ಸರ್ಕಾರ ತನ್ನ ರೈತ ವಿರೋಧಿ ನೀತಿಯನ್ನು ಬಂಡತನದಿಂದ ಸಮರ್ಥಿಸಿಕೊಳ್ಳುತ್ತಿದೆ| ದೇಶದ ರೈತರನ್ನು ಬಹು-ರಾಷ್ಟ್ರೀಯ ಕಂಪನಿಗಳಿಗೆ ಬಲಿಕೊಡುವ ಕೆಲಸ ನಡೆದಿದೆ| ಜ. 26ರಂದು ದೆಹಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವೆ: ಕುರುಬೂರು ಶಾಂತಕುಮಾರ| 

ಹುಬ್ಬಳ್ಳಿ(ಜ.18): ಕೇಂದ್ರ ಸರ್ಕಾರ ಜನತಂತ್ರ ವ್ಯವಸ್ಥೆಯನ್ನ ನಾಶ ಮಾಡುತ್ತಿದೆ. ರೈತರ ಹೋರಾಟವನ್ನ ಹತ್ತಿಕ್ಕುವ ಮೂಲಕ ಸರ್ಕಾರ ಅವಿವೇಕದ‌ ಪರಮಾವಧಿಯನ್ನ ಮೆರೆಯುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಕ್ಷಾಂತರ ರೈತರು ಮೈಕೊರೆಯುವ ಚಳಿಯಲ್ಲಿಯೂ ಹೋರಾಟ ನಡೆಸಿದ್ದಾರೆ. ಈವರೆಗೆ 9 ಸಭೆಗಳನ್ನು ಮಾಡಿ ಸರ್ಕಾರ ನಾಟಕೀಯ ವರ್ತನೆ‌ ತೋರುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹರಿಹಾಯ್ದಿದ್ದಾರೆ. 

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ತನ್ನ ರೈತ ವಿರೋಧಿ ನೀತಿಯನ್ನು ಬಂಡತನದಿಂದ ಸಮರ್ಥಿಸಿಕೊಳ್ಳುತ್ತಿದೆ. ದೇಶದ ರೈತರನ್ನು ಬಹು-ರಾಷ್ಟ್ರೀಯ ಕಂಪನಿಗಳಿಗೆ ಬಲಿಕೊಡುವ ಕೆಲಸ ನಡೆದಿದೆ. ಜ. 26ರಂದು ದೆಹಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. 

'ಜೆಡಿಎಸ್‌ ನಾಟಕ ಕಂಪನಿ, ಎಚ್‌ಡಿಕೆ ಅದ್ರ ಬಾಸ್, ಅವರ ಸಿನಿಮಾ ಡೈಲಾಗ್‌ಗೆಲ್ಲಾ ನಾವು ಬಗ್ಗಲ್ಲ'

ಕರ್ನಾಟಕದಿಂದ‌ ಕೆಲ ರೈತ ಮುಖಂಡರು ಸಾಂಕೇತಿಕವಾಗಿ ದೆಹಲಿಗೆ ತೆರಳಲಿದ್ದಾರೆ. ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್, ಬೈಕ್ ಜಾಥಾವನ್ನ ನಡೆಸಲಿದ್ದೇವೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನ ಖಂಡಿಸಿ ರೈತ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ ಎಂದು ಹೇಳಿದ್ದಾರೆ.