Bengaluru: ಶಕ್ತಿ ಯೋಜನೆಯಿಂದ ಖಾಲಿ ಅಯ್ತ KSRTC ಖಜಾನೆ, ಪೀಣ್ಯ ಬಸ್ ನಿಲ್ದಾಣ ಲೀಸ್‌ಗಿಟ್ಟ ಸರ್ಕಾರ!
ಬೆಂಗಳೂರಿನ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವನ್ನು ಮಾಲ್, ಕಲ್ಯಾಣ ಮಂಟಪ ಮತ್ತು ಖಾಸಗಿ ಆಸ್ಪತ್ರೆಗೆ ನೀಡಲು ಟೆಂಡರ್ ಕರೆಯಲಾಗಿದೆ. ಶಕ್ತಿ ಯೋಜನೆಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕೆಎಸ್‌ಆರ್‌ಟಿಸಿ ಈ ನಿಲ್ದಾಣವನ್ನು ಖಾಸಗಿಯವರಿಗೆ ಲೀಸ್ ನೀಡಲು ಮುಂದಾಗಿದೆ.
ಬೆಂಗಳೂರು (ಜ.2): ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬೆಂಗಳೂರಿನ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಬಂದ್ ಆಗುವ ಅನುಮಾನ ವ್ಯಕ್ತವಾಗಿದೆ. ನಿಲ್ದಾಣವನ್ನು ಶ್ರೀಘ್ರದಲ್ಲಿಯೇ ಮಾಲ್,ಕಲ್ಯಾಣ ಮಂಟಪ, ಖಾಸಗಿ ಅಸ್ಪತ್ರೆಗೆ ನೀಡಲು ಟೆಂಡರ್ ಅಹ್ವಾನಿಸಲಾಗಿದೆ. ಸಂಪೂರ್ಣ ಮೂರು ಅಂತಸ್ತಿನ ಕಟ್ಟಡವನ್ನು ಖಾಸಗಿ ಸಂಸ್ಥೆಗಳಿಗೆ ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಶಕ್ತಿ ಯೋಜನೆಗೆ ಹಣ ಸರಿದೂಗಿಸಲು ಬಸ್ ನಿಲ್ದಾಣ ಖಾಸಗಿ ಸಂಸ್ಥೆಗೆ ಲೀಸ್ ಕೊಡೋದಕ್ಕೆ ಸರ್ಕಾರ ಕೂಡ ಮುಂದಾಗಿದೆ ಎನ್ನುವ ವರದಿಗಳಿವೆ. ಬಹು ನಿರೀಕ್ಷಿತ ಉದ್ದೇಶದಿಂದ ಸ್ಥಾಪಿಸಿದ ಕಟ್ಟಡ ಹರಾಜಿನ ಮೂಲಕ ಖಾಸಗಿಯವರಿಗೆ ಲೀಸ್ ನೀಡಲಾಗುತ್ತದೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ ಕೂಡ ಬಿಕರಿಯಾಯ್ತಾ ಎನ್ನುವ ಅನುಮಾನ ಬಂದಿದೆ.
ಶಕ್ತಿ ಯೋಜನೆಯಿಂದ ಈಗಾಗಲೇ ಕೆಎಸ್‌ಆರ್‌ಟಿಸಿ ಖಜಾನೆ ಖಾಲಿಯಾಗಿದೆ ಅನ್ನೋ ಸೂಚನೆಯಂತೂ ಸಿಕ್ಕಿದೆ. ಒಂದೆಡೆ, ಈಗಾಗಲೇ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದರೆ, ಮತ್ತೊಂದೆಡೆ 2 ಸಾವಿರ ಕೋಟಿ ರೂಪಾಯಿ ಸಾಲವನ್ನು ಪಡೆಯಲು ಕೆಎಸ್‌ಆರ್‌ಟಿಸಿಗೆ ಸರ್ಕಾರ ಅನುಮತಿ ನೀಡಿದೆ. ಈಗ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಅಂತ ಕಟ್ಟಿದ ಕಟ್ಟಡ ಲೀಸ್‌ಗೆ ನೀಡಲು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ಕಟ್ಟಿದ ನಗರದ ಪ್ರಮುಖ ಸ್ಯಾಟಲೈಟ್ ಬಸ್ ನಿಲ್ದಾಣ ಇದಾಗಿತ್ತು. ಬೆಂಗಳೂರು ನಗರಕ್ಕೆ ಬರುವ ಸುಮಾರು 18 ಜಿಲ್ಲೆಗಳ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಸ್ಥಾಪಿಸಿದ ಸ್ಯಾಟಲೈಟ್ ಬಸ್ ನಿಲ್ದಾಣ ಇದು. ಇದಕ್ಕೆ ಬಸವಣ್ಣನವರ ಹೆಸರನ್ನು ಇಡಲಾಗಿತ್ತು. ಈಗ ಹಣಕಾಸು ಸಮಸ್ಯೆ ಹಿನ್ನಲೆಯಲ್ಲಿ ಬಸ್ ನಿಲ್ದಾಣವನ್ನು ಲೀಸ್‌ಗೆ ನೀಡಲು ಕೆಆಸ್‌ಆರ್‌ಟಿಸಿ ನಿರ್ಧಾರ ಮಾಡಿದೆ.
ಶಕ್ತಿ ಯೋಜನೆ ಎಫೆಕ್ಟ್; ಸಾರಿಗೆ ಇಲಾಖೆಗೆ ₹2000 ಕೋಟಿ ಸಾಲ ಪಡೆಯಲು ಒಪ್ಪಿಗೆ ಕೊಟ್ಟ ಸರ್ಕಾರ!
ನಗರದ ಜಾಲಹಳ್ಳಿಯ ಸರ್ಕಲ್ ಬಳಿ ಈ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಹತ್ತಾರು ಎಕರೆಯಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ಇದರ ನಿರ್ಮಾಣ ಮಾಡಲಾಗಿತ್ತು. ಉತ್ತರ ಕರ್ನಾಟಕ ಭಾಗದ ಬಸ್ ಗಳಿಗಾಗಿಯೇ ವಿಶೇಷವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಪೀಣ್ಯ ದಿಂದ ನಗರದ ಒಳಗೆ ಬರುವ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಇದರ ಹಿಂದಿತ್ತು. ಈಗ ಖಾಸಗಿಯವರಿಗೆ ಬಿಟ್ಟುಕೊಡಲು KSRTC ಹರಾಜಿಗೆ ಟೆಂಡರ್ ಆಹ್ವಾನಿಸಲಾಗಿದೆ. ಸಂಸ್ಥೆ ಕಟ್ಟಿದ ಬಸ್ ನಿಲ್ದಾಣವನ್ನೆ ಮದುವೆ ಮಂಟಪ ಮಾಡೋದಕ್ಕೆ ಮುಂದಾಗಿದೆ.
ಬಸ್ ಟಿಕೆಟ್ ದರ ಶೇ.25 ಹೆಚ್ಚಳ ಮಾಡ್ತಾರೆಂದ ಆರ್. ಅಶೋಕ್‌ಗೆ ಬಹಿರಂಗ ಸವಾಲೆಸೆದ ರಾಮಲಿಂಗಾರೆಡ್ಡಿ!