಷೆ, ಆಚರಣೆಯ ಜನರ ನಡುವೆ ಚುನಾವಣೆ ನಡೆಯುತ್ತಿದೆ. ಇದರ ಜೊತೆಗೆ ಮಹಿಳಾ ಮತದಾರರು, ಮಹಿಳಾ ಅಧಿಕಾರಿಯ ಉಸ್ತುವಾರಿಯಲ್ಲಿ ಚುನಾವಣೆ ನಡೆಯುತ್ತಿರುವುದು ವಿಶೇಷವಾಗಿದೆ.