ಮೈಸೂರು(ಮಾ.01): ಪತಿ ಹಾಗೂ ನಾಲ್ವರು ಮಕ್ಕೊಳೊಂದಿಗೆ ಬೀದಿ ಗುಡಿಸಿ ಮೈಸೂರು ಮಹಿಳಾ ಕಾರ್ಪೊರೇಟರ್ ಸುದ್ದಿಯಾಗಿದ್ದಾರೆ. ತಮ್ಮ ಪತಿ ಮಕ್ಕಳನ್ನು ಕರೆದುಕೊಂಡು ಬಂದು ಬೀದಿ ಸ್ವಚ್ಛ ಮಾಡಿದ್ದಾರೆ. ಹಾಗೆಯೇ ಮಕ್ಕಳು ಸೀಟಿ ಊದಿ ಮನೆ ಮನೆ ಕಸ ಸಂಗ್ರಹಿಸಿದ್ದಾರೆ.

ಸ್ವಚ್ಛ ನಗರಿ ಆಗಬೇಕೆಂಬ ಆಸೆ ಇದ್ದರೂ ನಗರ ಪಾಲಿಕೆಯಿಂದ ಸಹಕಾರ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಕಾರ್ಪೊರೇಟರ್ ಕಸ ಗುಡಿಸಿ ಪ್ರತಿಭಟನೆ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ 61ರ ಸದಸ್ಯೆ ಶೋಭಾ ಸುನೀಲ್‌ರಿ ವಿನೂತನ ಪ್ರಯತ್ನ ಮಾಡಿದ್ದಾರೆ.

ಆಮದು ಕುಸಿತ: ಸ್ಥಳೀಯ ಮಾರ್ಕೆಟ್‌ಗಳಲ್ಲಿ ರೇಷ್ಮೆಗೆ ಬಂಪರ್ ಬೆಲೆ

ಕುಟುಂಬ ಸಮೇತ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಂದಾಗಿ ಕಸ ವಿಲೇವಾರಿ ವಿಳಂಬವಾಗುತ್ತಿದೆ. ವಾರ್ಡ್ ನ ಸ್ವಚ್ಚತೆಗೆ ಪಾಲಿಕೆ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸದಸ್ಯೆ ಶೋಭಾ ಪತಿ ಸುಲೀಲ್, ಮಕ್ಕಳಾದ ರಶ್ಮಿ, ಪ್ರಿಯಾಂಕಾ, ಮಾದೇಶ ಹಾಗೂ ಅಶ್ವಿನಿ ಕಸ ಸಂಗ್ರಹಿಸಿದ್ದಾರೆ. ಮಕ್ಕಳು ಸೀಟಿ ಹೊಡೆದು ಕಸ ಕೇಳಿದ್ದಾರೆ.

ದಂಪತಿ ಕಸದ ಗಾಡಿ ತಳ್ಳಿ ಕಸ ಸಂಗ್ರಹ ಮಾಡಿದ್ದಾರೆ. ಅಗತ್ಯವಾದ ಪೌರ ಕಾರ್ಮಿಕರನ್ನು ಒದಗಿಸುವಂತೆ ಒತ್ತಡ ಹೇರಿದ್ದು, ಪಾಲಿಕೆ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ಕಸ ಸಂಗ್ರಹ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ ಎಂದು ಶೋಭಾ ಸುನೀಲ್ ಹೇಳಿದ್ದಾರೆ.