ತುಮಕೂರು, [ಫೆ.19]: ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ಕಾರು ಡಿಕ್ಕಿ ಪ್ರಕರಣದಲ್ಲಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

 ಸಿ. ಟಿ. ರವಿ ಕಾರು ಚಾಲಕ ರುದ್ರೇಗೌಡ ಅಲಿಯಾಸ್ ಆಕಾಶ್ ನನ್ನು ಇಂದು [ಮಂಗಳವಾರ] ಮಧ್ಯಾಹ್ನ ಕುಣಿಗಲ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸೋಮವಾರ ತಡರಾತ್ರಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಊರ್ಕೇನಹಳ್ಳಿ ಬಳಿ ನಿಂತಿದ್ದ ಕಾರಿಗೆ ಸಿ.ಟಿ ರವಿ ಕಾರು ಡಿಕ್ಕಿ ಹೊಡೆದಿದೆ.

ಅಪಘಾತ ದುರದೃಷ್ಟಕರ, ನಾನು ಮಲಗಿದ್ದೆ: ಸಿ.ಟಿ. ರವಿ ಪ್ರತಿಕ್ರಿಯೆ

ಈ ಘಟನೆಯಲ್ಲಿ ಕನಕಪುರದ ಶಶಿಕುಮಾರ್ ಹಾಗೂ ಸುನೀಲಕುಮಾರ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪುನೀತಗೌಡ ಎಂಬುವರು ಸೇರಿದಂತೆ ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೂರಿನಲ್ಲಿ ಸಿ.ಟಿ. ರವಿ ಹೆಸರಿಲ್ಲ; ಚಾಲಕನ ವಿರುದ್ಧ ಮಾತ್ರ FIR!

ಸ್ಥಳಕ್ಕೆ ಕುಣಿಗಲ್ ಪೊಲೀಸರು ಆಗಮಿಸಿ ಜಾಗವನ್ನು ಮಹಜರು ಮಾಡಿದ್ದು, ಕಾರು ಚಾಲಕ ರುದ್ರೇಗೌಡ ಅಲಿಯಾಸ್ ಆಕಾಶ್ ವಿರುದ್ಧ ಐಪಿಸಿ ಸೆಕ್ಷನ್ 279. 337. 304[ಆ] ಅಡಿ ದೂರು ದಾಖಲಾಗಿತ್ತು.  

ಆದ್ರೆ ಅಪಘಾತಕ್ಕೆ ಸಂಬಂಧಿಸಿಂತೆ ಶಾಸಕ ಸಿ.ಟಿ. ರವಿ ವಿರುದ್ಧ ದೂರು ದಾಖಲಾಗಿಲ್ಲ. ಸಿ.ಟಿ.ರವಿ ಅವರು ಕೆಲಸದ ಮೇಲೆ ಚೆನ್ನೈಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.