ಗದಗ(ನ.17): KSRTC ಬಸ್‌ ಕೊರತೆಯಿಂದಾಗಿ 50ಕ್ಕೂ ಹೆಚ್ಚು ಪರೀಕ್ಷಾರ್ಧಿಗಳ ಕನಸು ನುಚ್ಚು ನೂರಾಗಿದೆ. ಪರೀಕ್ಷೆಗೆ ಸಿದ್ಧತೆ ನಡೆಸಿ, ಓದಿಕೊಂಡು ನಾಳೆ ಪರೀಕ್ಷೆ ಬರೆಯಬೇಕೆಂದು ಹೊರಟಿದ್ದ ಅಭ್ಯರ್ಥಿಗಳಿಗೆ KSRTC ನಡೆಯಿಂದ ಪರೀಕ್ಷೆ ಬರೆಯುವ ಅವಕಾಶವೇ ತಪ್ಪಿ ಹೋಗಿದೆ.

ಸಿವಿಲ್ ಪೊಲೀಸ್ ಪರೀಕ್ಷೆ  ಬರೆಯಲು 50ಕ್ಕೂ ಹೆಚ್ಚು ಅಭ್ಯರ್ಥಿಗಳು ಗುಲಬುರ್ಗಾಕ್ಕೆ ಹೊರಟ್ಟಿದರು. ಗದಗ ಶಾಸಕ ಎಚ್. ಕೆ. ಪಾಟೀಲ್ ಮಾತಿಗೂ ಕಿಮ್ಮತ್ತು ಕೊಡದ KSRTC ಸಿಬ್ಬಂದಿ ಹೆಚ್ಚುವರಿ ಬಸ್ ಕೊಡಲು ನಿರಾಕರಿಸಿದ ಪರಿಣಾಮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶ ತಪ್ಪಿ ಹೋಗಿದೆ. ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವಂತೆ ಪರೀಕ್ಷಾರ್ಥಿಗಳು ಗದಗ ಶಾಸಕ ಎಚ್. ಕೆ. ಪಾಟೀಲ್ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರು. 

BJP ಪರ ಬ್ಯಾಟ್ ಬೀಸೋಕೆ ರೆಡಿಯಾದ JDS-ಕಾಂಗ್ರೆಸ್ ಸ್ಟಾರ್ ಬ್ಯಾಟ್ಸ್‌ಮನ್‌ಗಳು

ಹೆಚ್ಚುವರಿ ಬಸ್ ಒದಗಿಸುವಂತೆ KSRTC ಸಿಬ್ಬಂದಿಗೆ  ಪರೀಕ್ಷಾರ್ಥಿಗಳು ಮನವಿ ಮಾಡಿದ್ದಾರೆ. ಪರೀಕ್ಷಾರ್ಥಿಗಳ ಮನವಿಗೆ KSRTC ಇಲಾಖೆ ಸ್ಪಂದಿಇಲ್ಲ. ಇದೇ ವಿಚಾರಕ್ಕೆ ಶಾಸಕ ಎಚ್. ಕೆ. ಪಾಟೀಲ್‌ಗೆ ಪರೀಕ್ಷಾರ್ಥಿಗಳು ಫೋನ್‌ ಮಾಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಗದಗದಿಂದ ಯಾದಗಿರಿಗೆ ಹೊರಟ್ಟಿದ ರಾಜ ಹಂಸ ಬಸ್ಸನ್ನು ಅರ್ಧಗಂಟೆಗೂ ಹೆಚ್ಚು ಕಾಲ ಅಭ್ಯರ್ಥಿಗಳು ತಡೆದು ನಿಲ್ಲಿಸಿದ್ದಾರೆ. ಗುಲಬುರ್ಗಾಕ್ಕೆ ಹೆಚ್ಚುವರಿ ಬಸ್ ಬಿಡುವವರೆಗೆ ಬಸ್ ಬಿಡುವುದಿಲ್ಲ ಎಂದು ಅಭ್ಯರ್ಥಿಗಳು ಪಟ್ಟು ಹಿಡಿದಿದ್ದರು. ಆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪೊಲೀಸ್ ಆಗುವ ಕನಸು ಕಂಡ 50 ಕ್ಕೂ ಹೆಚ್ಚು ಪರೀಕ್ಷಾರ್ಥಿಗಳ ಕನಸನ್ನು KSRTC ಇಲಾಖೆ ಮಣ್ಣು ಪಾಲು ಮಾಡಿದೆ.

'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!.

ರಾತ್ರಿ 12.30 ಆದರೂ ಸಿಬ್ಬಂದಿ ಬಸ್ ಒದಗಿಸಿಲ್ಲ. ಗದಗ ಹೊಸಬಸ್ ನಿಲ್ದಾಣದ ಮ್ಯಾನೇಜರ್‌ನ್ನು ಪರೀಕ್ಷಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದರು.

'36 ಸಾವಿರ ಮತಗಳಿಂದ ಸೋತರೂ ಸಿದ್ದು ಆರ್ಭಟ ಇನ್ನೂ ಕಡಿಮೆಯಾಗಿಲ್ಲ'..!